ಕಬ್ಬಿಗೆ ದರ ನಿಗದಿ ವಿಚಾರದಲ್ಲಿ ಸಕ್ಕರೆ ಕಾರ್ಖಾನೆಗಳ ಕಳ್ಳಾಟ – ಸಿಡಿದೆದ್ದ ಕಲಬುರಗಿ ರೈತರು

Public TV
2 Min Read

– 3,160 ರೂ. ನೀಡ್ತೇವೆ ಎಂದ ಕಾರ್ಖಾನೆಗಳು ಯೂಟರ್ನ್

ಕಲಬುರಗಿ: ರೈತನ ಕಬ್ಬಿಗೆ (Sugarcane) ದರ ನಿಗದಿಗೆ ಒಪ್ಪಿಗೆ ಸೂಚಿಸಿದ್ದ ಸಕ್ಕರೆ ಕಾರ್ಖಾನೆಗಳು (Sugar Factory) ಇದೀಗ ಯೂಟರ್ನ್ ಹೊಡೆಯುವ ಮೂಲಕ ಕೊಟ್ಟ ಮಾತು ತಪ್ಪಿವೆ. ಮಾತು ತಪ್ಪಿದ ಸಕ್ಕರೆ ಕಾರ್ಖಾನೆ ಮತ್ತೊಂದೆಡೆ ರೈತ ವಿರೋಧಿ ಸರ್ಕಾರದ ವಿರುದ್ಧ ರೈತರು (Farmers) ಬಿದಿಗಿಳಿದು ಹೋರಾಟ ನಡೆಸಿ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

ಕಬ್ಬಿಗೆ ಬೆಲೆ ನಿಗದಿ ಮಾಡುವಲ್ಲಿ ಸರ್ಕಾರ ಮತ್ತು ಸಕ್ಕರೆ ಕಾರ್ಖಾನೆಗಳ ಮೊಂಡಾಟಕ್ಕೆ ಅನ್ನದಾತ ಅಕ್ಷರಶಃ ಹೈರಾಣಾಗಿದ್ದಾನೆ. ವರ್ಷವಿಡೀ ಕಷ್ಟಪಟ್ಟು ಬೆಳೆದ ಬೆಳೆ ಕಟಾವಿಗೆ ಬಂದು ನಿಂತಿದೆ. ಬೆಳೆ ಕಟಾವಿಗೆ ಬಂದರೂ ದರ ನಿಗದಿಯಾಗದ ಹಿನ್ನೆಲೆ ಹೊಲದಲ್ಲೇ ಬೆಳೆ ಒಣಗಿ ಹೋಗುವ ಆತಂಕ ಎದುರಾಗಿದೆ. ಕಬ್ಬಿಗೆ ದರ ನಿಗದಿ ವಿಚಾರದಲ್ಲಿ ಸರ್ಕಾರ ಮತ್ತು ಸಕ್ಕರೆ ಕಾರ್ಖಾನೆಗಳ ವಿರುದ್ಧ ಅನ್ನದಾತನ ಆಕ್ರೋಶದ ಕಟ್ಟೆ ಒಡೆದಿದೆ. ಇದನ್ನೂ ಓದಿ: ಇಂದಿನಿಂದ ನ.20 ರವರೆಗೆ ಕಲಬುರಗಿ ಸೇರಿ 5 ಜಿಲ್ಲೆಗಳಲ್ಲಿ ಶೀತ ಗಾಳಿ ಎಚ್ಚರಿಕೆ – ಮುನ್ನೆಚ್ಚರಿಕೆ ವಹಿಸಲು ಸೂಚನೆ

ಹೌದು, ಕಲಬುರಗಿ ಜಿಲ್ಲೆಯ ಕಬ್ಬು ಬೆಳೆಗಾರರಿಗೆ ಪ್ರತಿ ಟನ್ ಕಬ್ಬಿಗೆ 3,160 ರೂ. ನೀಡುವುದಾಗಿ ಜಿಲ್ಲಾಡಳಿತದ ಮೂಲಕ ಸಕ್ಕರೆ ಕಾರ್ಖಾನೆಗಳು ಒಪ್ಪಿಕೊಂಡಿದ್ದವು. 3,160 ದರಕ್ಕೆ ರೈತರು ಕೂಡ ಒಪ್ಪಿಕೊಂಡು ಸಮ್ಮನಾಗಿದ್ದರು. ಆದರೆ ಇದೀಗ ಸಕ್ಕರೆ ಕಾರ್ಖಾನೆಗಳು ಕೊಟ್ಟ ಮಾತನ್ನ ತಪ್ಪುವ ಮೂಲಕ ರೈತರಿಗೆ ಪ್ರತಿ ಟನ್ ಕಬ್ಬಿಗೆ 3,160 ರೂ. ಬದಲು 2,900 ರೂ. ದರವನ್ನ ನೀಡುವುದಾಗಿ ಹೇಳಿವೆ. ಅಲ್ಲದೇ ಸರ್ಕಾರದ ಸಹಾಯ ಧನ 50 ರೂ. ಜೊತೆಗೆ ಕಾರ್ಖಾನೆಗಳು 50 ರೂ. ಸೇರಿಸಿ ಉಳಿದ 100 ರೂ. ಆರು ತಿಂಗಳ ಬಳಿಕ ನೀಡುವುದಾಗಿ ಹೇಳುತ್ತಿವೆ. ಇದರಿಂದ ಸಕ್ಕರೆ ಕಾರ್ಖಾನೆಗಳ ವಿರುದ್ಧ ಕಲಬುರಗಿಯಲ್ಲಿ ರೈತರು ಬಿದೀಗಳಿದು ಹೋರಾಟ ನಡೆಸಿದ್ದಾರೆ. ಕಲಬುರಗಿ ಜಿಲ್ಲಾಧಿಕಾರಿ ಕಚೇರಿಯ ಮುಂಭಾಗದಲ್ಲಿ ಕಬ್ಬು ಬೆಳೆಗಾರರು ಬಾಯಿ ಬಡಿದುಕೊಂಡು ಕಿಡಿಕಾರಿದ್ದಾರೆ. ಇದನ್ನೂ ಓದಿ: ಪರಮೇಶ್ವರ್‌ ವಿರುದ್ಧ ಅವಹೇಳನಕಾರಿ ಹೇಳಿಕೆ – ಬಿಜೆಪಿ ಮುಖಂಡ ಸಂತೋಷ್ ಕೊಟ್ಯಾನ್‌ಗೆ ಜಾಮೀನು

ಇನ್ನೂ ಕಬ್ಬಿಗೆ ಬೆಲೆ ನಿಗದಿ ಮಾಡುವಂತೆ ಆಗ್ರಹಿಸಿ ಕಲಬುರಗಿ ಜಿಲ್ಲೆಯ ಐದು ಕಡೆ ರೈತರು ಪ್ರತಿಭಟನೆ ನಡೆಸಿದ್ದಾರೆ. ಅಫಜಲಪುರ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿ ಸಕ್ಕರೆ ಕಾರ್ಖಾನೆ ವಿರುದ್ಧ ಕಿಡಿಕಾರಿದರು. ಇತ್ತ ಅಫಜಲಪುರ ತಾಲೂಕಿನ ಚೌಡಾಪುರ ಗ್ರಾಮದಲ್ಲಿ ಹೆದ್ದಾರಿ ತಡೆದು ಪ್ರತಿಭಟಿಸಲಾಯಿತು. ಅಫಜಲಪುರ ತಾಲೂಕಿನ ಕೆಪಿಆರ್ ಸಕ್ಕರೆ ಕಾರ್ಖಾನೆ ವಿರುದ್ಧ ಆಕ್ರೋಶ ಹೊರಹಾಕಿದರು. ಮತ್ತೊಂದೆಡೆ ಆಳಂದ ತಾಲೂಕಿನ ಎನ್ ಎಸ್‌ಎಲ್ ಸಕ್ಕರೆ ಕಾರ್ಖಾನೆ ಮುಂದೆಯೂ ರೈತರು ಪ್ರತಿಭಟಿಸಿದ್ದಾರೆ. ಜಿಲ್ಲಾಡಳಿತ 3 ದಿನದಲ್ಲಿ ದರ ನಿಗದಿ ಮಾಡದೇ ಇದ್ದರೆ ಮತ್ತೆ ಬೀದಿಗಿಳಿದು ಉಗ್ರವಾದ ಹೋರಾಟ ನಡೆಸುವ ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ಸಿಎಂ ಸಿದ್ದರಾಮಯ್ಯ ಪತ್ನಿ ಆಸ್ಪತ್ರೆಗೆ ದಾಖಲು

Share This Article