ಈಗಷ್ಟೇ ಮದುವೆಯಾಗಿದೆ, ಮಕ್ಕಳಾಗಿಲ್ಲ ಅಂದ್ರೆ ಹೇಗೆ ಅಂದಿದ್ಯಾಕೆ ಈಶ್ವರಪ್ಪ..?

By
2 Min Read

ಶಿವಮೊಗ್ಗ: ಈಗಷ್ಟೇ ಮದುವೆಯಾಗಿದೆ, ಮಕ್ಕಳಾಗಿಲ್ಲ ಅಂದ್ರೆ ಹೇಗೆ. ಪಂಚಮಸಾಲಿ, ಒಕ್ಕಲಿಗರ ಮೀಸಲಾತಿ ಘೋಷಣೆಯಾಗಿದೆ. ಆ ಬಗ್ಗೆ ವಿಸ್ತೃತ ಚರ್ಚೆ ನಡೆದು, ಸ್ಪಷ್ಟತೆ ಸಿಗಲಿದೆ ಎಂದು ಸಚಿವ ಕೆ.ಎಸ್ ಈಶ್ವರಪ್ಪ (K.S Eshwarappa) ಹೇಳಿದ್ದಾರೆ.

ಮೀಸಲಾತಿ ಕುರಿತ ಡಿಕೆಶಿ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಪರಿಶಿಷ್ಟರಿಗೆ ಮೀಸಲಾತಿ ಹೆಚ್ಚಳ ಪ್ರಸ್ತಾವನೆ ಕೇಂದ್ರಕ್ಕೆ ರವಾನೆಯಾಗುತ್ತೆ. ಸಂವಿಧಾನದ 9ನೇ ಪರಿಚ್ಛೇದದಲ್ಲಿ ಸೇರ್ಪಡೆಯಾಗಲಿದೆ ಎಂದರು.

ಇದೇ ವೇಳೆ ಬಿಜೆಪಿ (BJP) ಯವರು ಮರಳು ಮಾಡುತ್ತಿದ್ದಾರೆ ಎಂಬ ಹೆಚ್.ಡಿ.ಕೆ. (H D Kumaraswamy) ಆರೋಪ ಸಂಬಂಧ ಮಾತನಾಡಿ, ಇದು ಮೊದಲ ಹೆಜ್ಜೆ, ಎಲ್ಲರೂ ಸ್ವಾಗತಿಸುತ್ತಿದ್ದಾರೆ. ಹೆಚ್.ಡಿ.ಕೆ. ಯಾಕೆ ವಿರೋಧ ಮಾಡುತ್ತಿದ್ದಾರೆ ಗೊತ್ತಿಲ್ಲ. ಮೀಸಲಾತಿ ಕೊಡಿಸುವ ನಿಟ್ಟಿನಲ್ಲಿ ಕುಮಾರಸ್ವಾಮಿ, ಸಿದ್ದರಾಮಯ್ಯ ನಮಗೆ ಸಲಹೆ ನೀಡಬೇಕು ಎಂದರು.

ಸಿದ್ದರಾಮಯ್ಯ (Siddaramaiah) ಮತ್ತೆ ಸಿ.ಎಂ ಆಗಬೇಕೆಂದು ಬಸವಪ್ರಭು ಸ್ವಾಮಿಜಿ ಹೇಳಿಕೆ ವಿಚಾರ ಮಾತನಾಡಿ, ಅವರೇ ಕರೆದುಕೊಂಡು ಹೋಗಿ ಕೂರಿಸಲಿ. ಯಾರು ಬೇಡ ಎನ್ನುತ್ತಾರೆ. ಯಾರೋ ಒಬ್ಬ ಸ್ವಾಮೀಜಿ ಬಂದು ಹೇಳಿದರೆ ಆಗಲ್ಲ. ರಾಜ್ಯದ ಜನರು ಅದನ್ನು ತೀರ್ಮಾನ ಮಾಡುತ್ತಾರೆ. 2 ಎ ವರ್ಗದವರಿಗೆ ಅನ್ಯಾಯ ಆಗಬಾರದೆಂದು ಪ್ರತ್ಯೇಕ ಪ್ರವರ್ಗ ರಚಿಸಲಾಗಿದೆ. ಮೀಸಲಾತಿ ಕೊಡುವಲ್ಲಿ ಪ್ರತಿಪಕ್ಷಗಳು ಸಹಕರಿಸಬೇಕು. ಛೂಮಂತ್ರ ಮಾಡಿ ಮೀಸಲಾತಿ ಕೊಡಲು ಸಾಧ್ಯವೆ ಎಂದು ಪ್ರಶ್ನಿಸಿದರು.

ಮೊದಲ ಹೆಜ್ಜೆ ಇಟ್ಟಿದ್ದೇವೆ, ಎಲ್ಲವೂ ಆಗುತ್ತೆ. ಬಿಜೆಪಿ, ಕೆಜೆಪಿ ಒಡೆಯದಿದ್ದರೆ ಸಿದ್ದರಾಮಯ್ಯ ಸಿಎಂ ಆಗ್ತಿರಲಿಲ್ಲ. ಬಿಜೆಪಿ, ಕೆಜೆಪಿಯಿಂದ ಕಾಂಗ್ರೆಸ್ (Congress) ಗೆ ಲಾಭವಾಯ್ತು. ಇನ್ನು ಬಿಜೆಪಿ ಒಡೆಯುವ ಪ್ರಶ್ನೆಯಿಲ್ಲ. ಬಿಜೆಪಿ ಸಂಘಟನಾತ್ಮಕವಾಗಿ ಸಾಕಷ್ಟು ಬೆಳೆದಿದೆ. ನರೇಂದ್ರ ಮೋದಿ (Narendra Modi) ಯವರ ನಾಯಕತ್ವ ಸಿಕ್ಕಿದೆ. ಅಭಿವೃದ್ಧಿ ಕಾರ್ಯಗಳು ಸಾಕಷ್ಟು ಆಗಿವೆ. ಬಿಜೆಪಿಗೆ ಪೂರ್ಣ ಬಹುಮತ ಬರುತ್ತೆ. ರಾಜ್ಯದ ಜನ ಬಿಜೆಪಿ ಪರ ಇದ್ದಾರೆ ಎಂದರು. ಇದನ್ನೂ ಓದಿ: ಭಯೋತ್ಪಾದನೆಯಿಂದ ಭಾರತ ನೊಂದಷ್ಟು ಬೇರಾವ ದೇಶವೂ ನೊಂದಿಲ್ಲ: ಜೈಶಂಕರ್

ಅಮಿತ್ ಶಾ ಪ್ರವಾಸ ಕುರಿತು ಡಿಕೆಶಿ (DK Shivakumar) ಹೇಳಿಕೆ ವಿಚಾರದ ಬಗ್ಗೆ ಮಾತನಾಡಿ, ಅಮಿತ್ ಶಾ ಬಂದು ಅಭಿವೃದ್ಧಿ ಮಾಡಲು ಆಗೋದಿಲ್ಲ. ರಾಹುಲ್ ಗಾಂಧಿ ಭಾರತ ಜೋಡೊ ಮಾಡಿದ್ದರಿಂದ ದೇಶ ಜೋಡಣೆ ಆಯ್ತಾ?. ರಾಹುಲ್ ಗಾಂಧಿಗೆ ಒಮ್ಮೆ ದೇಶ ನೋಡುವ ಅವಕಾಶ ಸಿಕ್ತು. ಅದಕ್ಕೆ ನನಗೆ ಸಂತೋಷವಿದೆ. ಸ್ವಾತಂತ್ರ್ಯ ಬಂದ 70 ವರ್ಷದವರೆಗೂ ಭಾರತ ಜೋಡಿಸುವ ಕೆಲಸ ಕಾಂಗ್ರೆಸ್ ಮಾಡಿಲ್ಲ. ಭಾರತೀಯರ ಭಾವನೆ ಅರ್ಥ ಮಾಡಿಕೊಂಡಿಲ್ಲ. ಅಮಿತ್ ಶಾ (Amitshah) ಭಯೋತ್ಪಾದನೆ ನಿಗ್ರಹಕ್ಕೆ ಪ್ರಯತ್ನ ಮಾಡಿದ್ದಾರೆ. ಸಿದ್ದರಾಮಯ್ಯ ಅಧಿಕಾರದಲ್ಲಿ ಇದ್ದಾಗ ಏಕೆ ಮಾಡಿಲ್ಲ?. ಡಿಕೆಶಿ ಆವಾಗ ಯಾಕೆ ಬಾಯಿ ಮುಚ್ಚಿಕೊಂಡು ಕೂತಿದ್ರು?. ಅಮಿತ್ ಶಾ ದಿಟ್ಟ ಹೆಜ್ಜೆ ಇಟ್ಟು ಮುನ್ನುಗ್ಗುತ್ತಿದ್ದಾರೆ ಎಂದು ಹೇಳಿದರು.

ಪಾಕಿಸ್ತಾನ, ಚೀನಾ ನಮ್ಮ ದೇಶದ ತಂಟೆಗೆ ಅಷ್ಟು ಸುಲಭವಾಗಿ ಬರೊಲ್ಲ. ಇಡೀ ದೇಶದಲ್ಲಿ ಶಾಂತಿ ಕಾಪಾಡುವಲ್ಲಿ ಸರ್ವ ಪ್ರಯತ್ನ. ಆದ್ರೆ ಶಾಂತಿ ಹಾಳು ಮಾಡಲು ಡಿಕೆಶಿ ಭಯೋತ್ಪಾದಕರಿಗೆ ಬೆಂಬಲಿಸುತ್ತಿದ್ದಾರೆ. ಅಮಿತ್ ಶಾ ಮಾಡುವ ಕೆಲಸ ಅವರೂ ಬೆಂಬಲಿಸಲಿ. ಆಗ ಅವರು ನಿಜವಾದ ರಾಷ್ಟ್ರ ಭಕ್ತರಾಗ್ತಾರೆ. ಇಲ್ಲಾಂದ್ರೆ ಭಯೋತ್ಪಾದಕರ ರಕ್ತ ನಿಮ್ಮ ಮೇಲೆ ಹರೀತಾಯಿದೆ ಅಂತ ರಾಜ್ಯದ ಜನ ತೀರ್ಮಾನಿಸ್ತಾರೆ. ಈಗ ಒಂದಿಷ್ಟು ಸೀಟ್ ಇದೆ, ಮುಂದಿನ ಚುನಾವಣೆಯಲ್ಲಿ ಜನ ನಿಮ್ಮನ್ನು ಕೂಡ ಭಯೋತ್ಪಾದಕರ ಜೊತೆ ಹೊರಹಾಕ್ತಾರೆ ಎಂದು ಈಶ್ವರಪ್ಪ ವಾಗ್ದಾಳಿ ನಡೆಸಿದರು.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *