ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಹೊರಟ ‘ಕಬ್ಜ’ ಟೀಮ್ : ವಿಮಾನ ಏರಿದ ಆರ್.ಚಂದ್ರು

Public TV
2 Min Read

ನಾಳೆ ವಿಶ್ವದಾದ್ಯಂತ ಕಬ್ಜ ಸಿನಿಮಾ ರಿಲೀಸ್ ಆಗುತ್ತಿದೆ. ಬಿಡುಗಡೆಗೂ ಒಂದು ದಿನ ಮುನ್ನ ಕಬ್ಜ (Kabzaa) ಟೀಮ್ ತಿರುಪತಿಯತ್ತ ಪ್ರಯಾಣ ಬೆಳೆಸಿದೆ. ವಿಶೇಷ ವಿಮಾನದಲ್ಲಿ ನಟ ಉಪೇಂದ್ರ (Upendra), ನಿರ್ದೇಶಕ ಆರ್.ಚಂದ್ರು (R. Chandru), ಕೆ.ಪಿ ಶ್ರೀಕಾಂತ್ ಸೇರಿದಂತೆ ಹಲವರು ಬೆಳಗ್ಗೆ ಪ್ರಯಾಣ ಬೆಳೆಸಿದ್ದಾರೆ. ತಿರುಪತಿ ತಿಮ್ಮಪ್ಪನ (Tirupati Thimmappa) ದರ್ಶನ ಪಡೆದು, ಅಧಿಕೃತವಾಗಿ ಚಿತ್ರದ ಬಿಡುಗಡೆಗೆ ಚಾಲನೆ ನೀಡಲಿದ್ದಾರೆ.

ಮೊನ್ನೆಯಷ್ಟೇ ಈ ಸಿನಿಮಾದ ಪ್ರಿ ಇವೆಂಟ್ ಕಾರ್ಯಕ್ರಮ ಅದ್ಧೂರಿಯಾಗಿ ನಡೆದಿದ್ದು, ಆ ಕಾರ್ಯಕ್ರಮದಲ್ಲಿ ಚಿತ್ರತಂಡ ಹಲವಾರು ವಿಷಯಗಳನ್ನು ಹಂಚಿಕೊಂಡಿದೆ. ವಿಶ್ವದಾದ್ಯಂತ ನಾಲ್ಕು ಸಾವಿರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಐದು ಭಾಷೆಗಳಲ್ಲಿ ಚಿತ್ರ ರಿಲೀಸ್ ಆಗುತ್ತಿದೆ. ಈ ಸಮಯದಲ್ಲಿ ಕಬ್ಜ 2 ಸಿನಿಮಾದ ಬಗ್ಗೆ ಸುಳಿವು ನೀಡಿದ್ದಾರೆ ನಟ ಉಪೇಂದ್ರ. ನಿನ್ನೆ ಬೆಂಗಳೂರಿನ ಪ್ರತಿಷ್ಠಿತ ಹೋಟೆಲ್ ನಲ್ಲಿ ನಡೆದ ಪ್ರಿ ರಿಲೀಸ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಬ್ಜ 2 ಸಿನಿಮಾದಲ್ಲಿ ನನಗೆ ಅತಿಥಿ ಪಾತ್ರ ಕೊಡಿ, ಸುದೀಪ್ ಅವರನ್ನು ಹೀರೋ ಆಗಿ ಮಾಡಿ ಎಂದು ನಿರ್ದೇಶಕರಲ್ಲಿ ಮನವಿ ಮಾಡಿಕೊಂಡರು. ಇದನ್ನೂ ಓದಿ: ಆಸ್ಕರ್‌ನಲ್ಲಿ ಜ್ಯೂ.ಎನ್‌ಟಿಆರ್-ಚರಣ್ ಡ್ಯಾನ್ಸ್ ಮಾಡಿಲ್ಲ ಯಾಕೆ? ಇಲ್ಲಿದೆ ಅಸಲಿ ಕಾರಣ

‘ಕಬ್ಜ ಇದು ನಟರ ಸಿನಿಮಾವಲ್ಲ, ಟೆಕ್ನಿಷಿಯನ್ಸ್ ಸಿನಿಮಾ. ಈ ಸಿನಿಮಾದಲ್ಲಿ ನಿರ್ದೇಶಕರು, ಸಂಗೀತ ನಿರ್ದೇಶಕರ, ಕಲಾ ನಿರ್ದೇಶಕ, ಸಿನಿಮಾಟೋಗ್ರಾಫರ್ ಕಾಣುತ್ತಾರೆ. ನಟರು ಕೇವಲ ಹಿಂದಿನ ಶಕ್ತಿ ಅಷ್ಟೇ. ಇಂತಹ ಸಿನಿಮಾಗಳನ್ನು ಪ್ರೇಕ್ಷಕರು ಗೆಲ್ಲಿಸುತ್ತಾರೆ. ಕಬ್ಜ 2 ಸಿನಿಮಾ ಕೂಡ ಆಗಲಿ. ಆ ಸಿನಿಮಾದಲ್ಲಿ ಸುದೀಪ್ ಮುಖ್ಯ ಪಾತ್ರ ಮಾಡಲಿ’ ಎಂದು ಹಾರೈಸಿದರು ಹಾಗೂ ಕಬ್ಜ 2 ಬರುವ ಕುರಿತು ಸುಳಿವನ್ನೂ ಅವರು ನೀಡಿದರು.

ಪ್ರಿ ರಿಲೀಸ್ ಇವೆಂಟ್ ನಲ್ಲಿ ಭಾಗಿಯಾಗಿದ್ದ ಡಾಲಿ ಧನಂಜಯ್, ‘ಕಬ್ಜ ಸಿನಿಮಾದಲ್ಲಿ ನನಗೆ ಅವಕಾಶ ನೀಡಿಲ್ಲ. ನಿರ್ದೇಶಕರು ಬಹುಶಃ ನನ್ನನ್ನು ಮರೆತಿದ್ದಾರೆ. ಕಬ್ಜ 2 ನಲ್ಲಾದರೂ ಅವಕಾಶ ಕೊಡಲಿ ಎಂದರು. ಅಲ್ಲದೇ ಮೊದಲ ಶೋ ರಾತ್ರಿಯೇ ಇರಲಿ, ಬೆಳಗ್ಗೆ ಆಯೋಜನೆ ಆಗಿರಲಿ ಒಬ್ಬ ಅಭಿಮಾನಿಯಾಗಿ ಬಂದು ಥಿಯೇಟರ್ ನಲ್ಲಿ ಸಂಭ್ರಮಿಸುತ್ತೇನೆ’ ಎಂದರು.

ನಿರ್ದೇಶಕ ಆರ್.ಚಂದ್ರು ಅವರನ್ನು ಹಾಡಿ ಹೊಗಳಿದ ಕಿಚ್ಚ ಸುದೀಪ್, ‘ಇಂಥದ್ದೊಂದು ಸಿನಿಮಾದಲ್ಲಿ ನಾನು ಭಾಗಿಯಾಗಿದ್ದೇನೆ ಎನ್ನುವುದು ಸಂತಸ ತಂದಿದೆ. ನಿರ್ದೇಶಕರು ಸಿನಿಮಾವನ್ನು ತುಂಬಾ ಚೆನ್ನಾಗಿ ಮಾಡಿದ್ದಾರೆ. ಪ್ರೇಕ್ಷಕರು ಕೂಡ ಅಷ್ಟೇ ಈ ಸಿನಿಮಾವನ್ನು ಒಪ್ಪಿಕೊಳ್ಳುತ್ತಾರೆ ಎನ್ನುವ ವಿಶ್ವಾಸವಿದೆ. ಒಳ್ಳೊಳ್ಳೆ ಸಿನಿಮಾಗಳು ಹಾಗೂ ಹೃದಯಕ್ಕೆ ಹತ್ತಿರ ಇದ್ದವರು ಸಿನಿಮಾ ಮಾಡಿದಾಗ, ಅವರಿಗೆ ಸಪೋರ್ಟ್ ಮಾಡುವುದು ನನ್ನ ಕರ್ತವ್ಯ. ನಾನು ಮಾಡಿದ್ದೇನೆ’ ಎಂದು ಹೇಳಿದರು.

Share This Article
Leave a Comment

Leave a Reply

Your email address will not be published. Required fields are marked *