ವಂಶಾಡಳಿತ ರಾಜಕಾರಣಕ್ಕೆ ಬಿಜೆಪಿಯಲ್ಲಿ ಸ್ಥಾನವಿಲ್ಲ: ಜ್ಯೋತಿರಾದಿತ್ಯ ಸಿಂಧಿಯಾ

Public TV
1 Min Read

ನವದೆಹಲಿ: ಪಕ್ಷದ ಕಾರ್ಯಕರ್ತರ ಕೆಲಸದ ಆಧಾರದ ಮೇಲೆ ಪ್ರತಿಫಲವಿದೆಯೇ ಹೊರತು ವಂಶಾಡಳಿತ ರಾಜಕಾರಣಕ್ಕೆ ಬಿಜೆಪಿಯಲ್ಲಿ ಸ್ಥಾನವಿಲ್ಲ ಎಂದು ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷದ ಕಾರ್ಯಕರ್ತರಿಗೆ ಅವರ ಕೆಲಸದ ಆಧಾರದ ಮೇಲೆ ಪ್ರತಿಫಲವನ್ನು ನೀಡಬೇಕು ಮತ್ತು ಕುಟುಂಬದ ಸಂಬಂಧಗಳಿಗೆ ಅನುಗುಣವಾಗಿ ಸ್ಥಾನವನ್ನು ನೀಡಬಾರದು ಎಂದು ಪ್ರಧಾನಿ ಮೋದಿ ನಂಬಿದ್ದಾರೆ. ಅದನ್ನು ಪ್ರತಿಯೊಬ್ಬ ಬಿಜೆಪಿ ಕಾರ್ಯಕರ್ತನು ಮುಂದುವರಿಸಬೇಕು ಎಂದರು.

ಬಿಜೆಪಿಯಲ್ಲಿ ವಂಶಾಡಳಿತ ರಾಜಕಾರಣವಿಲ್ಲ. ಪ್ರಧಾನ ಮಂತ್ರಿ ಅವರ ಚಿಂತನೆ ಮತ್ತು ಸಿದ್ಧಾಂತದ ಪ್ರಕಾರ ಕಾರ್ಮಿಕರಿಗೆ ಅವರ ಅತ್ಯುತ್ತಮ ಸೇವೆಯ ಆಧಾರದ ಮೇಲೆ ಪುರಸ್ಕಾರ ನೀಡಬೇಕು ಮತ್ತು ಅವರ ಕುಟುಂಬವನ್ನು ಆಧರಿಸಿಲ್ಲ ಎಂದು ಹೇಳಿದರು. ಇದನ್ನೂ ಓದಿ: ಭಗವಂತ್ ಮಾನ್ ಅಹಂಕಾರಿಯಲ್ಲ- ಸ್ವಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದ ಕೈ ಮುಖಂಡ ಸಿಧು

ಗ್ವಾಲಿಯರ್-ಚಂಬಲ್ ವಿಭಾಗದಲ್ಲಿ ಕಾಂಗ್ರೆಸ್ ನಾಯಕರು ಸಭೆ ನಡೆಸುತ್ತಿರುವ ವಿಚಾರವಾಗಿ ಪ್ರತಿಕ್ರಿಯಿಸಿ, ನಾನು ಆ ಸಮಯದಲ್ಲಿ ಕಾಂಗ್ರೆಸ್‍ನಲ್ಲಿದ್ದಾಗ ಮತ್ತು ಈಗ ಬಿಜೆಪಿಯಲ್ಲಿರುವಾಗ ಕೆಲವರು ಹೊಟ್ಟೆಕಿಚ್ಚು ಪಡುತ್ತಿದ್ದಾರೆ. ಆದರೆ ನಾನು ಜನಸೇವೆಯ ಹಾದಿಯಲ್ಲೇ ಮುನ್ನಡೆಯುತ್ತೇನೆ. ಇದು ಪ್ರಗತಿ ಮತ್ತು ಅಭಿವೃದ್ಧಿಯ ಮಾರ್ಗವಾಗಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇದನ್ನೂ ಓದಿ: ಡಾಬಾದಲ್ಲಿ ಊಟ ಮಾಡುತ್ತಿದ್ದ ಯುವಕನಿಗೆ ಚಾಕುವಿನಿಂದ ಇರಿದು ಹತ್ಯೆ

Share This Article
Leave a Comment

Leave a Reply

Your email address will not be published. Required fields are marked *