ಜಿ7 ಶೃಂಗಸಭೆ – ಮೋದಿ ಬಳಿ ತೆರಳಿ ಬೈಡನ್ ಶೇಕ್ ಹ್ಯಾಂಡ್

Public TV
1 Min Read

ಬರ್ಲಿನ್: ಪ್ರಧಾನಿ ನರೇಂದ್ರ ಮೋದಿ ಜರ್ಮನಿಯ ಸ್ಲೋಸ್ ಎಲ್ಮಾವ್‌ನಲ್ಲಿ ನಡೆಯುತ್ತಿರುವ ಜಿ7 ಶೃಂಗಸಭೆಗೆ ತೆರಳಿದ್ದು, ಅಲ್ಲಿ ವಿಶ್ವದ ನಾಯಕರನ್ನು ಭೇಟಿಯಾಗಿದ್ದಾರೆ. ಜಾಗತಿಕ ನಾಯಕರೊಂದಿಗೆ ಮೋದಿ ಖುಷಿಯ ಕ್ಷಣ ಕಳೆದಿರುವುದು ಕ್ಯಾಮೆರಾ ಕಣ್ಣುಗಳು ಸೆರೆ ಹಿಡಿದಿವೆ.

ಅಮೆರಿಕ ಅಧ್ಯಕ್ಷ ಜೋ ಬೈಡನ್, ಜರ್ಮನ್ ಚಾನ್ಸೆಲರ್ ಓಲಾಫ್ ಸ್ಕೋಲ್ಜ್, ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಹಾಗೂ ಕೆನಡಾದ ಪ್ರಧಾನಿ ಜಸ್ಟಿನ್ ಟುಡ್ರೋ ಸೇರಿದಂತೆ ಅನೇಕ ಗಣ್ಯರೊಂದಿಗೆ ಮೋದಿ ಆತ್ಮೀಯವಾಗಿ ಸಮಯ ಕಳೆದಿದ್ದಾರೆ. ಇದನ್ನೂ ಓದಿ: ಮೋದಿಯವರ ವ್ಯಕ್ತಿತ್ವ, ಜೀವನದ ಹಾದಿ ಪ್ರತಿಯೊಬ್ಬರಿಗೂ ಸ್ಫೂರ್ತಿ: ಗೆಹ್ಲೋಟ್

ಜೋ ಬೈಡನ್ ಮೋದಿ ಅವರನ್ನು ಸ್ವಾಗತಿಸಲು ಹಾಗೂ ಸಂತೋಷವನ್ನು ಹಂಚಿಕೊಳ್ಳಲು ಅವರ ಬಳಿ ತೆರಳಿದ್ದಾರೆ. ಕೆನಡಾ ಪ್ರಧಾನಿಯೊಂದಿಗೆ ಸಂವಹನದಲ್ಲಿ ತೊಡಗಿದ್ದ ಮೋದಿ ಬೈಡನ್ ಕಂಡು ಸಂತೋಷದಿಂದ ಅವರ ಕೈ ಕುಲುಕಿ ಮಾತನಾಡಿದ್ದಾರೆ. ಇದನ್ನೂ ಓದಿ: ಅಗ್ನಿಪಥ್‌ಗೆ ಭರ್ಜರಿ ಪ್ರತಿಕ್ರಿಯೆ – 4 ದಿನಕ್ಕೆ 94 ಸಾವಿರ ಅರ್ಜಿ

ಮೇ ತಿಂಗಳಲ್ಲಿ ಜಪಾನ್‌ನಲ್ಲಿ ನಡೆದ ಕ್ವಾಡ್ ಶೃಂಗಸಭೆಯ ಬಳಿಕ ಮೋದಿ ಮತ್ತು ಬೈಡನ್ ಜಿ7 ಶೃಂಗಸಭೆಯಲ್ಲಿ ಮೊದಲ ಬಾರಿ ಭೇಟಿಯಾಗಿದ್ದಾರೆ. ಇಬ್ಬರು ನಾಯಕರು ಜುಲೈನಲ್ಲಿ ನಡೆಯಲಿರುವ ಐ2ಯು2 ವರ್ಚುವಲ್ ಶೃಂಗಸಭೆಯಲ್ಲಿ ಇಸ್ರೇಲ್ ಹಾಗೂ ಸಂಯುಕ್ತ ಅರಬ್ ಸಂಸ್ಥಾನದ ನಾಯಕರನ್ನು ಭೇಟಿಯಾಗಲಿದ್ದಾರೆ.

Live Tv

Share This Article
Leave a Comment

Leave a Reply

Your email address will not be published. Required fields are marked *