ಲಾರ್ಡ್ಸ್: ಕನ್ನಡಿಗ ಕೆ.ಎಲ್.ರಾಹುಲ್ ಆಕರ್ಷಕ ಶತಕ, ಪಂತ್, ಜಡೇಜಾ ಅರ್ಧಶತಕ ನೆರವಿನಿಂದ ಟೀಂ ಇಂಡಿಯಾ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ ಇಂಗ್ಲೆಂಡ್ ಲೆಕ್ಕ ಚುಕ್ತಾ ಮಾಡಿದೆ.
ಲಾರ್ಡ್ಸ್‌ನಲ್ಲಿ ಶುರುವಾರದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ಮೊದಲ ಇನ್ನಿಂಗ್ಸ್‌ನಲ್ಲಿ 387 ರನ್ ಗಳಿಸಿ ಆಲೌಟ್ ಆಯಿತು. ಇದಕ್ಕೆ ಉತ್ತರವಾಗಿ ಭಾರತ ತಂಡ ಕೂಡ ಅಷ್ಟೇ ರನ್ ಗಳಿಸಿ ಆಲೌಟ್ ಆಯಿತು.
2ನೇ ದಿನದಾಟದ ಅಂತ್ಯಕ್ಕೆ ಭಾರತ 3 ವಿಕೆಟ್‌ಗೆ 145 ರನ್ ಗಳಿಸಿತ್ತು. ಶನಿವಾರ ತಂಡಕ್ಕೆ ರಾಹುಲ್ ಮತ್ತು ಪಂತ್ ನೆರವಾದರು. 117 ಬಾಲ್‌ಗಳಿಗೆ ರಾಹುಲ್ 100 ರನ್ ಗಳಿಸಿ ಜವಾಬ್ದಾರಿಯುತ ಆಟವಾಡಿದರು. ಪಂತ್ 112 ಎಸೆತಗಳಲ್ಲಿ 74 ರನ್ ಗಳಿಸಿದರು.
ರವೀಂದ್ರ ಜಡೇ 72, ನಿತೀಶ್ ಕುಮಾರ್ ರೆಡ್ಡಿ 30, ವಾಷಿಂಗ್ಟನ್ ಸುಂದರ್ 23 ರನ್ ಗಳಿಸಿ ಸಮಬಲ ಸಾಧಿಸಲು ನೆರವಾದರು. ಇಂಗ್ಲೆಂಡ್ ಪರ ಕ್ರಿಸ್ ವೋಕ್ಸ್ 3, ಜೋಫ್ರಾ ಆರ್ಚರ್ ಮತ್ತು ಬೆನ್ ಸ್ಟೋಕ್ಸ್ ತಲಾ 2, ಬ್ರೈಡನ್ ಕಾರ್ಸೆ, ಶೋಯೆಬ್ ಬಶೀರ್ ತಲಾ 1 ವಿಕೆಟ್ ಪಡೆದರು.