ಬಿಗ್ ಬಾಸ್ ಸೀಸನ್-12ಗೆ ಆರಂಭದಲ್ಲೇ ವಿಘ್ನ – ಶೂಟಿಂಗ್ ನಡೆಯುತ್ತಿರುವ ಜಾಲಿವುಡ್ ಸ್ಟುಡಿಯೋ ಬಂದ್‌ಗೆ ಆದೇಶ

Public TV
1 Min Read

– ಮಾಲೀನ್ಯ ನಿಯಂತ್ರಣ ಮಂಡಳಿಯಿಂದ ಆದೇಶ

ರಾಮನಗರ: ಬಿಗ್ ಬಾಸ್ ಸೀಸನ್ 12ಕ್ಕೆ (BBK 12) ಆರಂಭದಲ್ಲೇ ವಿಘ್ನ ಎದುರಾಗಿದೆ. ಬಿಗ್ ಬಾಸ್ ರಿಯಾಲಿಟಿ ಶೋ ನಡೆಯುತ್ತಿರೋ ಬಿಡದಿ ಸಮೀಪದ ಜಾಲಿವುಡ್ ಸ್ಟುಡಿಯೋಸ್ & ಅಡ್ವೆಂಚರ್ಸ್ ಪಾರ್ಕ್ (Jollywood Studios and Adventures) ಬಂದ್ ಮಾಡಲು ರಾಜ್ಯ ಮಾಲೀನ್ಯ ನಿಯಂತ್ರಣ ಮಂಡಳಿ ಆದೇಶ ಹೊರಡಿಸಿದೆ.

ಮಾಲೀನ್ಯ ನಿಯಂತ್ರಣ ಮಂಡಳಿ (Pollution Control Board) ಅನುಮತಿ ಪಡೆಯದೇ ಮನರಂಜನಾ ಪಾರ್ಕ್ ಓಪನ್ ಮಾಡಿರೋ ಆರೋಪ ಕೇಳಿಬಂದಿದೆ. ಅಲ್ಲದೇ ಅವೈಜ್ಞಾನಿಕ ತ್ಯಾಜ್ಯ ವಿಲೇವಾರಿ ಹಾಗೂ ತ್ಯಾಜ್ಯದ ನೀರನ್ನ ಪರಿಸರಕ್ಕೆ ಬಿಡುವ ಮೂಲಕ ಮಾಲಿನ್ಯ ನಿಯಂತ್ರಣ ಕಾಯ್ದೆಗಳನ್ನ ಉಲ್ಲಂಘನೆ ಮಾಡಿರೋ ಆರೋಪ ಕೂಟ ಕೇಳಿಬಂದಿದೆ.

ಕರ್ನಾಟಕ ಮಾಲಿನ್ಯ ನಿಯಂತ್ರಣ ಕಾಯ್ದೆ 1981ರ ಸೆಕ್ಷನ್ 31, ಕಾಯ್ದೆ 1983 ನಿಯಮ 20(ಎ) ಅನ್ವಯ ತಕ್ಷಣದಿಂದಲೇ ಸ್ಟುಡಿಯೋ ಬಂದ್ ಮಾಡಲು ಆದೇಶ ಹೊರಡಿಸಿದ್ದು, ಕೂಡಲೇ ಜಾಲಿವುಡ್ ಸ್ಟುಡಿಯೋಸ್ & ಅಡ್ವೆಂಚರ್ಸ್ ಪಾರ್ಕ್ ಬಂದ್ ಮಾಡಸಿ ಕ್ರಮವಹಿಸಲು ರಾಮನಗರ ಜಿಲ್ಲಾಧಿಕಾರಿಗೆ ಸೂಚನೆ ನೀಡಲಾಗಿದೆ.

ಜೊತೆಗೆ ತಕ್ಷಣದಿಂದಲೇ ಮನರಂಜನಾ ಪಾರ್ಕ್‌ಗೆ ವಿದ್ಯುತ್ ಸ್ಥಗಿತಗೊಳಿಸುವಂತೆ ಬೆಸ್ಕಾಂಗೂ ಮಾಲಿನ್ಯ ನಿಯಂತ್ರಣ ಮಂಡಳಿ ನಿರ್ದೇಶನ ನೀಡಿದೆ. ಬಿಗ್ ಬಾಸ್ ಸೀಸನ್ 12ರ ಶೂಟಿಂಗ್ ಸೆಟ್ ಕೂಡ ಜಾಲಿವುಡ್ ಸ್ಟುಡಿಯೋದಲ್ಲೇ ನಿರ್ಮಾಣ ಆಗಿರೋದ್ರಿಂದ ಬಿಗ್ ಬಾಸ್ ಶೂಟಿಂಗ್ ಸ್ಥಗಿತಗೊಳ್ಳುವ ಸಾಧ್ಯತೆ ಇದೆ.

Share This Article