War 2: ಹೃತಿಕ್‌ ರೋಷನ್‌ ಜೊತೆಗಿನ ಸಿನಿಮಾಗಾಗಿ ಮುಂಬೈಗೆ ಬಂದಿಳಿದ ಜ್ಯೂ.ಎನ್‌ಟಿಆರ್

Public TV
1 Min Read

ರಾಜಮೌಳಿ (Rajamouli) ನಿರ್ದೇಶನದ ಸಿನಿಮಾದಲ್ಲಿ ಮಿಂಚಿದ ಮೇಲೆ ಸಕ್ಸಸ್ ಕಟ್ಟಿಟ್ಟ ಬುತ್ತಿ. ‘ಆರ್‌ಆರ್‌ಆರ್’ (RRR) ಸಿನಿಮಾ ಸೂಪರ್ ಡೂಪರ್ ಸಕ್ಸಸ್ ಆದ್ಮೇಲೆ ತೆಲುಗು ಮಾತ್ರವಲ್ಲ, ಬಾಲಿವುಡ್‌ನಿಂದ ಕೂಡ ತಾರಕ್‌ಗೆ ಅವಕಾಶಗಳು ಅರಸಿ ಬರುತ್ತಿವೆ. ಪ್ರಸ್ತುತ ಬಾಲಿವುಡ್‌ನ ಬಹುನಿರೀಕ್ಷಿತ ‘ವಾರ್ 2’ (War 2) ಸಿನಿಮಾಗಾಗಿ ಮುಂಬೈ ಜ್ಯೂ.ಎನ್‌ಟಿಆರ್ ತೆರಳಿದ್ದಾರೆ.

ಬ್ರಹ್ಮಾಸ್ತ್ರ ನಿರ್ದೇಶಕ ಅಯಾನ್ ಮುಖರ್ಜಿ ನಿರ್ದೇಶನದಲ್ಲಿ ವಾರ್ 2 ಸಿನಿಮಾ ಮೂಡಿ ಬರಲಿದ್ದು, ಹೃತಿಕ್ ರೋಷನ್ (Hrithik Roshan) ಜೊತೆ ಜ್ಯೂ.ಎನ್‌ಟಿಆರ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ತಿದ್ದಾರೆ. ಈ ಚಿತ್ರಕ್ಕೆ ಯಶ್‌ ರಾಜ್‌ ಫಿಲ್ಮ್ಸ್‌ ಬಂಡವಾಳ ಹೂಡಿದೆ. ಇದನ್ನೂ ಓದಿ:ಐಷಾರಾಮಿ ಕಾರು ಖರೀದಿಸಿದ ‘ಅನಿಮಲ್’ ಚಿತ್ರದ ಗಾಯಕ

ಈಗಾಗಲೇ ಶೂಟಿಂಗ್ ಶುರುವಾಗಿದ್ದು, ತಮ್ಮ ಭಾಗದ ಚಿತ್ರೀಕರಣಕ್ಕಾಗಿ ಮುಂಬೈಗೆ ಜ್ಯೂ.ಎನ್‌ಟಿಆರ್ ಎಂಟ್ರಿ ಕೊಟ್ಟಿದ್ದಾರೆ. 10 ದಿನಗಳ ಕಾಲ ಶೂಟಿಂಗ್ ನಡೆಯಲಿದೆ. ಆ್ಯಕ್ಷನ್ ಸೀನ್ಸ್‌ಗಳು ಈ ಸಿನಿಮಾದಲ್ಲಿ ಇರಲಿದೆ. ವಿಶೇಷ ಅಂದರೆ, ವಾರ್ 2ನಲ್ಲಿ ತಾರಕ್‌ಗೆ ಮತ್ತೆ ಆಲಿಯಾ ಭಟ್ (Alia Bhatt)  ಜೋಡಿಯಾಗುತ್ತಿದ್ದಾರೆ.

ಸದ್ಯ ಮುಂಬೈ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿರುವ ಜ್ಯೂ.ಎನ್‌ಟಿಆರ್ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿವೆ. ಇದೇ ಲುಕ್ ವಾರ್ 2ನಲ್ಲಿಯೂ ಇರಲಿದೆ ಎನ್ನಲಾಗಿದೆ. ‘ದೇವರ’ (Devara Film) ಸಿನಿಮಾ ಶೂಟಿಂಗ್ ಮುಗಿಯುತ್ತಿದ್ದಂತೆ ವಾರ್ 2ಗೆ ತಾರಕ್ ಸಾಥ್ ನೀಡಿದ್ದಾರೆ.

Share This Article