ಕಲಬುರಗಿಯಲ್ಲಿ ಭದ್ರಕೋಟೆ ಉಳಿಸಿಕೊಳ್ಳುತ್ತಾ ಕಾಂಗ್ರೆಸ್?

Public TV
2 Min Read

ಕಲಬುರಗಿ: ಕಾಂಗ್ರೆಸ್ ಭದ್ರಕೋಟೆಯಾಗಿದ್ದ ಕಲಬುರಗಿ ಮಹಾನಗರ ಪಾಲಿಕೆಗೆ 2013ರಲ್ಲಿ ನಡೆದ ನಂತರ 2018ರಲ್ಲಿ ಚುನಾವಣೆ ನಡೆಯಬೇಕಿತ್ತು. ಆದರೆ ವಾರ್ಡ್ ವಿಂಗಡನೆ ಹಾಗು ಕೊರೊನಾ ಕಾರಣ ಮೂರು ವರ್ಷಗಳು ತಡವಾಗಿ 2021ರಲ್ಲಿ ಇದೀಗ ನಡೆದಿದೆ.

ಪಕ್ಷೇತರ ಅಭ್ಯರ್ಥಿಗಳು ಕಾಂಗ್ರೆಸ್ ಕೋಟೆ ಛಿದ್ರ ಮಾಡುವ ತವಕದಲ್ಲಿದ್ದಾರೆ. ಕೈ ಅಭ್ಯರ್ಥಿಗಳಿಗೆ ಇದೇ ಮೊದಲ ಬಾರಿ ಜೆಡಿಎಸ್ ಪಕ್ಷ ಅಲ್ಪಸಂಖ್ಯಾತ ರಾಜ್ಯಾಧ್ಯಕ್ಷ ನಾಸಿರ್ ಹುಸೇನ್ ನೇತೃತ್ವದಲ್ಲಿ ಕಣಕ್ಕಿಳಿಸಿದೆ. ಇತ್ತ ಕಳೆದ ಬಾರಿ ಕಲಬುರಗಿ ಉತ್ತರ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದ ಇಲಿಯಾಸ್ ಸೇಟ್ ಬಾಗವಾನ್ ಕೆಲ ತಿಂಗಳ ಹಿಂದೆ ಎಐಎಂಐಎಂ ಪಕ್ಷ ಸೇರಿದ್ದಾರೆ.

ಇನ್ನೊಂದು ಕಡೆ ಯಾವುದೇ ರಾಜಕೀಯ ಪ್ರಭಾವಿ ಮುಖಂಡರನ್ನು ಹೊಂದಿಲ್ಲ ಅಂದ್ರು ಸಹ ಆಪ್ ಪಕ್ಷ ಇದೇ ಮೊದಲ ಬಾರಿಗೆ ಪಾಲಿಕೆ ಫೈಟ್ ಗೆ ಧಮಕ್ಕಿದ್ದು ಬಹುತೇಕ ಕಡೆ ಅಲ್ಪಸಂಖ್ಯಾತರಿಗೆ ಟಿಕೆಟ್ ನೀಡಿದೆ. ಈ ಮೂರು ಪಕ್ಷಗಳು ಬಹುತೇಕ ಕಡೆ ಮುಸ್ಲಿಂ ಸಮುದಾಯ ಹೆಚ್ಚಿರುವ ಕಡೆ ಅದೇ ಸಮುದಾಯದ ಅಭ್ಯರ್ಥಿಗೆ ಟಿಕೆಟ್ ನೀಡಿದ್ದಾರೆ. ಇದು ಕಾಂಗ್ರೆಸ್‍ನ ಕೆಲ ಅಭ್ಯರ್ಥಿಗಳ ಹಿನ್ನಡೆ ಆಗುವದರಲ್ಲಿ ಎರಡು ಮಾತಿಲ್ಲ ಅಂತ ರಾಜಕೀಯ ವಿಶ್ಲೇಷಕರು ಹೇಳ್ತಿದ್ದಾರೆ. ಇದನ್ನೂ ಓದಿ: ಸಿಲಿಕಾನ್ ಸಿಟಿಯಲ್ಲಿ ಮತ್ತೊಂದು ಐಷಾರಾಮಿ ಕಾರು ಅಪಘಾತ

ಕಲಬುರಗಿ ಕಿರೀಟ ಯಾರಿಗೆ..?
* ಒಟ್ಟು ವಾರ್ಡ್ – 55
* ಮ್ಯಾಜಿಕ್ ನಂ- 28
* ಅಭ್ಯರ್ಥಿಗಳು – 276
* ಮತದಾನ – ಶೇ.48
(ಕಾಂಗ್ರೆಸ್ 55, ಬಿಜೆಪಿ 47, ಜೆಡಿಎಸ್ 45, ಇತರೆ 129)

2013ರ ಕಲಬುರಗಿ ಪಾಲಿಕೆ ಫಲಿತಾಂಶ..!
ಕಾಂಗ್ರೆಸ್ -23
ಜೆಡಿಎಸ್ -10
ಬಿಜೆಪಿ -07
ಕೆಜೆಪಿ -07
ಎಸ್‍ಡಿಪಿಐ -01
ಪಕ್ಷೇತರರು -07
(2013ರಲ್ಲಿ ಕಾಂಗ್ರೆಸ್ 23 ಸ್ಥಾನ ಗೆದ್ದು ಪಕ್ಷೇತರರ ಬೆಂಬಲದಿಂದ ಅಧಿಕಾರ ಹಿಡಿದಿತ್ತು.)

ಮ್ಯಾಜಿಕ್ ನಂ. 28
* 1 ಬಿಜೆಪಿ ಸಂಸದರು
* 2 ಬಿಜೆಪಿ ಶಾಸಕರು
* 3 ಎಂಎಲ್‍ಸಿ
* 1 ಕಾಂಗ್ರೆಸ್ ರಾಜ್ಯಸಭಾ ಸದಸ್ಯರು
* 1 ಕಾಂಗ್ರೆಸ್ ಶಾಸಕರು

ಸದ್ಯ ಪಾಲಿಕೆ ಮೇಯರ್ ಸ್ಥಾನದ ಚುಕ್ಕಾಣಿ ಹಿಡಿಯಲು 28 ಸ್ಥಾನಗಳು ಅವಶ್ಯಕವಿದೆ. ಇದರ ಜೊತೆಗೆ ಬಿಜೆಪಿಯ ಓರ್ವ ಸಂಸದ ಉಮೇಶ ಜಾಧವ್, ಇಬ್ಬರು ಶಾಸಕರುಗಳಾದ ದತ್ತಾತ್ರೇಯ ಪಾಟೀಲ್ ಹಾಗು ಗ್ರಾಮೀಣ ಶಾಸಕ ಬಸವರಾಜ್ ಮತ್ತಿಮೂಡ್ ಹಾಗು ಎಂಎಲ್‍ಸಿಗಳಾದ ಬಿ.ಜಿ.ಪಾಟೀಲ್, ಶಶಿಲ್ ನಮೋಶಿ ಹಾಗು ಸುನೀಲ್ ವಲ್ಯಾಪುರಗೆ ಮತ ಚಲಾಯಿಸುವ ಹಕ್ಕಿದೆ. ಈ ಮೂಲಕ ಇಲ್ಲಿ ಬಿಜೆಪಿ ಮ್ಯಾಜಿಕ್ ನಂಬರ್ ತಲುಪಿ ಮೇಯರ್ ಸ್ಥಾನದತ್ತ ನೋಡುತ್ತಿದೆ.

ಇತ್ತ ಕಾಂಗ್ರೆಸ್‍ನಲ್ಲಿ ಸಹ ರಾಜ್ಯಸಭಾ ಸದಸ್ಯ ಮಲ್ಲಿಕಾರ್ಜುನ ಖರ್ಗೆ ಹಾಗು ಕಲಬುರಗಿ ಉತ್ತರ ಶಾಸಕಿ ಖನಿಜ್ ಫಾತಿಮಾ ಇಬ್ಬರು ಮತದಾನದ ಹಕ್ಕು ಹೊಂದಿದ್ದಾರೆ. ಆದರೆ ಲೋಕಸಭಾ ಚುನಾವಣೆ ಬಳಿಕ ಕಳೆದ ಎರಡುವರೆ ವರ್ಷದಿಂದ ಖರ್ಗೆಯವರು ಜಿಲ್ಲೆಯತ್ತ ಮುಖ ಮಾಡಿಲ್ಲ. ಹೀಗಾಗಿ ಮೇಯರ್ ಚುನಾವಣೆ ಮತದಾನಕ್ಕು ಬರುವುದು ಬಹುತೇಕ ಡೌಟ್ ಆಗಿದೆ.

Share This Article
Leave a Comment

Leave a Reply

Your email address will not be published. Required fields are marked *