ಇವರೆಲ್ಲ ಕಾಂಗ್ರೆಸ್ ಸರ್ಕಾರದ ಕಾಲದಲ್ಲಿ ಚಿಗುರುತ್ತಾರೆ: ಭಗವಾನ್ ವಿರುದ್ಧ ಸುಧಾಕರ್ ಕಿಡಿ

Public TV
2 Min Read

ಚಿಕ್ಕಬಳ್ಳಾಪುರ: ಒಕ್ಕಲಿಗ ಸಮುದಾಯದ ಬಗ್ಗೆ ಪ್ರೊ.ಭಗವಾನ್ (K.S Bhagawan) ಹೇಳಿಕೆಗೆ ಮಾಜಿ ಸಚಿವ ಸುಧಾಕರ್ (K.Sudhakar) ಕಿಡಿ ಕಾರಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ (Congress) ಸರ್ಕಾರ ಬಂದಾಗ ಮಾತ್ರ ಇಂಥವರು ಚಿಗುರಿಕೊಳ್ಳುವುದು ಯಾಕೆ? ಇದನ್ನು ಕನ್ನಡಿಗರು ಯೋಚನೆ ಮಾಡಬೇಕು ಎಂದು ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.

ಒಕ್ಕಲಿಗ ಒಕ್ಕಿದರೆ ನಕ್ಕು ನಲಿಯುವುದು ಜಗವೆಲ್ಲ, ಒಕ್ಕಲಿಗ ಒಕ್ಕದಿರೆ ಬಿಕ್ಕುವುದು ಜಗವೆಲ್ಲ ಎಂಬ ಗಾದೆ ಮಾತು ಸತ್ಯವಾದದ್ದು. ಒಕ್ಕಲಿಗ ಸಮಾಜ ಎಂದರೆ ಅದು ನಾಡಿಗೆ ಅನ್ನ ನೀಡುವ ನೇಗಿಲ ಯೋಗಿಗಳ ಸಮುದಾಯ. ಈ ನಾಡಿನ ಮಣ್ಣಿನ ಜೊತೆ ಕರುಳಬಳ್ಳಿಯ ಸಂಬಂಧ ಹೊಂದಿರುವ ಮಣ್ಣಿನ ಮಕ್ಕಳ ಸಮುದಾಯ. ನಾಡಪ್ರಭು ಕೆಂಪೇಗೌಡರಂತಹ ನಾಡು ಕಟ್ಟಿದ ಮಹನೀಯರನ್ನು ನೀಡಿದ ಕನ್ನಡದ ಕಟ್ಟಾಳುಗಳು ಸಮುದಾಯ. ಅಲ್ಲದೇ ರಾಷ್ಟ್ರಕವಿ ಕುವೆಂಪುರಂತಹ ವಿಶ್ವಮಾನವ ಚೇತನವನ್ನು ನೀಡಿದ ಪ್ರಬುದ್ಧರ ಸಮುದಾಯವಾಗಿದೆ. ಇದನ್ನೂ ಓದಿ: ಲಗ್ಗೆರೆಯಲ್ಲಿ ಭಾರೀ ಅಗ್ನಿ ಅವಘಡ – ಗುಜರಿ ಅಂಗಡಿ ಸೇರಿ 5 ಬೈಕ್‍ಗಳು ಭಸ್ಮ

ಪ್ರೊ.ಭಗವಾನ್ ಅವರು ಒಕ್ಕಲಿಗ ಸಮುದಾಯದ ಬಗ್ಗೆ ನೀಡಿರುವ ಹೇಳಿಕೆಗಳು ಅತ್ಯಂತ ಖಂಡನೀಯ ಮತ್ತು ಅಕ್ಷಮ್ಯ. ಶ್ರೀರಾಮನನ್ನೇ ಬಿಡದ ಪ್ರೊ.ಭಗವಾನ್ ರಂತಹವರಿಂದ ಹೆಚ್ಚೇನೂ ನಿರೀಕ್ಷೆ ಇಲ್ಲ. ಅಂತಹವರಿಂದ ನಮ್ಮ ಒಕ್ಕಲಿಗ ಸಮುದಾಯಕ್ಕೆ ಸರ್ಟಿಫಿಕೇಟ್ ಸಹ ಬೇಕಿಲ್ಲ. ಆದರೆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದಾಗ ಮಾತ್ರ ಇಂಥವರು ಚಿಗುರಿಕೊಳ್ಳುವುದು ಯಾಕೆ ಎಂದು ಪ್ರಶ್ನಿಸಿದ್ದಾರೆ.

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದ ತಕ್ಷಣ ಇಂಥವರು ತಮ್ಮ ಬಾಲ ಬಿಚ್ಚುವ ಧೈರ್ಯ ಮಾಡುವುದು ಹೇಗೆ? ಇದನ್ನು ಕನ್ನಡಿಗರು ಯೋಚನೆ ಮಾಡಬೇಕು. ಕಾಂಗ್ರೆಸ್ ಸರ್ಕಾರಕ್ಕೂ ಇಂತಹ ದೇಶ ವಿರೋಧಿ, ಧರ್ಮ ವಿರೋಧಿ, ಕನ್ನಡ ವಿರೋಧಿ ಬುದ್ಧಿ ಜೀವಿಗಳಿಗೂ ಇರುವ ಅವಿನಾಭಾವ ಸಂಬಂಧ ಆದರೂ ಏನು? ಇದು ಕನ್ನಡಿಗರು ಅರಿತುಕೊಳ್ಳಬೇಕಾದ ವಾಸ್ತವ ಎಂದು ಅವರು ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ: 36 ರನ್‌ ಅಂತರದಲ್ಲಿ 8 ವಿಕೆಟ್‌ ಪತನ – ಭಾರತಕ್ಕೆ 192 ರನ್‌ ಟಾರ್ಗೆಟ್‌

Web Stories

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್