ನವದೆಹಲಿ: ರಾಜ್ಯದ ಫ್ಲೈಓವರ್‌ಗಳ ಸುರಕ್ಷತೆ ಬಗ್ಗೆ ಸೂಕ್ತ ಪರಿಶೀಲನೆ ನಡೆಸಿ ಕ್ರಮ ತೆಗೆದುಕೊಳ್ಳುವ ಅಗತ್ಯವಿದೆ. ಈ ಹಿನ್ನಲೆ ಕೂಡಲೇ ಕೇಂದ್ರ ಸರ್ಕಾರ ತಜ್ಞರ ತಂಡವೊಂದನ್ನು ರಾಜ್ಯ ಕಳುಹಿಸಬೇಕು ಎಂದು ಸಂಸದ ಕೆ.ಸಿ. ರಾಮಮೂರ್ತಿ ರಾಜ್ಯಸಭೆಯಲ್ಲಿ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ರಾಜ್ಯಸಭೆಯ ಶೂನ್ಯವೇಳೆಯಲ್ಲಿ ಪ್ರಸ್ತಾಪಿಸಿದ ಕೆ.ಸಿ ರಾಮಮೂರ್ತಿ ರಾಜ್ಯದ ರಾಷ್ಟ್ರೀಯ ಹೆದ್ದಾರಿಗಳಲ್ಲಿರುವ ಫ್ಲೈಓವರ್‌ಗಳ ಸುರಕ್ಷತೆ ಬಗ್ಗೆ ಆತಂಕ ಶುರುವಾಗಿದೆ. ಅದರಲ್ಲೂ ಬೆಂಗಳೂರಿನ ದೊಡ್ಡ ಫೈಓವರ್ ಆಗಿರುವ ಗೊರಗುಂಟೆಪಾಳ್ಯ – ನಾಗಸಂದ್ರ ಫ್ಲೈಓವರ್ ಸುರಕ್ಷಿತವಾಗಿಲ್ಲ. ಬಿರುಕು ಕಂಡು ಬಂದಿದ್ದು ಭಾರೀ ವಾಹನಗಳ ಸಂಚಾರಕ್ಕೆ ಸೂಕ್ತವಾಗಿಲ್ಲ ಎಂದು ತಜ್ಞರು ಹೇಳಿದ್ದಾರೆ. ಇದನ್ನೂ ಓದಿ : ಅಭಿಮಾನಿಗಳ ಒತ್ತಡಕ್ಕೆ ಕೊನೆಗೂ ಮಣಿದ ‘ವಿಕ್ರಾಂತ್ ರೋಣ’ :ಏಪ್ರಿಲ್ ಮೊದಲ ವಾರದಲ್ಲಿ ಟೀಸರ್
ಈ ಫ್ಲೈಓವರ್ ಕಳೆದ 12 ವರ್ಷದ ಹಿಂದೆ ನಿರ್ಮಿಸಲಾಗಿತ್ತು. ಜನರ ತೆರಿಗೆ ಹಣದಿಂದ ಹೆಚ್ಚು ಹಣ ಖರ್ಚು ಮಾಡಿ ನಿರ್ಮಿಸಲಾಗಿತ್ತು. ಈಗ ಫ್ಲೈಓವರ್ ಸುರಕ್ಷಿತವಾಗಿಲ್ಲ, ಸುರಕ್ಷಿತವಾಗಿಲ್ಲದಿರುವುದು ಆಘಾತಕಾರಿ ವಿಚಾರವಾಗಿದೆ. ಫ್ಲೈಓವರ್ ನಿರ್ಮಾಣದ ವೇಳೆ ಏಜೆನ್ಸಿ ಮತ್ತು ಗುತ್ತಿಗೆದಾರರು ಗುಣಮಟ್ಟ ಒತ್ತು ನೀಡಿಲ್ಲ. ದೇಶಾದ್ಯಂತ ಫ್ಲೈಓವರ್ ದುರಂತಗಳು ಸಂಭವಿಸುತ್ತಿವೆ ಆಗಾಗ್ಗೆ ಕಾಮಗಾರಿಗಾಗಿ ಫ್ಲೈಓವರ್ ಬಂದ್ ಮಾಡಲಾಗುತ್ತಿದೆ. ಇದನ್ನೂ ಓದಿ : ಕೆಜಿಎಫ್ 2 ಟ್ರೈಲರ್ ಬಿಡುಗಡೆಗೆ ಹೋಸ್ಟ್ ಮಾಡಲಿದ್ದಾರೆ ಕರಣ್ ಜೋಹಾರ್
ಇದರಿಂದ ಜನರಿಗೆ ಸಮಸ್ಯೆ ಆಗುವುದರ ಜೊತೆಗೆ ಆರ್ಥಿಕ ಚಟುವಟಿಕೆಗಳಿಗೂ ಹೊಡೆತ ಬೀಳುತ್ತೆ. ಹಿಂದೆ ಕಟ್ಟುತ್ತಿದ್ದಂತಹ ಫ್ಲೈಓವರ್ ಗಳು ಹೆಚ್ಚು ಗುಣಮಟ್ಟದಿಂದ ಇರುತ್ತಿದ್ದವು. ದೀರ್ಘಕಾಲ ಬಳಕೆ ಮಾಡಿರುವ ಉದಾಹರಣೆಗಳು ಇವೆ. ಆದರೆ ಇತ್ತೀಚಿಗೆ ನಿರ್ಮಾಣ ಮಾಡಿರುವ ಫ್ಲೈಓವರ್‌ಗಳ ಗುಣಮಟ್ಟ ಕಾಪಾಡಿಕೊಂಡಿಲ್ಲ, ದೀರ್ಘ ಬಾಳಿಕೆ ಬರುತ್ತಿಲ್ಲ. ಹೀಗಾಗಿ ಕೇಂದ್ರ ಸರ್ಕಾರ ಈ ಬಗ್ಗೆ ಗಮನಹರಿಸಬೇಕು. ಶೀಘ್ರದಲ್ಲೇ ರಾಜ್ಯಕ್ಕೆ ಕೇಂದ್ರ ಸರ್ಕಾರ ತಜ್ಞರ ತಂಡ ಕಳುಹಿಸಿ ಎಲ್ಲಾ ಫ್ಲೈಓವರ್‌ಗಳ ಪರಿಶೀಲನೆ ಮಾಡಿ ಎಂದು ಒತ್ತಾಯಿಸಿದ್ದಾರೆ.