ಧರ್ಮಂ (Dharmam) ಅನ್ನೋ ವಿಭಿನ್ನ ಕಥಾಹಂದರದ ಸಿನಿಮಾವನ್ನ ನಿರ್ದೇಶಕ ಆರ್.ಚಂದ್ರು (R Chandru) ಮೆಚ್ಚಿ ಶುಭ ಹಾರೈಸಿದ್ದಾರೆ. ಸಿನಿಮಾದ ನೀನೇ ತಂದ ಒಲವಾ ಒಡವೆ ಹಾಡನ್ನ ರಿಲೀಸ್ ಮಾಡಿ ತಮ್ಮ ತಾಜ್ ಮಹಲ್ ಸಿನಿಮಾವನ್ನು ಮೆಲುಕು ಹಾಕಿದ್ದಾರೆ. ಧರ್ಮಂ ಸಿನಿಮಾಗೆ ನಾಗಮುಖ ಆ್ಯಕ್ಷನ್‌ಕಟ್ ಹೇಳಿದ್ದು, ಸಿನಿಮಾದಲ್ಲಿ ಸಾಯಿಶಶಿ ನಾಯಕನಾಗಿ ಕಾಣಿಸಿಕೊಂಡಿದ್ರೆ ನಟಿ ವರ್ಣಿಕಾ ಶೆಟ್ಟಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.
ಮೇಲೂ ಕೀಳು ಅನ್ನೋ ಭಾವಲೋಕದ ಹೊಸ ಪ್ರಪಂಚದಲ್ಲಿ ಹೋರಾಟ ಮಾಡ್ತಿರೋ ನಾಯಕನ ಜೊತೆ ತನ್ನ ಮನದಾಳದ ಭಾವನೆಗಳನ್ನ ಹೇಳಿಕೊಳ್ಳೋ ತೊಳಲಾಟದಲ್ಲಿನ ಸನ್ನಿವೇಶಗಳು ಹಾಡಿನಲ್ಲಿ ಮೂಡಿಬಂದಿವೆ. ಧರ್ಮಂ ಸಿನಿಮಾ ತಂಡ ಮಲೆಮಹಾದೇಶ್ವರ ಬೆಟ್ಟಕ್ಕೆ ಭೇಟಿ ನೀಡಿ, ಆಶೀರ್ವಾದ ಪಡೆದು ಸಿನಿಮಾದ ಸಾಂಗ್ ರಿಲೀಸ್ ಮಾಡಿದೆ.ಇದನ್ನೂ ಓದಿ: ನಟ ಸಾಯಿ ದುರ್ಗಾ ತೇಜ್ ಭರ್ಜರಿ ಆಕ್ಷನ್ : ಸಂಬರಲ ಏಟಿಗಟ್ಟು ಗ್ಲಿಂಪ್ಸ್ ರಿಲೀಸ್
ಹಲವು ವಿಭಿನ್ನ ಲೋಕೇಶನ್‌ಗಳಲ್ಲಿ ಹಾಡಿನ ಚಿತ್ರೀಕರಣ ಮಾಡಲಾಗಿದ್ದು, ಖ್ಯಾತ ನಿರ್ದೆಶಕ ಆರ್ ಚಂದ್ರು ಚಿತ್ರತಂಡದ ಪ್ರಯತ್ನ ಮೆಚ್ಚಿ ಶುಭ ಹಾರೈಸಿದ್ದಾರೆ. ನಾಗಮುಖ ನಿರ್ದೇಶನ ಮಾಡಿದ್ರೆ, ನಾಗಶೆಟ್ಟಿ ಕ್ಯಾಮರಾ ಕೈಚಳಕ, ಸರವಣ ಸಂಗೀತ ಕೇಳುಗರನ್ನ ಮೋಡಿ ಮಾಡಿದ್ದಾರೆ. ಪ್ರಕೃತಿ ಮಡಿಲಿನ ದೃಶ್ಯ ವೈಭವ ಹೊಸ ಭಾವಲೋಕಕ್ಕೆ ಪಯಣ ಬೆಳೆಸುವಂತೆ ಮಾಡಿದೆ. ಸದ್ಯ ಹಾಡು ಕೂಡಾ ಅಪಾರ ಮೆಚ್ಚುಗೆಯನ್ನ ಪಡೆದುಕೊಳ್ಳುತ್ತಿದೆ.