‘ಕಾಂತ’ ಚಿತ್ರಕ್ಕಾಗಿ ಕೈಜೋಡಿಸಿದ ರಾಣಾ ದಗ್ಗುಬಾಟಿ, ದುಲ್ಕರ್ ಸಲ್ಮಾನ್

Public TV
1 Min Read

ಟಾಲಿವುಡ್ ಹ್ಯಾಂಡ್ಸಮ್ ಹಂಕ್ ರಾಣಾ ದಗ್ಗುಬಾಟಿ (Rana Daggubati) ಹಾಗೂ ಮಲಯಾಳಂ ಸೂಪರ್ ಸ್ಟಾರ್ ದುಲ್ಕರ್ ಸಲ್ಮಾನ್ (Dulquer Salmaan) ‘ಕಾಂತ’ (Kaantha) ಸಿನಿಮಾಗಾಗಿ ಕೈ ಜೋಡಿಸಿದ್ದಾರೆ. ಸೆಲ್ವಮಣಿ ಸೆಲ್ವರಾಜ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಈ ಚಿತ್ರ ಹೈದರಾಬಾದ್‌ನ ರಾಮ ನಾಯ್ಡು ಸ್ಟುಡಿಯೋದಲ್ಲಿ ಅದ್ಧೂರಿಯಾಗಿ ಸೆಟ್ಟೇರಿದೆ. ನಟ ಕಂ ನಿರ್ಮಾಪಕ ವೆಂಕಟೇಶ್ ದಗ್ಗುಬಾಟಿ ‘ಕಾಂತ’ ಸಿನಿಮಾಗೆ ಕ್ಲ್ಯಾಪ್ ಮಾಡಿ ಇಡೀ ತಂಡಕ್ಕೆ ಶುಭಾಶಯ ತಿಳಿಸಿದರು.

‘ಕಾಂತ’ ಸಿನಿಮಾವನ್ನು ರಾಣಾ ಒಡೆತನ ರಾಣಾಸ್ ಸ್ಪಿರಿಟ್ ಮೀಡಿಯಾ ಹಾಗೂ ದುಲ್ಕರ್ ಸಲ್ಮಾನ್ ಒಡೆತನದ ವೇಫೇರರ್ ಫಿಲ್ಮಂ ಜಂಟಿಯಾಗಿ ನಿರ್ಮಾಣ ಮಾಡುತ್ತಿದೆ. ದುಲ್ಕರ್ ಚಿತ್ರ ನಿರ್ಮಾಣದ ಜೊತೆ ನಾಯಕನಾಗಿ ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ. 1950ರ ಮದ್ರಾಸ್ ಬ್ಯಾಕ್ ಡ್ರಾಪ್ ನಲ್ಲಿ ಕಾಂತ ಚಿತ್ರ ತಯಾರಾಗಲಿದೆ. ದುಲ್ಕರ್ ಗೆ ಜೋಡಿಯಾಗಿ ಭಾಗ್ಯಶ್ರೀ ಬೋರ್ಸೆ (Bhagyashri Borse) ಸಾಥ್ ಕೊಟ್ಟಿದ್ದು, ಸಮುದ್ರಖನಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ನಿರ್ಮಾಪಕ ರಾಣಾ ದಗ್ಗುಬಾಟಿ ಮಾತನಾಡಿ, ರಾಣಾಸ್ ಸ್ಪಿರಿಟ್ ಮೀಡಿಯಾ ವೇಫೇರರ್ ಫಿಲ್ಮಂ ಜೊತೆಯಾಗಿರುವುದು ಕಾಂತ ಚಿತ್ರಕ್ಕೆ ಹೊಸ ಆಯಾಮಾ ಸಿಕ್ಕಂತಾಗಿದೆ. ಪ್ರೇಕ್ಷಕರಿಗೆ ಸ್ಪಿರಿಟ್ ಮೀಡಿಯಾ ಕ್ವಾಲಿಟಿ ಸಿನಿಮಾ ನೀಡಲಿದೆ. ಸುರೇಶ್ ಪ್ರೊಡಕ್ಷನ್ 60ನೇ ವಾರ್ಷಿಕೋತ್ಸವ ಸಂದರ್ಭದಲ್ಲಿ ಸ್ಪಿರಿಟ್ ಮೀಡಿಯಾದೊಂದಿಗೆ ಹೊಸ ಯುಗವನ್ನು ಪ್ರಾರಂಭಿಸಲು ಕಾಂತ ಅತ್ಯುತ್ತಮ ಚಿತ್ರವಾಗಿದೆ ಎಂದರು. ಇದನ್ನೂ ಓದಿ:ರಶ್ಮಿಕಾ ಮಂದಣ್ಣಗೆ ಅಪಘಾತ: ಜೀವನ ಕ್ಷಣಿಕ ಎಂದ ‘ಪುಷ್ಪ’ ನಟಿ

ಪ್ರಶಾಂತ್ ಪೊಟ್ಲೂರಿ, ರಾಣಾ ದಗ್ಗುಬಾಟಿ, ದುಲ್ಕರ್ ಸಲ್ಮಾನ್ ಮತ್ತು ಜೋಮ್ ವರ್ಗೀಸ್ ಕಾಂತ ಚಿತ್ರ ನಿರ್ಮಾಣ ಮಾಡುತ್ತಿದ್ದು, ದಾನಿ ಸ್ಯಾಂಚೆಜ್ ಲೋಪೆಜ್ ಛಾಯಾಗ್ರಹ, ಜಾನು ಸಂಗೀತ, ರಾಮಲಿಂಗಂ ಕಲಾ ನಿರ್ದೇಶನ, ಲೆವೆಲ್ಲಿನ್ ಆಂಥೋನಿ ಗೊನ್ಸಾಲ್ವಿಸ್ ಸಂಕಲನ ಚಿತ್ರಕ್ಕಿದೆ. ‘ಕಾಂತ’ ಚಿತ್ರದ ಫಸ್ಟ್ ಲುಕ್ ಶೀಘ್ರದಲ್ಲೇ ಬಿಡುಗಡೆಯಾಗಲಿದ್ದು, ದಕ್ಷಿಣ ಭಾರತದ ಎಲ್ಲಾ ಭಾಷೆಗಳಲ್ಲಿ ಚಿತ್ರ ತೆರೆಗೆ ಬರಲಿದೆ.

Share This Article