ತುಮಕೂರು: ಕೆಪಿಸಿಸಿ ಅಧ್ಯಕ್ಷರು ಆರ್‌ಎಸ್‍ಎಸ್ (RSS) ಗೀತೆ ಮಾತ್ರ ಅಲ್ಲ, ಏನು ಬೇಕಾದ್ರೂ ಮಾಡಬಹುದು. ನಾವು ಮಾತ್ರ ಮಾಡುವ ಹಾಗಿಲ್ಲ ಎಂದು ಡಿಸಿಎಂ ಡಿ.ಕೆ ಶಿವಕುಮಾರ್ (DKShivakumar) ವಿರುದ್ಧ ಮಾಜಿ ಸಚಿವ ರಾಜಣ್ಣ ಕಿಡಿಕಾರಿದ್ದಾರೆ.
ತುಮಕೂರಿನಲ್ಲಿ (Tumakuru) ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ಈ ವೇಳೆ, ಡಿಕೆಶಿ ಆರ್ಎಸ್ಎಸ್ ಗೀತೆನೂ ಹಾಡಬಹುದು. ಅಮಿತ್ ಶಾ ಜೊತೆಗೆ ಹೋಗಿ ಸದ್ಗುರುನೊಂದಿಗೆ ಡಯಾಸ್ ಮೇಲೆ ಕುಳಿತುಕೊಳ್ಳಬಹುದು. ನಾವು ಅದನ್ನು ಮಾಡುವ ಹಾಗಿಲ್ಲ ಎಂದು ಬೇಸರ ಹೊರಹಾಕಿದ್ದಾರೆ. ಇದನ್ನೂ ಓದಿ: ಅನಾಮಿಕ ವ್ಯಕ್ತಿಯ ಹಿಂದೆ ಯಾರಿದ್ದಾರೆ ಹೊರಬರುತ್ತೆ: ರಾಮಲಿಂಗಾ ರೆಡ್ಡಿ
ಕೆಪಿಸಿಸಿ ಅಧ್ಯಕ್ಷರು ಪ್ರಯಾಗ್ ರಾಜ್‍ಗೆ ಹೋಗಿ ಸ್ನಾನ ಮಾಡಿಬಿಟ್ಟರೆ ಬಡವರ ಹೊಟ್ಟೆ ತುಂಬುತ್ತಾ ಅಂತ ಹೇಳಿದ್ದರು. ಅದಕ್ಕೆ ವಿರುದ್ಧವಾಗಿ ಡಿಕೆಶಿ ಅಲ್ಲಿಗೂ ಹೋಗಿದ್ದರು. ಅಂಬಾನಿ ಮನೆ ಮದುವೆಯನ್ನು ರಾಹುಲ್ ಗಾಂಧಿಯವರು ಸ್ವೀಕಾರ ಮಾಡಲು ಹಿಂದೆ ಮುಂದೆ ನೋಡಿದ್ರು. ಅವರು ಸ್ವೀಕಾರ ಮಾಡೋದಿಲ್ಲ. ಅಂತಹ ಮದುವೆಗೆ ಡಿಕೆಶಿ ಕುಟುಂಬ ಸಮೇತ ಹೋಗ್ತಾರೆ. ಮುಂದೊಂದು ದಿನ ಇದರ ಬಗ್ಗೆ ಜನ ತೀರ್ಮಾನ ಮಾಡ್ತಾರೆ ಎಂದಿದ್ದಾರೆ.
ನಾವು ಯಾವುದೇ ಎಂಎಲ್‍ಗಳ ಸಭೆ ಕರೆಯೋ ಹಾಗಿಲ್ಲ. ಬೇರೆಯವರು ಕರೆಯಬಹುದು, ಮಾತನಾಡಬಹುದು. ಇವಕ್ಕೆಲ್ಲಾ ಸೂಕ್ತ ಸಮಯದಲ್ಲಿ ಸೂಕ್ತ ಉತ್ತರ ನೀಡುತ್ತೇನೆ ಎಂದು ಅಸಮಾಧಾನ ಹೊರಹಾಕಿದ್ದಾರೆ. ಇದನ್ನೂ ಓದಿ: ಬಾನು ಮುಷ್ತಾಕ್‌ರಿಂದ ದಸರಾ ಉದ್ಘಾಟನೆಗೆ ಶಾಸಕ ಯತ್ನಾಳ್ ಆಕ್ಷೇಪ