– ಎಎಸ್‌ಐ ತಸ್ಲೀಂ ಸೇರಿ ಠಾಣೆಯ ಐವರು ಸಿಬ್ಬಂದಿ ಅಮಾನತು
ಮಂಗಳೂರು: ಲಂಚ ಸ್ವೀಕರಿಸುತ್ತಿದ್ದ ವೇಳೆ ಕದ್ರಿ ಸಂಚಾರಿ ಠಾಣೆ (Kadri Traffic Police Station) ಎಎಸ್‌ಐ ಲೋಕಾಯುಕ್ತ (Lokayukta) ಬಲೆಗೆ ಬಿದ್ದಿದ್ದಾರೆ. ಕರ್ತವ್ಯಲೋಪ ಹಿನ್ನೆಲೆಯಲ್ಲಿ ಕದ್ರಿ ಸಂಚಾರಿ ಠಾಣೆ ಐವರು ಸಿಬ್ಬಂದಿಯನ್ನು ಅಮಾನತುಗೊಳಿಸಲಾಗಿದೆ.
ಲೋಕಾಯುಕ್ತ ಬಲೆಗೆ ಬಿದ್ದ ಎಎಸ್‌ಐ ತಸ್ಲೀಂ ಆರಿಫ್ ಸೇರಿ ಐವರು ಅಮಾನತು ಮಾಡಲಾಗಿದೆ. ತಸ್ಲೀಂಗೆ ಸಹಕರಿಸಿದ ಸಿಬ್ಬಂದಿ ವಿನೋದ್, ಇವರಿಬ್ಬರ ಜೊತೆಗೆ ಮತ್ತೆ ಮೂವರು ಪೊಲೀಸ್ ಸಿಬ್ಬಂದಿಯಾದ ರವಿ ಹೆಚ್, ದೀಪಕ್ ಮತ್ತು ಮಹಾಂತೇಶ್ ಅವರನ್ನು ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ. ಇದನ್ನೂ ಓದಿ: 10.5 ಕೋಟಿ ಮೌಲ್ಯದ ಚಿನ್ನಾಭರಣ ದರೋಡೆ ಕೇಸ್ – 12 ಆರೋಪಿಗಳು ಅರೆಸ್ಟ್
ಭ್ರಷ್ಟಾಚಾರ ಮಾಡಿ ಹಣಕ್ಕೆ ಬೇಡಿಕೆ ಇಟ್ಟಿದ್ದವರ ಬಗ್ಗೆ ಮಾಹಿತಿ ಇದ್ದರೂ ಮೇಲಾಧಿಕಾರಿಗಳಿಗೆ ಮಾಹಿತಿ ನೀಡದ ಆರೋಪ ಕೇಳಿಬಂದಿದೆ. ನಿರ್ಲಕ್ಷ್ಯತನ ತೋರಿದ ಕಾರಣಕ್ಕಾಗಿ ಮೂವರು ಸಿಬ್ಬಂದಿ ಸಸ್ಪೆಂಡ್ ಮಾಡಿ ಮಂಗಳೂರು ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಆದೇಶ ಹೊರಡಿಸಿದ್ದಾರೆ.
ನಿನ್ನೆ ಮಂಗಳೂರಿನ ಕದ್ರಿ ಠಾಣೆಯಲ್ಲಿ ಲೋಕಾಯುಕ್ತ ಪೊಲೀಸರ ಕಾರ್ಯಾಚರಣೆ ನಡೆಸಿದರು. ಲಂಚ ಸ್ವೀಕರಿಸುತ್ತಿದ್ದ ಸಂಚಾರಿ ಪೊಲೀಸ್ ಸಿಬ್ಬಂದಿ ತಸ್ಲೀಂ ಬಂಧಿಸಲಾಗಿತ್ತು. ಅಪಘಾತ ಪ್ರಕರಣ ಒಂದರಲ್ಲಿ ಕಾರು ಬಿಟ್ಟುಕೊಡಲು 50 ಸಾವಿರ ಲಂಚದ ಬೇಡಿಕೆ ಇಟ್ಟಿದ್ದರು. ಬಳಿಕ ಲೈಸೆನ್ಸ್ ಹಿಂದಿರುಗಿಸಲು 5,000 ಲಂಚಕ್ಕೆ ಒತ್ತಾಯಿಸಿದ್ದರು. 5,000 ರೂಪಾಯಿ ಲಂಚದ ಹಣ ಸ್ವೀಕರಿಸುತ್ತಿದ್ದಾಗ ಲೋಕಾಯುಕ್ತ ಅಧಿಕಾರಿಗಳ ಬಲೆಗೆ ಬಿದ್ದಿದ್ದಾರೆ. ಇದನ್ನೂ ಓದಿ: ಮಸಾಲೆ ಪದಾರ್ಥ ತಯಾರಿಕಾ ಘಟಕದ ಮೇಲೆ ದಾಳಿ – 842 ಕೆಜಿ ಕಲಬೆರಕೆ ವಸ್ತುಗಳು ಜಪ್ತಿ