ಬೆಂಗಳೂರು: ಮಾಜಿ ಸಚಿವ ಕೆ.ಎನ್.ರಾಜಣ್ಣ (K.N.Rajanna) ಎಐಸಿಸಿ ನಾಯಕ ರಾಹುಲ್ ಗಾಂಧಿ (Rahul Gandhi) ಭೇಟಿಗೆ ಮನವಿ ಮಾಡಿ ಪತ್ರ ಬೇರೆದಿದ್ದಾರೆ. ತಾವು ಸಚಿವ ಸ್ಥಾನ ಕಳೆದುಕೊಂಡ ಬಳಿಕ ರಾಹುಲ್ ಗಾಂಧಿ ಭೇಟಿಗೆ ಸತತ ಯತ್ನ ಮಾಡಿದ್ದರೂ, ಅದು ಸಾಧ್ಯವಾಗದ ಕಾರಣ ರಾಹುಲ್ ಗಾಂಧಿಗೆ 8 ಪುಟಗಳ ಸುದೀರ್ಘ ಪತ್ರ ಬರೆದಿದ್ದಾರೆ. ಅದರಲ್ಲಿ ರಾಜ್ಯ ರಾಜಕಾರಣದ ಅನೇಕ ಮಹತ್ವದ ವಿಚಾರಗಳ ಬಗ್ಗೆ ಪ್ರಸ್ತಾಪಿಸಿದ್ದಾರೆ.
ಮಾಜಿ ಸಚಿವ ಕೆ.ಎನ್.ರಾಜಣ್ಣ ರಾಹುಲ್ ಗಾಂಧಿಗೆ 8 ಪುಟಗಳ ಸುದೀರ್ಘ ಪತ್ರ ಬರೆದಿದ್ದಾರೆ. ಪತ್ರದಲ್ಲಿ ಅಹಿಂದ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ 2013 ಹಾಗೂ 2023ರಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ಸಿದ್ದರಾಮಯ್ಯ ಎಸ್‌ಸಿ-ಎಸ್‌ಟಿ, ಓಬಿಸಿ ಅಲ್ಪಸಂಖ್ಯಾತರು, ಬಡವರು ಸೇರಿ ಎಲ್ಲರ ಏಳಿಗೆಗಾಗಿ ಕೆಲಸ ಮಾಡ್ತಿದ್ದಾರೆ ಎಂದು ಸಿಎಂ ಪರ ಉಲ್ಲೇಖಿಸಿದ್ದಾರೆ. ಇನ್ನೂ ಇದೇ ಪತ್ರದಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ವಿರುದ್ಧವೂ ನೇರಾ ನೇರವಾಗಿ ಆರೋಪಿಸಿದ್ದಾರೆ. ಬಿಎಲ್‌ಆರ್‌ಗಳು ಸರಿಯಾಗಿ ಕೆಲಸ ಮಾಡಿದ್ದಿದ್ದರೆ ಲೋಕಸಭೆಯಲ್ಲಿ ಇನ್ನೂ 8-10 ಸೀಟ್ ಗೆಲ್ಲುತ್ತಿದ್ವಿ. ಬೇರೆ ರಾಜ್ಯಗಳಿಂದಲೂ 30-40 ಸೀಟ್ ಗೆಲ್ಲಬಹುದಿತ್ತು ಎಂದು ಬಿಎಲ್‌ಆರ್‌ಗಳನ್ನು ನೇಮಕ ಮಾಡಿರುವುದು ಅವರ ನೇಮಕ ಸರಿಯಾಗಿದ್ದರೆ, ವೋಟ್ ಚೋರಿ ಆಗುತ್ತಿರಲಿಲ್ಲ. ಬಿಎಲ್‌ಆರ್‌ಗಳು ಹಾಗೂ ಕೆಪಿಸಿಸಿ ಅಧ್ಯಕ್ಷರು ಈ ಬಗ್ಗೆ ಸರಿಯಾದ ಗಮನ ಹರಿಸಿಲ್ಲ. ಹೀಗಾಗಿ, ಕರ್ನಾಟಕದಲ್ಲಿ ವೋಟ್ ಚೋರಿಗೆ ಅವಕಾಶ ಆಗಿದೆ ಎಂದು ಡಿಕೆಶಿ ವಿರುದ್ಧ ಆರೋಪಿಸಿದ್ದಾರೆ. ಈ ಬಗ್ಗೆ ಮಾತನಾಡಿದ ಮಾಜಿ ಸಂಸದ ಡಿ.ಕೆ.ಸುರೇಶ್ ಅದು ಅವರ ಪ್ರತಿಪಾದನೆ ಅವರ ವಿಚಾರ ಎಂದಿದ್ದಾರೆ. ಇದನ್ನೂ ಓದಿ: ಗಾಂಧಿಯನ್ನು ಕಾಂಗ್ರೆಸ್ ಒಂದಲ್ಲ ಹಲವಾರು ಬಾರಿ ಕೊಲೆ ಮಾಡಿದೆ: ಬೊಮ್ಮಾಯಿ
ರಾಜಣ್ಣ ತಮ್ಮ ಪತ್ರದಲ್ಲಿ ರಾಹುಲ್ ಗಾಂಧಿ ಭೇಟಿಗೆ ಅವಕಾಶ ಕೇಳಿದ್ದು, ಏನು ತಪ್ಪು ಮಾಡದೆ ನನ್ನ ಸಚಿವ ಸ್ಥಾನ ಕಳೆದುಕೊಂಡಿದ್ದೇನೆ ಎಂದು ಪ್ರಸ್ತಾಪಿಸಿದ್ದಾರೆ. ನಾನು ಯಾವುದೇ ಭ್ರಷ್ಟಾಚಾರ ಮಾಡದೇ ಎರಡು ವರ್ಷ ಸಚಿವನಾಗಿ ಕೆಲಸ ಮಾಡಿದ್ದೇನೆ. ಸಹಕಾರ ಕ್ಷೇತ್ರದಲ್ಲಿ ಮೀಸಲಾತಿ ತಂದಿದ್ದೇನೆ ಎಸ್‌ಸಿ-ಎಸ್‌ಟಿ ಮಹಿಳಾ ಮೀಸಲಾತಿ ತಂದಿದ್ದೇನೆ. ಇದರಿಂದ ರಾಜ್ಯಾದ್ಯಂತ ಒಂದು ಲಕ್ಷ ಕಾರ್ಯಕರ್ತರಿಗೆ ಅನುಕೂಲವಾಗಿದೆ. ಹಾಸನ ಉಸ್ತುವಾರಿಯಾಗಿ ಹಳೇ ಮೈಸೂರು ಭಾಗದಲ್ಲಿ ಹಾಸನ ಗೆಲ್ಲುವಂತೆ ಕೆಲಸ ಮಾಡಿದ್ದೇನೆ. ನಾನು ನೆಹರೂ ಫ್ಯಾಮಿಲಿಗೆ ನಿಷ್ಠೆಯಿಂದ ಇದ್ದೇನೆ. ನಾನು ಈ ಪತ್ರ ಬರೆದ ಉದ್ದೇಶ ಇಷ್ಟೇ. ನನ್ನ ವಿರುದ್ಧ ತಮಗೆ ತಪ್ಪು ಮಾಹಿತಿ ನೀಡಿದವರ ಮೇಲೆ ಕ್ರಮ ಆಗಬೇಕು. ನನ್ನ ಹೇಳಿಕೆಯ ಉದ್ದೇಶವನ್ನ ತಮಗೆ ತಪ್ಪಾಗಿ ಅರ್ಥೈಸುವಂತೆ ಮಾಡಿದವರ ಮೇಲೆ ಕ್ರಮ ಆಗಬೇಕು. ಜೊತೆಗೆ ಈ ಬಗ್ಗೆ ಕೂಲಂಕಷವಾಗಿ ಚರ್ಚಿಸಲು ತಮ್ಮ ಭೇಟಿಗೆ ಅವಕಾಶ ನೀಡಿ ಎಂದು ಮನವಿ ಮಾಡಿದ್ದಾರೆ.
ಸಚಿವ ಸ್ಥಾನದಿಂದ ವಜಾ ಬಳಿಕ ರಾಹುಲ್ ಗಾಂಧಿಗೆ ಕೆಎನ್ ರಾಜಣ್ಣ ಪತ್ರ ಬರೆದಿದ್ದಾರೆ. ತನ್ನ ಹೇಳಿಕೆಯ ಕುರಿತು ಸ್ಪಷ್ಟೀಕರಣ ನೀಡಿ ಕಳೆದ ತಿಂಗಳ 17 ರಂದು ಪತ್ರ ಬರೆದಿದ್ದಾರೆ. ಮಾಧ್ಯಮದವರ ಪ್ರಶ್ನೆ ಹಾಗೂ ಉತ್ತರ ಎರಡನ್ನೂ ಉಲ್ಲೇಖಿಸಿ ಸುಮಾರು 8 ಪುಟಗಳ ಪತ್ರ ಬರೆದಿದ್ದಾರೆ. ಕೆ.ಎನ್ ರಾಜಣ್ಣ ನನ್ನ ಹೇಳಿಕೆಯ ಹಿಂದಿರುವ ಸತ್ಯ ಹಾಗೂ ಅದನ್ನು ತಿರುಚಿದ ಬಗ್ಗೆ ನಿಮ್ಮ ಮುಂದಿಟ್ಟಿದ್ದೇನೆ. ನನ್ನ ಹೇಳಿಕೆಯನ್ನು ತಪ್ಪಾಗಿ ನಿಮ್ಮ ಮುಂದೆ ತಂದವರ ಮೇಲೆ ಕ್ರಮ ಕೈಗೊಳ್ಳಿ. ಜೊತೆಗೆ ಈ ಬಗ್ಗೆ ಮಾತನಾಡಲು ಅವಕಾಶ ನೀಡುವಂತೆ ಪತ್ರದಲ್ಲಿ ಮನವಿ ಮಾಡಿದ್ದಾರೆ. ಆದರೆ, ಪವರ್ ಶೇರಿಂಗ್‌ನ ನಿರ್ಣಾಯಕ ಹಂತದಲ್ಲಿ ಸಿಎಂ ಪರವಾಗಿ ಡಿಸಿಎಂ ಡಿಕೆಶಿ ವಿರುದ್ಧವಾಗಿ ರಾಜಣ್ಣ ಪತ್ರ ಬರೆದಿದ್ದಾರೆ. ಇದನ್ನೂ ಓದಿ: ಸಾಂವಿಧಾನಿಕ ಸಂಸ್ಥೆಗಳ ಮೇಲೆ ಬಿಜೆಪಿಯಿಂದ ದಾಳಿ: ಜರ್ಮನಿಯಲ್ಲಿ ರಾಗಾ ಕಿಡಿ


