ಗಂಡು ಮಗುವಿಗೆ ಜನ್ಮ ನೀಡಿದ `ಜೋಶ್’ ನಾಯಕಿ ಪೂರ್ಣಾ

Public TV
1 Min Read

ನ್ನಡದ `ಜೋಶ್’ (Josh Film) ಸಿನಿಮಾದ ನಾಯಕಿ ಪೂರ್ಣಾ (Purnaa) ತಾಯಿಯಾದ ಸಂಭ್ರಮದಲ್ಲಿದ್ದಾರೆ. ದುಬೈನ (Dubai) ಖಾಸಗಿ ಆಸ್ಪತ್ರೆಯಲ್ಲಿ ನಟಿ ಪೂರ್ಣಾ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ತಾಯಿ- ಮಗು ಇಬ್ಬರು ಆರೋಗ್ಯವಾಗಿದ್ದಾರೆ. ಇದನ್ನೂ ಓದಿ: ‘ಕಿರಿಕ್ ಪಾರ್ಟಿ’ ರಶ್ಮಿಕಾ ಮಂದಣ್ಣಗೆ ಶುಭಕೋರಿದ ರಕ್ಷಿತ್ ಶೆಟ್ಟಿ ಒಡೆತನದ ನಿರ್ಮಾಣ ಸಂಸ್ಥೆ

ಜೋಶ್, 100 ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿರುವ ಶಮ್ನಾ ಕಾಸಿಮ್ (Shamna Kasim) ಅಲಿಯಾಸ್ ಪೂರ್ಣಾ ಅವರು ಉದ್ಯಮಿ ಶಾನಿದ್ ಆಸಿಫ್ (Shanid Asif) ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟರು. 2022ರಲ್ಲಿ ಹೊಸ ಬಾಳಿಗೆ ಕಾಲಿಟ್ಟರು. ಕಳೆದ ಫೆಬ್ರವರಿಯಲ್ಲಿ ಅದ್ದೂರಿಯಾಗಿ ಬೇಬಿ ಶವರ್ ಕಾರ್ಯಕ್ರಮ ಮಾಡಲಾಗಿತ್ತು. ಈಗ ಮನೆಗೆ ಮುದ್ದು ಮಗನ ಎಂಟ್ರಿಯಾಗಿರುವ ಸಂತಸದಲ್ಲಿದ್ದಾರೆ.

ದುಬೈನ ಖಾಸಗಿ ಆಸ್ಪತ್ರೆಯಲ್ಲಿ ಪೂರ್ಣಾ ಅವರು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಮಗನ ಆಗಮನದ ಖುಷಿಯಲ್ಲಿರುವ ಪೂರ್ಣಾ, ಗುಡ್ ನ್ಯೂಸ್ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಮೂಲಕ ಫ್ಯಾನ್ಸ್ ಸಿಹಿಸುದ್ದಿ ನೀಡಿದ್ದಾರೆ.

Share This Article