ವೀರ್ ಸಾವರ್ಕರ್ ಎಂದರೆ ಆನೆ, ನಾಯಿ ನರಿ ಮಾತಿಗೆಲ್ಲ ಅದು ತಲೆಕೆಡಿಸಿಕೊಳ್ಳಲ್ಲ: ಕಾಂತೇಶ್

Public TV
1 Min Read

ಹಾವೇರಿ: ಕೆಲವರು ವೀರ್ ಸಾವರ್ಕರ್ (V.D Savarkar) ಅವರನ್ನು ರಾಷ್ಟ್ರದ್ರೋಹಿ ಎಂದು ಕರೆಯುತ್ತಿದ್ದಾರೆ. ಸಾವರ್ಕರ್ ಎಂದರೆ ಆನೆ ಇದ್ದಂತೆ, ಆನೆ ನಡೆಯುವಾಗ ನಾಯಿ ನರಿ ಮಾತನಾಡುತ್ತವೆ. ಅದಕ್ಕೆಲ್ಲಾ ಆನೆ ತಲೆ ಕೆಡೆಸಿಕೊಳ್ಳುವುದಿಲ್ಲ ಎಂದು ಮಾಜಿ ಸಚಿವ ಈಶ್ವರಪ್ಪ ಅವರ ಪುತ್ರ ಕೆ.ಈ ಕಾಂತೇಶ್ (K.E Kantesh) ವ್ಯಂಗ್ಯವಾಡಿದ್ದಾರೆ.

ಹಾವೇರಿಯಲ್ಲಿ (Haveri) ಸಾವರ್ಕರ್ ಸಂಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಈ ವೇಳೆ ಸಾವರ್ಕರ್ ವಿಚಾರವಾಗಿ ಇತ್ತೀಚಿನ ಬೆಳವಣಿಗೆ ಕುರಿತಾಗಿ ಅವರು ಪ್ರತಿಕ್ರಿಯೆ ನೀಡಿದ್ದಾರೆ. ನಾವೆಲ್ಲಾ ಆನೆಗೆ ಹೂವು ಕೊಡ್ತೀವಿ. ಹಾಗೇ ನಾಯಿ ನರಿಗಳ ಮಾತಿಗೆ ತಲೆ ಕೆಡೆಸಿಕೊಳ್ಳಬೇಕಿಲ್ಲ. ಸಾವರ್ಕರ್ ಎಂದರೆ ಆನೆ ಇದ್ದಂತೆ. ಆನೆ ಸಂಚರಿಸುವಾಗ ಇದೆಲ್ಲ ಸಹಜ ಎಂದು ಕುಟುಕಿದ್ದಾರೆ. ಇದನ್ನೂ ಓದಿ: ವಸತಿ ಶಾಲೆಯಲ್ಲಿ ಬಾಲಕಿಯರ ಬಟ್ಟೆ ಬದಲಿಸುವ ವೀಡಿಯೋ ತೆಗೆದ ಸಿಬ್ಬಂದಿ – ಪೋಷಕರ ಆಕ್ರೋಶ

ನಮ್ಮ ದೇಶ ಹಿಂದೂರಾಷ್ಟ್ರ ಆಗುವುದರಲ್ಲಿ ಯಾವುದೇ ಅನುಮಾನ ಇಲ್ಲ. ನಮ್ಮ ದೇಶಕ್ಕಾಗಿ ರಾಷ್ಟ್ರಭಕ್ತರ ಸಂಖ್ಯೆ ಹೆಚ್ಚಾಗಬೇಕು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಇತ್ತೀಚೆಗೆ ಸಚಿವ ಪ್ರಿಯಾಂಕ್ ಖರ್ಗೆಯವರು, ಸಾವರ್ಕರ್ ಫೋಟೋವನ್ನು ವಿಧಾನಸೌಧ ಸಭಾಂಗಣದಲ್ಲಿರುವ ಸಾವರ್ಕರ್ ಫೋಟೋ ತೆರವುಗೊಳಿಸಬೇಕು ಎಂದಿದ್ದರು. ಬಳಿಕ ತೀವ್ರ ಟೀಕೆಗಳು ವ್ಯಕ್ತವಾದ ಬಳಿಕ, ನನ್ನ ಸಿದ್ಧಾಂತ ಬಸವ ತತ್ವ, ನಾರಾಯಣ ಗುರು, ಡಾ.ಬಿ.ಆರ್.ಅಂಬೇಡ್ಕರ್ ಅವರ ಸಿದ್ಧಾಂತ. ಹೀಗಾಗಿ ಸಾವರ್ಕರ್ ಸಿದ್ಧಾಂತವನ್ನು ನಾನು ಒಪ್ಪುವುದಿಲ್ಲ. ವಿಧಾನಸೌಧ ಸಭಾಂಗಣದಲ್ಲಿ ವಿ.ಡಿ. ಸಾವರ್ಕರ್ ಅವರ ಭಾವಚಿತ್ರ ತೆರವು ಮಾಡುವ ಕುರಿತು ನನ್ನ ಹೇಳಿಕೆಗೆ ನಾನು ಈಗಲೂ ಬದ್ಧವಾಗಿದ್ದೇನೆ. ಸಾವರ್ಕರ್ ಅವರು ಬ್ರಿಟೀಷರಿಂದ ಪಿಂಚಣಿ ಪಡೆಯುತ್ತಿದ್ದರು ಎಂದು ಸಮರ್ಥಿಸಿಕೊಂಡಿದ್ದರು. ಇದನ್ನೂ ಓದಿ: ಆಟವಾಡುತ್ತಾ ನದಿಗೆ ಬಿದ್ದ ಮಗುವಿನ ರಕ್ಷಣೆಗಾಗಿ ಧುಮುಕಿದ ಐವರು ಸಾವು!

Share This Article