Bigg Boss Kannada : ಜೋಡಿಹಕ್ಕಿ ಇಶಾನಿ-ಮೈಕಲ್ ಮಧ್ಯ ಮುನಿಸು

Public TV
2 Min Read

ಬಿಗ್ ಬಾಸ್ (Bigg Boss Kannada)  ಮನೆಯ ಜೋಡಿ ಹಕ್ಕಿಗಳು ಎಂದೇ ಖ್ಯಾತರಾಗಿದ್ದ ಇಶಾನಿ (Ishani) ಮತ್ತು ಮೈಕಲ್ (Michael) ಮಧ್ಯೆ ಮನಸ್ತಾಪವಾಗಿದೆ. ಮೈಕಲ್ ನನ್ನು ಬಾಯ್ ಫ್ರೆಂಡ್ ಎಂದು ಬಾಯ್ತುಂಬಾ ಕರೆಯುತ್ತಿದ್ದ ಇಶಾನಿ, ಇದೀಗ ಮೈಕಲ್ ಮೇಲೆ ಕೋಪ ಮಾಡಿಕೊಂಡಿದ್ದಾರೆ. ಯಾವ ಬಾಯಿಯಿಂದ ಮೈಕಲ್ ನನ್ನು ಕೊಂಡಾಡುತ್ತಿದ್ದರೋ, ಅದೇ ಬಾಯಿಯಿಂದ ಥುಪುಕ್ ಅಂತ ಉಗಿದಿದ್ದಾರೆ.

ದೊಡ್ಮನೆಯ ಅಸಲಿ ಆಟ ಈಗ ಶುರುವಾಗಿದೆ. ಜೋಡಿಹಕ್ಕಿಗಳಾದ ಇಶಾನಿ ಮತ್ತು ಮೈಕಲ್ ನಡುವೆ ಕಿತ್ತಾಟ ಶುರುವಾಗಿದೆ. ಮೈಕಲ್ ನಡೆಗೆ.. ಥೂ ನೀನು ಒಬ್ಬ ಬಾಯ್‌ಫ್ರೆಂಡ್ ಆ ಎಂದು ಇಶಾನಿ ಛೀಮಾರಿ ಹಾಕಿದ್ದಾಳೆ. ಇಬ್ಬರ ಕಿತ್ತಾಟ ನೋಡಿ ಮನೆ ಮಂದಿ ಶಾಕ್ ಆಗಿದ್ದಾರೆ. ಅಷ್ಟಕ್ಕೂ ಏನು ಆಯ್ತಪ್ಪ ಎಂದು ಅಂದುಕೊಳ್ತಿದ್ದೀರಾ.. ಇಲ್ಲಿದೆ ನೋಡಿ ಇಬ್ಬರ ಫೈಟ್ ಕಹಾನಿ.

ಬಿಗ್ ಬಾಸ್ ಸೀಸನ್ 10ರಲ್ಲಿ ಈ ಬಾರಿ ಜೋಡಿ ಹಕ್ಕಿಗಳ ದರ್ಬಾರ್ ಜೋರಾಗಿತ್ತು. ದೊಡ್ಮನೆಯಲ್ಲಿ 3 ಜೋಡಿಗಳು ಹೈಲೆಟ್ ಆಗಿದ್ದರು. ಅದರಲ್ಲಿ ಸಂಗೀತಾ-ಕಾರ್ತಿಕ್, ನಮ್ರತಾ-ಸ್ನೇಹಿತ್ ಮತ್ತು ಇಶಾನಿ-ಮೈಕಲ್ ಜೋಡಿಗಳಾಗಿ ಗುರುತಿಸಿಕೊಂಡಿದ್ದರು. ಇದೀಗ ಇಶಾನಿ- ಮೈಕಲ್ ನಡುವೆ ಗ್ಯಾಪ್ ಕ್ರಿಯೇಟ್ ಆಗಿದೆ. ಮಹಿಳೆಯರು ಪ್ರಬಲ ಸ್ಪರ್ಧಿಯಲ್ಲ ಎಂದಿದ್ದಕ್ಕೆ ಮನೆ ಈಗ ರಣರಂಗವಾಗಿದೆ. ಮೈಕಲ್ ಇಶಾನಿ ಕೂಪಕ್ಕೆ ಗುರಿಯಾಗಿದ್ದಾರೆ.

ಬಿಗ್ ಬಾಸ್‌ನಲ್ಲಿ ನೀನು ಒಬ್ಬಳೇ ನಿಂತು ನಿನ್ನ ಆಟ ಆಡೋಕೆ ಆಗಲ್ಲ ಅಂತ ಖಡಕ್ ಆಗಿ ಇಶಾನಿ ಮುಖಕ್ಕೆ ಹೊಡದ ಹಾಗೆ ಕಾರ್ತಿಕ್ ಮಾತನಾಡಿದ್ದಾರೆ. ನಿನಗೆ ಆ ತಾಖತ್ ಇಲ್ಲ ಎಂದಿದ್ದಾರೆ. ನಾನು ಹುಡುಗಿಯಾಗಿರೋದ್ದಕ್ಕೆ ಹೀಗೆ ಹೇಳ್ತಿದ್ದೀರಾ? ಈಗ ನಿಮ್ಮ ನಿಜರೂಪ ತಿಳಿಯಿತು ಎಂದು ಕಾರ್ತಿಕ್‌ಗೆ ಪ್ರತಿಯುತ್ತರ ಕೊಟ್ಟಿದ್ದಾರೆ ಇಶಾನಿ. ಅಷ್ಟಕ್ಕೆ ನಿಲ್ಲದ ಇಬ್ಬರ ಜಗಳ.. ಆಮೇಲೆ ಮೈಕಲ್ ಬಳಿ ಹೋಗಿದೆ. ಈ ವಿಚಾರಕ್ಕೆ ಮೈಕಲ್‌ಗೂ ಕೂಡ ಖಡಕ್ ಕ್ಲಾಸ್ ತೆಗೆದುಕೊಂಡಿದ್ದಾರೆ.

ಮಹಿಳೆಯರು ಆಡೋಕೆ ಆಗಲ್ಲ ಅಂತ ಹೇಳಿರೋ ಕಾರ್ತಿಕ್ ಜೊತೆ ಮೈಕಲ್ ಕೂಡ ಸೇರಿಕೊಂಡಿದ್ದಾರೆ ಎಂದು ಮೈಕಲ್ ವಿರುದ್ಧ ಇಶಾನಿ ಫುಲ್ ಗರಂ ಆಗಿದ್ದಾರೆ. ಕಾರ್ತಿಕ್ ಮಾತಿಗೆ ನೀವು ಸಪೋರ್ಟ್ ಮಾಡಿದ್ದೀರಾ ಅಂತ ಮೈಕಲ್‌ಗೂ ಇಶಾನಿ ಕ್ಲಾಸ್ ತೆಗೆದುಕೊಂಡಿದ್ದಾರೆ. ಅಷ್ಟೇ ಅಲ್ಲ, ನನ್ನಿಂದ ದೂರು ಇರು… ನೀನು ಒಬ್ಬ ಬಾಯ್‌ಫ್ರೆಂಡ್ ಆ ಥೂ.. ಎಂದಿದ್ದಾರೆ ಇಶಾನಿ. ಬಳಿಕ ಸೈಕೋ ಎಂದ ಮೈಕಲ್‌ಗೆ ಇಶಾನಿ ಚಳಿ ಬಿಡಿಸಿದ್ದಾರೆ. ಪ್ರೇಮಪಕ್ಷಿಗಳಾಗಿ ಹಾರಾಡುತ್ತಿದ್ದ ಜೋಡಿಯ ನಡುವೆ ಕಿರಿಕ್ ಆಗಿರೋದು ನೋಡಿ ಮನೆಮಂದಿ ಕೂಡ ದಂಗಾಗಿದ್ದಾರೆ.

Web Stories

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್