ಇಂಟರ್‌ನೆಟ್‌ಗೆ ಬೆಂಕಿ ಹಚ್ಚಿದ ಮೇಘಾ ಶೆಟ್ಟಿ ಹಾಟ್ ಫೋಟೋಸ್

Public TV
1 Min Read

ಟಿ ಮೇಘಾ ಶೆಟ್ಟಿ (Megha Shetty) ಅವರು ಕಿರುತೆರೆಯ ಜನಪ್ರಿಯ ‘ಜೊತೆ ಜೊತೆಯಲಿ’ (Jothe Jotheyali) ಸೀರಿಯಲ್ ಮುಗಿದ ಮೇಲೆ ಮತ್ತೆ ಸಿನಿಮಾಗಳಲ್ಲಿ ಮಿಂಚಲು ತಯಾರಿ ನಡೆಸುತ್ತಿದ್ದಾರೆ. ಸದ್ಯ ಹಾಟ್ ಫೋಟೋಶೂಟ್ ಮೂಲಕ ನಟಿ ಸೋಷಿಯಲ್ ಮೀಡಿಯಾದಲ್ಲಿ ಸಂಚಲನ ಮೂಡಿಸುತ್ತಿದ್ದಾರೆ.

‘ಜೊತೆ ಜೊತೆಯಲಿ’ ಸೀರಿಯಲ್ ಮೂಲಕ ವೃತ್ತಿ ಬದುಕು ಆರಂಭಿಸಿದ ಕರಾವಳಿ ನಟಿ ಮೇಘಾ ಶೆಟ್ಟಿ ಅವರು ಸೀರಿಯಲ್ ಜೊತೆಗೆ ತ್ರಿಬಲ್ ರೈಡಿಂಗ್ (Triple Riding), ದಿಲ್ ಪಸಂದ್ (Dil Pasand) ಚಿತ್ರಗಳಲ್ಲಿ ನಟಿಸಿದರು. ಕಿರುತೆರೆ – ಹಿರಿತೆರೆ ಬ್ಯಾಲೆನ್ಸ್ ಮಾಡುತ್ತಿದ್ದರು. ಇತ್ತೀಚಿಗೆ ಆರೂರು ಜಗದೀಶ್ ನಿರ್ದೇಶನದ ‘ಜೊತೆ ಜೊತೆಯಲಿ’ ಸೀರಿಯಲ್ ಅಂತ್ಯವಾಗಿದ್ದು, ಪ್ರೇಕ್ಷಕರಿಗೆ ಬೇಸರ ಮೂಡಿಸಿತ್ತು. ಇದನ್ನೂ ಓದಿ:ದುಬಾರಿ ಕಾರು ಖರೀದಿಸಿದ ನಟಿ ಬಿಪಾಶಾ ಬಸು

ಇತ್ತೀಚಿಗೆ ಬಿಳಿ ಕಾಸ್ಟ್ಯೂಮ್‌ನಲ್ಲಿ ಮಿರಿ ಮಿರಿ ಮಿಂಚಿರುವ ಅವರು ನೀರಿನ ಮಧ್ಯ ಬೆಡ್ ಹಾಕಿ, ಅದರ ಮೇಲೆ ಕೂತಿರುವ ಮೇಘಾ, ಸಖತ್ ಹಾಟ್ ಹಾಟ್ ಆಗಿ ಕಾಣಿಸಿಕೊಂಡಿರುವ ಫೋಟೋಗಳನ್ನ ನಟಿ ಹಂಚಿಕೊಂಡಿದ್ದರು. ಇದೀಗ ಅದೇ ಫೋಟೋಶೂಟ್ ಬೇರೆ ಲುಕ್‌ನಲ್ಲಿ ಹಾಟ್ ಫೋಟೋಸ್‌ನ ಶೇರ್ ಮಾಡಿದ್ದಾರೆ. ಕೈಯಲ್ಲಿ ಲ್ಯಾಂಪ್ ಹಿಡಿದು ಫೋಟೋಶೂಟ್ ಮಾಡಿಸಿರುವ ಮೇಘಾ ಲುಕ್ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ. ಇದನ್ನೂ ಓದಿ:ಕಡಲ ಕಿನಾರೆಯಲ್ಲಿ ಕಣ್ಸನ್ನೆ ಸುಂದರಿ ಪ್ರಿಯಾ ವಾರಿಯರ್

ಮೇಘಾ ಶೆಟ್ಟಿ, ನಟಿಸಿರುವ ‘ಕೈವ’ (Kaiva) ಮತ್ತು ‘ಆಪರೇಷನ್ ಲಂಡನ್ ಕೆಫೆ’ (Operation London Cafe) ಸಿನಿಮಾಗಳು ಸದ್ಯದಲ್ಲೇ ತೆರೆಗೆ ಬರಲಿದೆ. ಭಿನ್ನ ಕಥೆಯ ಮೂಲಕ ಮೇಘಾ ಮಿಂಚಲು ಸಜ್ಜಾಗಿದ್ದಾರೆ.

Share This Article