ರಾಜತಾಂತ್ರಿಕ ಬಿಕ್ಕಟ್ಟಿನ ಮಧ್ಯೆ ದೀಪಾವಳಿ ಆಚರಿಸಿದ ಕೆನಡಾ ಪ್ರಧಾನಿ

Public TV
1 Min Read

ಒಟ್ಟೋವಾ: ಭಾರತ ಮತ್ತು ಅಮೆರಿಕ ರಾಷ್ಟ್ರಗಳ ನಡುವೆ ನಡೆಯುತ್ತಿರುವ ರಾಜತಾಂತ್ರಿಕ ಉದ್ವಿಗ್ನತೆಯ ಮಧ್ಯೆ ಕೆನಡಾದ (Canada) ಪ್ರಧಾನಿ ಜಸ್ಟಿನ್‌ ಟ್ರುಡೊ (Justin Trudeau) ದೀಪಾವಳಿ ಆಚರಿಸಿದ್ದಾರೆ.

ದೀಪಾವಳಿಯ ಶುಭಾಶಯಗಳು! ಈ ವಾರ ಸಮುದಾಯದೊಂದಿಗೆ ಆಚರಿಸಿದ ಹಲವು ವಿಶೇಷ ಕ್ಷಣಗಳು ಎಂದು ಟ್ರೂಡೊ ಎಕ್ಸ್‌ನಲ್ಲಿನ ಪೋಸ್ಟ್‌ ಹಂಚಿಕೊಂಡಿದ್ದಾರೆ. ಆನ್‌ಲೈನ್‌ನಲ್ಲಿ ಹಂಚಿಕೊಂಡ ವೀಡಿಯೊದಲ್ಲಿ, ಟ್ರೂಡೊ ಅವರು ಕೆನಡಾದ ಮೂರು ಹಿಂದೂ ದೇವಾಲಯಗಳಿಂದ ಉಡುಗೊರೆಯಾಗಿ ತಮ್ಮ ಮಣಿಕಟ್ಟಿನ ಮೇಲೆ ಧಾರ್ಮಿಕ ಎಳೆಗಳನ್ನು ಕಟ್ಟಿರುವುದು ಕಂಡುಬಂದಿದೆ. ಇದನ್ನೂ ಓದಿ: ಅಮೆರಿಕದಲ್ಲಿ ಅಧ್ಯಕ್ಷರನ್ನು ಆಯ್ಕೆ ಮಾಡೋದು 7 ರಾಜ್ಯದ ಜನತೆ! – ಏನಿದು Swing States? ಯಾಕೆ ಇಷ್ಟೊಂದು ಮಹತ್ವ?

ಕಳೆದ ಕೆಲವು ತಿಂಗಳುಗಳಲ್ಲಿ ನಾನು ಮೂರು ವಿಭಿನ್ನ ಹಿಂದೂ ದೇವಾಲಯಗಳಲ್ಲಿದ್ದಾಗ ಈ ಎಳೆಗಳನ್ನು ಪಡೆದುಕೊಂಡೆ. ಎಲ್ಲರೂ ನನ್ನನ್ನು ಆಶೀರ್ವದಿಸಿದ್ದಾರೆ. ಅವುಗಳು ತಂತಾನೆ ಬೀಳುವವರೆಗೂ ನಾನು ತೆಗೆಯಲ್ಲ ಎಂದು ಟ್ರುಡೊ ತಿಳಿಸಿದ್ದಾರೆ.

ಇಂಡೋ-ಕೆನಡಿಯನ್ ಸಮುದಾಯವಿಲ್ಲದೆ ಕೆನಡಾದಲ್ಲಿ ದೀಪಾವಳಿ ಸಾಧ್ಯವಿಲ್ಲ. ಇಂಡೋ-ಕೆನಡಿಯನ್ನರು ಕೆನಡಾದ ಅತ್ಯುತ್ತಮ ನಾಗರಿಕರು. ಕಲಾವಿದರು, ಉದ್ಯಮಿಗಳು, ವೈದ್ಯರು, ಶಿಕ್ಷಕರಾಗಿದ್ದಾರೆ ಎಂದು ಬಣ್ಣಿಸಿದ್ದಾರೆ. ಇದನ್ನೂ ಓದಿ: ಮತ್ತೆ ಕ್ಯಾತೆ – ಭಾರತವನ್ನು ಸೈಬರ್‌ ಬೆದರಿಕೆ ಪಟ್ಟಿಗೆ ಸೇರಿಸಿದ ಕೆನಡಾ

Share This Article