ʼಆಚಾರ್ಯ’ ಸಿನಿಮಾದಲ್ಲಿ ಕಾಜಲ್ ಇಲ್ಲ: ಶಾಕಿಂಗ್ ನ್ಯೂಸ್ ಕೊಟ್ಟ ನಿರ್ದೇಶಕ ಕೊರಟಾಲ ಶಿವ

Public TV
2 Min Read

ಟಾಲಿವುಡ್ ಬ್ಯೂಟಿ ಕಾಜಲ್ ಅಗರ್ವಾಲ್ ಅವರು ಚಿರಂಜೀವಿ ಮತ್ತು ರಾಮ್ ಚರಣ್ ಅಭಿನಯದ ‘ಆಚಾರ್ಯ’ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದರು. ಆದರೆ ಈ ಕುರಿತು ಕಾಜಲ್ ಅಪ್ಡೇಟ್‌ಗಳು ಮಾತ್ರ ಬರುತ್ತಿರಲಿಲ್ಲ. ಅಭಿಮಾನಿಗಳಲ್ಲಿ ಕಾಜಲ್ ಈ ಸಿನಿಮಾದಲ್ಲಿ ಇರುವ ಬಗ್ಗೆ ಅನುಮಾನ ಮೂಡಿತ್ತು. ಆದರೆ ‘ಆಚಾರ್ಯ’ ಸಿನಿಮಾ ನಿರ್ದೇಶಕ ಕೊರಟಾಲ ಶಿವ ಈ ಕುರಿತು ಸ್ಪಷ್ಟನೆ ಕೊಟ್ಟಿದ್ದಾರೆ.

‘ಆಚಾರ್ಯ’ ಸಿನಿಮಾದಲ್ಲಿ ಚಿರಂಜೀವಿಗೆ ನಾಯಕಿಯಾಗಿ ಕಾಜಲ್ ನಟಿಸುತ್ತಾರೆ ಎಂಬ ಚಿತ್ರತಂಡವೇ ಅಧಿಕೃತವಾಗಿ ಫೋಷಿಸಿತ್ತು. ಆದರೆ ಕಾಜಲ್ ಗರ್ಭಿಣಿಯಾದ ಬಳಿಕ ಸಿನಿಮಾ ಶೂಟಿಂಗ್ ಬಂದಿಲ್ಲ. ಈ ಹಿನ್ನೆಲೆ ಚಿತ್ರತಂಡ ಕಾಜಲ್ ಅವರು ಶೂಟ್ ಮಾಡಿದ್ದ ಕೆಲವು ದೃಶ್ಯಗಳನ್ನು ಸಿನಿಮಾದಿಂದ ಎಡಿಟ್ ಮಾಡಲಾಗಿದೆ ಎಂದು ಕೊರಟಾಲ ಶಿವ ಖಚಿತಪಡಿಸಿದ್ದಾರೆ. ಇದನ್ನೂ ಓದಿ: ಪ್ರೆಗ್ನೆನ್ಸಿಯಲ್ಲೂ ಫಿಟ್‍ನೆಸ್ ಇರಬೇಕು ಎಂದು ವೀಡಿಯೋ ಮಾಡಿದ ನಟಿ ಪ್ರಣಿತಾ

Acharya' First Look: Chiranjeevi looks intense as the messiah for Dharmasthali | Telugu Movie News - Times of India

ಸುದ್ದಿಗೋಷ್ಠಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಕಾಜಲ್ ಮೊದಲ ಶೆಡ್ಯೂಲ್ ಮುಗಿದ ನಂತರ, ಅವರು ಮತ್ತೆ ಶೂಟಿಂಗ್ ಬರುವುದು ಕಷ್ಟವಾಗುತ್ತಿತ್ತು. ಈ ಕುರಿತು ನಾನು ಮೆಗಾಸ್ಟಾರ್ ಅವರ ಜೊತೆ ಈ ಕುರಿತು ಚರ್ಚೆ ಮಾಡಿದ್ದೆ. ಆಗ ಅವರು ನೀವು ಏನು ಬೇಕಾದರೂ ನಿರ್ಧಾರ ತೆಗೆದುಕೊಳ್ಳಿ ಎಂದರು. ನಂತರ ನಾನು ಕಾಜಲ್ ಅವರಿಗೆ ಈ ಕುರಿತು ವಿವರಿಸಿದೆ. ಇದಕ್ಕೆ ಅವರು ನಗುತ್ತಲೇ ಪ್ರತಿಕ್ರಿಯಿಸಿದರು. ನಿಮ್ಮ ಪಾತ್ರವನ್ನು ಎಡಿಟ್ ಮಾಡಿರುವ ಕುರಿತು ನಾನು ವಿವರಿಸಿದೆ ಅದಕ್ಕೆ ಅವರು ಸಂಪೂರ್ಣವಾಗಿ ಸಮ್ಮತಿ ಸೂಚಿಸಿದರು ಎಂದು ವಿವರಿಸಿದ್ದಾರೆ.

‘ಆಚಾರ್ಯ’ ಸಿನಿಮಾದಲ್ಲಿ ಕಾಜಲ್‌ನ ಪಾತ್ರವನ್ನು ಸಂಪೂರ್ಣವಾಗಿ ಕತ್ತರಿಸಲಾಗಿದೆ. ಪೂಜಾ ಹೆಗ್ಡೆ ಅವರು ನೀಲಾಂಬರಿಯಾಗಿ ನಟಿಸಿದ್ದಾರೆ, ರಾಮ್ ಚರಣ್ ಅವರ ಜೋಡಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಆಚಾರ್ಯ ಸಿನಿಮಾದಲ್ಲಿ ಚಿರಂಜೀವಿ ಅವರಿಗೆ ನಾಯಕಿ ಇಲ್ಲ ಎಂದು ಸ್ಪಷ್ಟಪಡಿಸಿದರು.

ಈ ಸಿನಿಮಾದ ಟ್ರೇಲರ್ ಸಹ ರಿಲೀಸ್ ಆಗಿದ್ದು, ಇದರಲ್ಲಿಯೂ ಕಾಜಲ್ ಇಲ್ಲದೇ ಇರುವುದು ಅಭಿಮಾನಿಗಳಲ್ಲಿ ಪ್ರಶ್ನೆ ಮೂಡಿತ್ತು. ಟ್ರೇಲರ್ ಬಿಡುಗಡೆಯ ವೇಳೆಯೂ ಸಹ ಕಾಜಲ್ ಬಗ್ಗೆ ಯಾರು ಪ್ರಸ್ತಾಪಿಸಲಿಲ್ಲ. ‘ಆಚಾರ್ಯ’ ಸಿನಿಮಾ ಟ್ರೇಲರ್ ಏಪ್ರಿಲ್ 12 ರಂದು ಬಿಡುಗಡೆ ಆಗಿದೆ. ಈ ಸಿನಿಮಾದಲ್ಲಿ ಚಿರಂಜೀವಿ ಮತ್ತು ರಾಮ್ ಚರಣ್ ಅವರು ದೇವಾಲಯದ ನಿಧಿಗಳು ಮತ್ತು ದೇಣಿಗೆಗಳ ದುರುಪಯೋಗ ಮಾಡಿಕೊಳ್ಳುವ ದತ್ತಿ ಇಲಾಖೆಯ ವಿರುದ್ಧ ಹೋರಾಡುವ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇದನ್ನೂ ಓದಿ: ವಿಜಯ್ ಸೇತುಪತಿ ಒಲಿಯುವುದು ನಯನತಾರಾಗಾ ಅಥವಾ ಸಮಂತಗಾ?: ಹೆಚ್ಚಿದ ಕುತೂಹಲ

ಕಾಜಲ್ ಅಗರ್ವಾಲ್ ಇತ್ತೀಚೆಗಷ್ಟೇ ಗಂಡು ಮಗುವಿಗೆ ಜನ್ಮ ನೀಡಿದ ಕಾರಣ ತಾಯ್ತನವನ್ನು ಆನಂದಿಸುತ್ತಿದ್ದಾರೆ. ಈ ನಟಿ ತನ್ನ ಪತಿ ಗೌತಮ್ ಕಿಚ್ಲು ಜೊತೆಗೆ ಮಗುವಿನೊಂದಿಗೆ ಆನಂದವಾಗಿ ಇದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *