ಮುಡಾದಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ಆರೋಪ – 8 ಲಕ್ಷ ದಾಖಲಾತಿ ನೀಡುವಂತೆ ಜಸ್ಟಿಸ್ ದೇಸಾಯಿ ಆಯೋಗ ಸೂಚನೆ

Public TV
2 Min Read

– 19 ಲಕ್ಷ ರೂ.ಗೆ ಜೆರಾಕ್ಸ್‌ ಮಿಷಿನ್‌ ಖರೀದಿಸಿದ ಮುಡಾ

ಮೈಸೂರು: ಮುಡಾ (ಮೈಸೂರು ನರಾಭಿವೃದ್ಧಿ ಪ್ರಾಧಿಕಾರ – MUDA)ದಲ್ಲಿ ಬ್ರಂಹ್ಮಾಂಡ ಭ್ರಷ್ಟಾಚಾರ ಆರೋಪದ ಹಿನ್ನೆಲೆ 8 ಲಕ್ಷ ದಾಖಲಾತಿ ನೀಡುವಂತೆ ಜಸ್ಟಿಸ್ ದೇಸಾಯಿ ಆಯೋಗದಿಂದ ಮುಡಾಗೆ ಸೂಚನೆ ನೀಡಿದೆ ಎಂದು ಉನ್ನತ ಮೂಲಗಳು ತಿಳಿಸಿವೆ. 8 ಲಕ್ಷ ದಾಖಲಾತಿ ನೀಡುವಂತೆ ಸೂಚಿಸಿರುವ ಜಸ್ಟಿಸ್ ದೇಸಾಯಿ ಆಯೋಗ, ಎಲ್ಲಾ ದಾಖಲೆಗಳು (MUDA Document) ಸರ್ಟಿಫೈಡ್ ಆಗಿರಬೇಕು ಎಂದು ತಾಕೀತು ಮಾಡಿದೆ.

2005 ರಿಂದ 2024ರ ವರೆಗೆ 50:50 ಅನುಪಾತದಡಿ ಹಂಚಿಕೆಯಾದ ನಿವೇಶನಗಳಿಗೆ (50:50 Site) ಸಂಬಂಧಿಸಿದ ದಾಖಲೆಗಳು, ಪ್ರೋತ್ಸಾಹದಾಯಿಕ ನಿವೇಶನ ಹಾಗೂ ಬದಲಿ ನಿವೇಶನಗಳ ಹಂಚಿಕೆಗೆ ಸಂಬಂಧಿಸಿದ ದಾಖಲೆಗಳನ್ನು ಸಮಗ್ರವಾಗಿ ನೀಡುವಂತೆ ಸೂಚನೆ ನೀಡಿದೆ. ಈ ಹಿನ್ನೆಲೆಯಲ್ಲಿ ಮುಡಾ 19 ಲಕ್ಷ ರೂ. ಮೌಲ್ಯದ 9 ಹೊಸ ಜೆರಾಕ್ಸ್ ಮೆಷಿನ್ ಖರೀದಿಸಿದೆ. ಇದನ್ನೂ ಓದಿ: ಬೀದರ್‌ ಪೊಲೀಸರ ಭರ್ಜರಿ ಕಾರ್ಯಾಚರಣೆ – 2 ಕೋಟಿಗೂ ಅಧಿಕ ಮೌಲ್ಯದ ಗಾಂಜಾ ಸೀಜ್‌

ಈಗಾಗಲೇ ಮೂಡಾ ಬಳಿ 4 ಹಳೆಯ ಜೆರಾಕ್ಸ್ ಮೆಷಿನ್‌ಗಳಿದ್ದು, ಇದರೊಂದಿಗೆ ಹೆಚ್ಚುವರಿ 9 ಜೆರಾಕ್ಸ್‌ ಮಿಷನ್‌ಗಳನ್ನು ಖರೀದಿ ಮಾಡಿದೆ. ಒಟ್ಟು 13 ಜೆರಾಕ್ಸ್ ಮಿಷಿನ್‌ಗಳಲ್ಲಿ ದಾಖಲಾತಿ ತೆಗೆಯುವ ಕೆಲಸ ನಡೆಯುತ್ತಿದೆ. ಜೆರಾಕ್ಸ್‌ ಮಿಷಿನ್‌ ಖರೀದಿ ಮಾಡಿರುವ ಬಿಲ್‌ ಪ್ರತಿ ಪಬ್ಲಿಕ್‌ ಟಿವಿಗೆ ಲಭ್ಯವಾಗಿದೆ. ಜಸ್ಟೀಸ್‌ ದೇಸಾಯಿ ಆಯೋಗಕ್ಕೆ ಅಲ್ಲದೇ ಲೋಕಾಯುಕ್ತಕ್ಕೂ ದಾಖಲೆಗಳ 1 ಪ್ರತಿ ನೀಡಬೇಕಿದೆ ಎಂದು ತಿಳಿದುಬಂದಿದೆ. ಇದನ್ನೂ ಓದಿ: ಜಿದ್ದಾ ಜಿದ್ದಿ ಕಣದಲ್ಲಿ ಗೆದ್ದು ಬೀಗಿದ ಭಾರತ; ಪಾಕ್‌ ವಿರುದ್ಧ 6 ವಿಕೆಟ್‌ ಜಯ – ಸೆಮಿಸ್‌ ಕನಸು ಜೀವಂತ

14 ನಿವೇಶನ ಮಹಜರು:
ಸಿಎಂ ಪತ್ನಿ ಪಾರ್ವತಿ ಸಿದ್ದರಾಮಯ್ಯ ಅವರಿಗೆ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ ನೀಡಿದ್ದ ವಿಜಯನಗರದ 3 ಮತ್ತು 4ನೇ ಹಂತದಲ್ಲಿ ನೀಡಿದ್ದ 14 ನಿವೇಶನಗಳನ್ನು ಈಗಾಗಲೇ ವಾಪಸ್ ನೀಡಿದ್ದಾರೆ. ಈ ನಡುವೆಯೆ ಅದರ ತನಿಖೆ ತೀವ್ರಗೊಳ್ಳುತ್ತಿದ್ದು, ಲೋಕಾಯುಕ್ತ ಪೊಲೀಸರು ಶುಕ್ರವಾರ 14 ಸೈಟುಗಳ ಮಹಜರು ನಡೆಸಿದ್ದಾರೆ. ಲೋಕಾಯುಕ್ತ ಎಸ್ಪಿ ಟಿ.ಜೆ ಉದೇಶ್ ನೇತೃತ್ವದಲ್ಲಿ ಅಧಿಕಾರಿಗಳ ತಂಡ ದೂರುದಾರ ಸ್ನೇಹಮಹಿ ಕೃಷ್ಣ ಸಮಕ್ಷಮದಲ್ಲೇ ಸ್ಥಳ ಮಹಜರು ನಡೆಸಿದ್ದಾರೆ. ಈ ಸೈಟ್ ಗಳ ನಕ್ಷೆಯನ್ನು ಇಟ್ಟುಕೊಂಡು ಇವುಗಳ ಮಹಜರ್ ಮಾಡಲಾಗಿದೆ. ಇದನ್ನೂ ಓದಿ: ಮಾಜಿ ಶಾಸಕ ಮೊಯಿದ್ದೀನ್ ಬಾವ ಸಹೋದರ ಮಿಸ್ಸಿಂಗ್; ನಾಪತ್ತೆ ಹಿಂದಿದ್ಯಾ ಮಹಿಳೆ ಕೈವಾಡ? ಬ್ಲ್ಯಾಕ್‌ಮೇಲ್‌ಗೆ ಬಲಿಯಾದ್ರಾ?

Share This Article