ಪ್ರವಾಹ ಪರಿಹಾರಕ್ಕೆ ಆಗ್ರಹಿಸಿ ಕಲಬುರಗಿ ಬಂದ್‌ – ಕೇಂದ್ರ ಬಸ್‌ ನಿಲ್ದಾಣಕ್ಕೆ ಹೋರಾಟಗಾರರಿಂದ ಮುತ್ತಿಗೆ

Public TV
1 Min Read

ಕಲಬುರಗಿ: ಪ್ರವಾಹ ಹಾಗೂ ಅತಿವೃಷ್ಟಿ ಹಿನ್ನೆಲೆ ಕಲಬುರಗಿ (Kalaburagi) ಜಿಲ್ಲೆಯನ್ನು ಹಸಿಬರ ಘೋಷಣೆಗೆ ಆಗ್ರಹಿಸಿ ಬಂದ್‌ಗೆ (Protest) ರೈತ ಸಂಘಟನೆಗಳು ಕರೆಕೊಟ್ಟಿವೆ.

ರೈತ ಸಂಘಟನೆಗಳು ಸೇರಿದಂತೆ 15ಕ್ಕೂ ಹೆಚ್ಚು ಸಂಘಟನೆಗಳು ಬಂದ್‌ಗೆ ಬೆಂಬಲ ನೀಡಿವೆ. ಬೆಳ್ಳಂ ಬೆಳಿಗ್ಗೆ ಕೇಂದ್ರಿಯ ಬಸ್ ನಿಲ್ದಾಣಕ್ಕೆ ಹೋರಾಟಗಾರರು ಮುತ್ತಿಗೆ ಹಾಕಿದ್ದಾರೆ. ಬಸ್ ಸಂಚಾರ ಬಂದ್ ಮಾಡಿಸಿ ಕೇಂದ್ರ ಬಸ್ ನಿಲ್ದಾಣದ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಇದನ್ನೂ ಓದಿ: ಕಲಬುರಗಿ | ಪ್ರವಾಹ ಪೀಡಿತ ಪ್ರದೇಶಗಳಿಗೆ ಜೆಡಿಎಸ್ ನಿಯೋಗ ಭೇಟಿ

ಬೆಳಗ್ಗೆ 9 ಗಂಟೆಗೆ ಜಗತ್ ವೃತದಲ್ಲಿ ಹೋರಾಟಗಾರರು ಪ್ರತಿಭಟನೆ ನಡೆಸಲಿದ್ದಾರೆ. ಮಧ್ಯಾಹ್ನ 1 ಗಂಟೆ ಬಳಿಕ ಜಿಲ್ಲಾಧಿಕಾರಿಗಳಿಗೆ ಮನವಿ ಮೂಲಕ ಹಸಿಬರ ಘೋಷಣೆಗೆ ಸರ್ಕಾರದ ಮೇಲೆ ಒತ್ತಡ ಹಾಕಲಿದ್ದಾರೆ. ಇದನ್ನೂ ಓದಿ: ಉ.ಕರ್ನಾಟಕದಲ್ಲಿ ಪ್ರವಾಹ – ಕೇಂದ್ರದಿಂದ ನೆರೆಪೀಡಿತ ಜಿಲ್ಲೆಗಳಿಗೆ ಪರಿಹಾರ ನೀಡುವಂತೆ ಮೋದಿಗೆ ಯತ್ನಾಳ್ ಪತ್ರ

Share This Article