ಸಿನಿಮಾ ರಂಗಕ್ಕೆ ‘ಜೋಡಿಹಕ್ಕಿ’ ಸೀರಿಯಲ್ ತಾಂಡವ್ ರಾಮ್

Public TV
1 Min Read

ಮುಗಿಲ್ ಪೇಟೆ ಸಿನಿಮಾದ ಮೂಲಕ ಪ್ರೇಕ್ಷಕರ ಮನೆಗೆದ್ದಿದ್ದ ನಿರ್ದೇಶಕ  ಭರತ್ ಎಸ್ ನಾವುಂದ (Bharat Navunda) ಮತ್ತೊಂದು ಹೊಸ ಆಯಾಮದೊಂದಿಗೆ  ಹೆಜ್ಜೆ ಇಡಲು ಸಜ್ಜಾಗಿದ್ದಾರೆ . ಮುಗಿಲ್ ಪೇಟೆ ಚಿತ್ರದ ಮೂಲಕ ಭರವಸೆ ನಿರ್ದೇಶಕರಾಗಿ ಹೊರಹೊಮ್ಮಿರುವ ಅವರೀಗ ಜೋಡಿಹಕ್ಕಿ ಸೀರಿಯಲ್ ಖ್ಯಾತಿಯ ತಾಂಡವ್ ರಾಮ್ (Tandav Ram) ಅವರನ್ನು ನಾಯಕನಟರಾಗಿ ಸ್ಯಾಂಡಲ್ ವುಡ್ ಗೆ ಪರಿಚಯಿಸುತ್ತಿದ್ದಾರೆ.

ಅಡಚಣೆಗಾಗಿ ಕ್ಷಮಿಸಿ ಎಂಬ ಸಿನಿಮಾ ಮೂಲಕ ಡೈರೆಕ್ಟರ್ ಕ್ಯಾಪ್ ತೊಟ್ಟಿದ್ದ ಭರತ್ ಎಸ್ ನಾವುಂದ ಆ ಬಳಿಕ ಸುಂದರ ಪ್ರೇಮಕಥೆ ಜೊತೆಗೆ ಪಕ್ಕ ಫ್ಯಾಮಿಲಿ ಎಂಟರ್ ಟೈನರ್ ಮುಗಿಲ್ ಪೇಟೆ ಚಿತ್ರವನ್ನು ಪ್ರೇಕ್ಷಕ ಎದುರು ನಿಲ್ಲಿಸಿದರು. ಈ ಚಿತ್ರಕ್ಕೆ ಅದ್ಭುತ ರೆಸ್ಪಾನ್ಸ್ ಸಿಕ್ಕಿತ್ತು . ಭರತ್ ನಿರ್ದೇಶನದ ಬಗ್ಗೆಯೂ ಮೆಚ್ಚುಗೆ ವ್ಯಕ್ತವಾಗಿತ್ತು . ಇದೀಗ ಅವರು ಮೂರನೇ ಸಿನಿಮಾಗೆ ಅಣಿಯಾಗಿದ್ದಾರೆ. ಇದನ್ನೂ ಓದಿ:ತಲಕಾವೇರಿಗೆ ವಿಶೇಷ ಪೂಜೆ ಸಲ್ಲಿಸಿದ ಅಭಿಷೇಕ್, ಅವಿವಾ ದಂಪತಿ

ಜೋಡಿಹಕ್ಕಿ ಸೀರಿಯಲ್ ಮೂಲಕ ಮನೆ ಮಾತಾಗಿರುವ ತಾಂಡವ್ ರಾಮ್ ಭರತ್ ಜೊತೆ ಕೈ ಜೋಡಿಸಿದ್ದಾರೆ. ಕನ್ನಡ ಹಾಗೂ ತೆಲುಗು ಎರಡು ಭಾಷೆಯಲ್ಲಿ ಬಹುತಾರಂಗಣ ದೊಂದಿಗೆ ನಿರ್ಮಾಣವಾಗುತ್ತಿರುವ ಈ ಸಿನಿಮಾ. ಎ ಕ್ಯೂಬ್ ಫಿಲ್ಮಂಸ್ ಸಂಸ್ಥೆಯ ಅಡಿಯಲ್ಲಿ ಅದ್ದೂರಿಯಾಗಿ ನಿರ್ಮಾಣವಾಗಲಿದೆ.

 

ಭರತ್ ಎಸ್ ನಾವುಂದ ಅವರ ಮೂರನೇ ಕನಸು ಇದಾಗಿದೆ. ಪಕ್ಕ ಫ್ಯಾಮಿಲಿ ಕಥಾಹಂದರದ ಸಿನಿಮಾ ಮಾಡಲು ಸಜ್ಜಾಗಿರುವ ಚಿತ್ರತಂಡ, ಶೀಘ್ರದಲ್ಲಿಯೇ ಮತ್ತೊಂದಷ್ಟು ಅಪ್ ಡೇಟ್ಸ್ ಜೊತೆಗೆ  ನಿಮ್ಮ ಮುಂದೆ ಹಾಜರಾಗಲಿದೆ.

Web Stories

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್