ಮೆಟ್ಟಿಲು ಹತ್ತುವಾಗ ಎಡವಿದ ಜೋ ಬೈಡನ್ – ಮುಂದೇನಾಯ್ತು ಗೊತ್ತಾ?

Public TV
2 Min Read

ಜಕಾರ್ತ: ಜಿ20 ಶೃಂಗಸಭೆಗಾಗಿ (G20 Summit) ಇಂಡೋನೆಷ್ಯಾದ ಬಾಲಿಯಲ್ಲಿರುವ ಅಮೆರಿಕ ಅಧ್ಯಕ್ಷ ಜೋ ಬೈಡನ್ (US President Joe Biden) ಅವರು ಮೆಟ್ಟಿಲುಗಳನ್ನು ಹತ್ತುವಾಗ ಎಡವಿದ್ದು, ಇನ್ನೇನೂ ಬೀಳುವಷ್ಟರಲ್ಲಿ ಇಂಡೋನೇಷಿಯಾದ ಕೌಂಟರ್ಪಾರ್ಟ್ ಜೋಕೊ ವಿಡೋಡೊ (Indonesian counterpart Joko Widodo) ಅವರು, ಜೋ ಬೈಡನ್ ಕೈಯನ್ನು ಹಿಡಿದುಕೊಂಡಿದ್ದಾರೆ.

ಇಬ್ಬರು ನಾಯಕರು ಬಾಲಿಯಲ್ಲಿನ (Bali) ತಮನ್ ಹುತನ್ ರಾಯ ಮ್ಯಾಂಗ್ರೋವ್ ಅರಣ್ಯಕ್ಕೆ (Taman Hutan Raya mangrove forest) ಭೇಟಿ ನೀಡಿದ್ದರು. ಈ ವೇಳೆ ಜೋ ಬೈಡನ್ ಮೆಟ್ಟಿಲುಗಳ ಮೇಲೆ ಎಡವಿದ್ದಾರೆ. ಆದರೂ ಜೋ ಬೈಡನ್ ಅವರ ಕೈ ಹಿಡಿದು ಬೀಳದಂತೆ ವಿಡೋಡೋ ಅವರು ರಕ್ಷಿಸಿದ್ದಾರೆ. ಸಮಯಕ್ಕೆ ಸರಿಯಾಗಿ ವಿಡೋಡೋ, ಜೋ ಬೈಡನ್ ಕೈ ಹಿಡಿದುಕೊಂಡಿದ್ದಕ್ಕೆ ಸಂಭವಿಸಬಹುದಾದ ಅನುಹುತದಿಂದ ಬಚಾವ್ ಆಗಿದ್ದಾರೆ. ಇದನ್ನೂ ಓದಿ: ಈ ಶಾಲೆಯಲ್ಲಿ 100 ವಿದ್ಯಾರ್ಥಿಗಳು ಏಕಕಾಲದಲ್ಲಿಯೇ ಎರಡು ಕೈಯಲ್ಲೂ ಬರೀತಾರೆ!

ಜೋ ಬೈಡನ್ ಮತ್ತು ವಿಡೋಡೊ ಜಿ20 ಶೃಂಗಸಭೆಯಲ್ಲಿ ಭಾಗಿಯಾಗಿದ್ದು, ಜಾಗತಿಕವಾಗಿ ಕುಸಿದಿರುವ ಆರ್ಥಿಕತೆ ಪರಿಣಾಮದಿಂದ ಶೀಘ್ರ ಚೇತರಿಸಿಕೊಂಡು ಬಲಶಾಲಿಯಾಗಿ ಮುನ್ನಡೆಯುವ, ಅಂದರೆ ‘ಒಟ್ಟಿಗೆ ಚೇತರಿಸಿಕೊಳ್ಳಿ, ಒಟ್ಟಿಗೆ ಮುನ್ನೆಡೆಯಿರಿ’ ಎಂಬ ಥೀಮ್‍ನೊಂದಿಗೆ ಬಾಲಿ ಶೃಂಗ ಸಭೆ ಆರಂಭವಾಗಿದೆ. ಜಾಗತಿಕ ಹಸಿವು, ಆಹಾರ ಭದ್ರತೆ, ಇಂಧನ, ರಕ್ಷಣಾ ಮತ್ತು ಆರ್ಥಿಕತೆಯನ್ನು ಪೂರ್ಣ ಪ್ರಮಾಣದಲ್ಲಿ ಡಿಜಿಟಲ್ ವ್ಯವಸ್ಥೆ ಅಡಿಯಲ್ಲಿ ತರುವ ಬಗ್ಗೆ ಜಿ – 20 ನಾಯಕರು ಸುದೀರ್ಘ ಸಮಾಲೋಚನೆ ನಡೆಸಿ, ಹಲವು ಮಹತ್ವದ ಒಪ್ಪಂದಗಳಿಗೆ ಸಹಿ ಹಾಕಲಿದ್ದಾರೆ. ಇದನ್ನೂ ಓದಿ: ಪೋಲೆಂಡ್ ಮೇಲೆ ರಷ್ಯಾ ಕ್ಷಿಪಣಿ ದಾಳಿ – ಇಬ್ಬರು ಸಾವಿನ ಬೆನ್ನಲ್ಲೇ ಅಮೆರಿಕ ತುರ್ತು ಸಭೆ

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *