ಐಎಸ್‍ಐಎಸ್-ಕೆ ಉಗ್ರರ ಸಂಘಟನೆ ವಿರುದ್ಧ ಅಮೆರಿಕ ಏರ್‌ಸ್ಟ್ರೈಕ್‌

Public TV
1 Min Read

ವಾಷಿಂಗ್ಟನ್: ಅಘ್ಘಾನಿಸ್ತಾನದಲ್ಲಿ ರಕ್ತದೋಕುಳಿ ಹರಿಸಿ 13 ಮಂದಿ ಅಮೆರಿಕ ಸೈನಿಕರು ಸಹಿತ 180 ಅಫ್ಘನ್ನರನ್ನು ಕೊಂದ ಐಎಸ್‍ಐಎಸ್-ಕೆ ಉಗ್ರ ಸಂಘಟನೆ ವಿರುದ್ಧ ವಿಶ್ವದ ದೊಡ್ಡಣ್ಣ ಏರ್‌ಸ್ಟ್ರೈಕ್‌ ನಡೆಸಿದೆ.

ನಿನ್ನೆ ದಾಳಿಯ ಬಳಿಕ ಉಗ್ರ ಸಂಘಟನೆಯ ವಿರುದ್ಧ ಅಮೆರಿಕ ಅಧ್ಯಕ್ಷ ಜೋ ಬೈಡನ್ ನಿಮ್ಮನ್ನು ಸುಮ್ಮನೆ ಬಿಡುವುದಿಲ್ಲ ಎಂದು ಪ್ರತಿಕಾರದ ಮಾತನ್ನಾಡಿದರು. ಇಂದು ಯುಎಸ್ ಸೆಂಟ್ರಲ್ ಕಮಾಂಡ್ ನೀಡಿರುವ ಮಾಹಿತಿ ಪ್ರಕಾರ ಇಸ್ಲಾಮೀಕ್ ಸ್ಟೇಟ್ ಸದಸ್ಯ ಕಾಬೂಲ್ ದಾಳಿಗೆ ಕಾರಣನಾಗಿದ್ದ ಓರ್ವನನ್ನು ಹತ್ಯೆ ಮಾಡಲಾಗಿದೆ ಎಂದು ವರದಿಯಾಗಿದ್ದು, ಅಘ್ಘಾನಿಸ್ತಾನದ ನಂಗಹಾರ್ ಪ್ರದೇಶದಲ್ಲಿ ಏರ್‌ಸ್ಟ್ರೈಕ್‌ ನಡೆದಿದೆ. ಡ್ರೋನ್ ಮೂಲಕ ಈ ದಾಳಿ ನಡೆಸಲಾಗಿದೆ ಎಂದು ಮಾಹಿತಿ ಲಭ್ಯವಾಗಿದೆ. ಇದನ್ನೂ ಓದಿ: ಐಸಿಸ್-ಕೆ ಉಗ್ರರ ವಿರುದ್ಧ ಅಮೆರಿಕ ಅಧ್ಯಕ್ಷ ಜೋ ಬೈಡನ್ ಗುಡುಗು

ಐಎಸ್‍ಕೆಪಿ ವಿರುದ್ಧ ಕಾರ್ಯಾಚರಣೆಗೆ ಪ್ಲಾನ್ ಮಾಡಿ. ಐಸಿಸ್-ಕೆ ಆಸ್ತಿ, ನಾಯಕರು, ಸೌಲಭ್ಯಗಳ ಮೇಲೆ ಏರ್‌ಸ್ಟ್ರೈಕ್‌ ಮಾಡಲು ಪ್ಲಾನ್ ಮಾಡಿ. ನಾವು ನಮ್ಮ ಸೇನೆ ಮೂಲಕ, ಸೂಕ್ತ ಸಂದರ್ಭದಲ್ಲಿ ಪ್ರತ್ಯುತ್ತರ ನೀಡುತ್ತೇವೆ. ಸ್ಥಳ, ಸಮಯ ನಿಗದಿ ಮಾಡುತ್ತೇವೆ. ಐಸಿಸ್ ಭಯೋತ್ಪಾದಕರು ಗೆಲ್ಲಲು ಸಾಧ್ಯವಿಲ್ಲ ಎಂದು ಅಮೆರಿಕ ಹೇಳಿತ್ತು. ಈ ದಾಳಿಯ ಮೂಲಕ ಅಮೆರಿಕ 48 ಗಂಟೆಗಳಲ್ಲೇ ಉಗ್ರರ ವಿರುದ್ಧ ಪ್ರತಿಕಾರ ತೀರಿಸಿಕೊಂಡಂತಿದೆ. ಇದನ್ನೂ ಓದಿ: ಕಾಬೂಲ್‍ನಲ್ಲಿ 3 ಸಾವಿರ ರೂ.ಗೆ ಒಂದು ಬಾಟೆಲ್ ನೀರು, ಪ್ಲೇಟ್ ರೈಸ್‍ಗೆ 7,500 ರೂ.

 

Share This Article
Leave a Comment

Leave a Reply

Your email address will not be published. Required fields are marked *