ಮೋದಿ ತಮ್ಮ ಕೆಲಸದಿಂದ ರಾಜಕೀಯ ಸಂಸ್ಕೃತಿ ಬದಲಾಯಿಸಿದ್ದಾರೆ: ಜೆಪಿ ನಡ್ಡಾ

Public TV
1 Min Read

ಧರ್ಮಶಾಲಾ: ವಿವಿಧ ಸಾಮಾಜಿಕ ಸೇವಾ ಉಪಕ್ರಮಗಳನ್ನು ಕಾರ್ಯಗೊಳಿಸಲು ಪೂರ್ವಭಾವಿಯಾಗಿ ಕಾರ್ಯ ನಿರ್ವಹಿಸುವ ಮೂಲಕ ರಾಜಕೀಯ ಸಂಸ್ಕೃತಿಯನ್ನು ಬದಲಾಯಿಸಿದ ಕೀರ್ತಿ ಪ್ರಧಾನಿ ನರೇಂದ್ರ ಮೋದಿಗೆ ಸಲ್ಲುತ್ತದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ತಿಳಿಸಿದರು.

ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅವರು, 185 ಕೋಟಿ ಡಬಲ್ ಡೋಸ್, ಪಾಕಿಸ್ತಾನದಲ್ಲಿ ಸರ್ಜಿಕಲ್ ಸ್ಟ್ರೈಕ್, ಯುದ್ಧ ಪೀಡಿತ ಉಕ್ರೇನ್‍ನಿಂದ 23,000 ಭಾರತೀಯರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲು ಮೋದಿ ಸರ್ಕಾರ ಪ್ರತಿಯೊಂದು ಕ್ಷೇತ್ರದಲ್ಲೂ ದೃಢ ಸಂಕಲ್ಪದಿಂದ ಕೆಲಸ ಮಾಡಿದೆ ಎಂದು ಅಭಿಪ್ರಾಯ ಪಟ್ಟರು.

ಬಿಜೆಪಿ ಸರ್ಕಾರವು ನೀಡಲು ಪ್ರಯತ್ನಿಸುತ್ತದೆ. ಆದರೆ ಹಿಂದಿನ ಕಾಂಗ್ರೆಸ್ ಸರ್ಕಾರವು ಯಾವಗಲೂ ರಾಜ್ಯದಿಂದ ಕಿತ್ತುಕೊಳ್ಳಲು ನೋಡುತ್ತಿದ್ದವು. ಅಂದಿನ ಮನಮೋಹನ್ ಸಿಂಗ್ ಸರ್ಕಾರವು ಹಿಮಾಚಲ ಪ್ರದೇಶದ ವಿಶೇಷ ವರ್ಗವನ್ನು ಹಿಂತೆಗೆದುಕೊಂಡಿತು ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ರಾಜ್ಯದಲ್ಲಿಂದು ಶ್ರೀರಾಮನವಮಿ ಆಚರಣೆ – ಆಂಜನೇಯನ ದೇಗುಲಗಳಲ್ಲಿ ರಾಮನ ಆರಾಧನೆ

2014ರಲ್ಲಿ ನರೇಂದ್ರ ಮೋದಿ ಪ್ರಧಾನಿಯಾದಾಗ ಅವರು ರಾಜ್ಯದ ಸ್ಥಾನ ಮಾನವನ್ನು ಪುನಃ ಸ್ಥಾಪಿಸಿದರು. ರಾಜ್ಯದಿಂದ ಶೇ. 10 ಮತ್ತು ಕೇಂದ್ರದಿಂದ ಶೇ. 90ರಷ್ಟು ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಕೊಡುಗೆ ನೀಡಿದರು. ನಾವು ಏನು ಹೇಳಿದ್ದೇವೋ ಅದನ್ನೇ ಮಾಡಿದ್ದೇವೆ. ನಾವು ಏನು ಹೇಳುತ್ತೇವೋ ಅದನ್ನೇ ಮಾಡುತ್ತೇವೆ ಎಂದರು. ಇದನ್ನೂ ಓದಿ: ಸುರ್ಜೆವಾಲ ಟ್ವೀಟ್‌ಗೆ ಯಾವುದೇ ಕಿಮ್ಮತ್ತಿಲ್ಲ : ಬೊಮ್ಮಾಯಿ

ಹಿಮಾಚಲ ಪ್ರದೇಶದ ಮುಖ್ಯಮಂತ್ರಿ ಜೈ ರಾಮ್ ಠಾಕೂರ್ ಮತ್ತು ಕೇಂದ್ರ ಸಚಿವ ಅನುರಾಗ್ ಠಾಕೂರ್ ಅವರು ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಆಡಳಿತ ಮಾಡಿದ ಉತ್ತಮ ಕೆಲಸಗಳನ್ನು ಹೇಳಿದರು.

Share This Article
Leave a Comment

Leave a Reply

Your email address will not be published. Required fields are marked *