ರಾಜ್ಯದ 8 ಮಂದಿಯಲ್ಲಿ JN.1 ವೈರಸ್‌ ಪತ್ತೆ

By
1 Min Read

ಬೆಂಗಳೂರು: ಮಹಾಮಾರಿ ಕೊರೊನಾ ವೈರಸ್‌ನ (Ciorona Virus) ಹೊಸ ರೂಪಾಂತರ ತಳಿ ಕೊನೆಗೂ ರಾಜ್ಯಕ್ಕೆ ಕಾಲಿಟ್ಟಂಗಿದೆ. ರಾಜ್ಯಕ್ಕೆ ಜೆ.ಎನ್‌ 1 (JN.1) ಶಾಕ್‌ ಎದುರಾಗಿದೆ.

ಹೌದು. ಮೈಸೂರಿನ 8 ಮಂದಿಯಲ್ಲಿ JN.1 ವೈರಸ್‌ ಪತ್ತೆಯಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ. ಇದೀಗ ಹೊಸ ಸೋಂಕು ಸ್ಪೋಟದಿಂದ ರಾಜ್ಯದ ಜನರಲ್ಲಿ ಆತಂಕ ಶುರುವಾಗಿದೆ. ಸದ್ಯ 8 ಮಂದಿ ಸೋಂಕಿತರ ಸಂಪರ್ಕಿತರ ಮಾಹಿತಿ ಕಲೆ ಹಾಕಲಾಗುತ್ತಿದೆ.

ಏನಿದು ಜೆಎನ್.1?
ಬಿಎ.2.86 ಓಮಿಕ್ರಾನ್‌ನ ಒಂದು ಉಪತಳಿ. ಇದರ ಉಪತಳಿಯೇ ಜೆಎನ್.1 ಆಗಿದೆ. ಬಿಎ.2.86 ಹಾಗೂ ಜೆಎನ್.1 ಉಪತಳಿಗಳ ನಡುವೆ ಅಷ್ಟೇನು ವ್ಯತ್ಯಾಸವಿಲ್ಲ. ಸೋಂಕಿನ ಮುಳ್ಳು ಚಾಚಿಕೆಗಳಲ್ಲಿ ಸಣ್ಣದೊಂದು ಬದಲಾವಣೆ ಇದೆಯಷ್ಟೇ. ಹೊಸ ಉಪತಳಿ ಜೆಎನ್.1 ಬಹು ವೇಗವಾಗಿ ಹರಡುತ್ತದೆ. ಹೆಚ್ಚೇನು ಅಪಾಯಕಾರಿ ಅಲ್ಲ. ಆದರೆ ಎಚ್ಚರಿಕೆ ವಹಿಸಬೇಕು ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ.

ರೋಗ ಲಕ್ಷಣಗಳೇನು?
ತೀವ್ರ ಜ್ವರ
ಒಣ ಕೆಮ್ಮು
ಗಂಟಲು ಕೆರೆತ
ಉಸಿರಾಟಕ್ಕೆ ತೊಂದರೆ

ಹೇಗೆ ಹರಡುತ್ತದೆ?
ಸೀನಿದಾಗ
ವ್ಯಕ್ತಿ-ವ್ಯಕ್ತಿ ಸಂಪರ್ಕ
ಸೋಂಕಿತ ವ್ಯಕ್ತಿಗೆ ತಗುಲಿದ ವಸ್ತು
ಗುಂಪಾಗಿ ಸೇರುವುದು

ತಡೆಯುವುದು ಹೇಗೆ?
ಪದೇ ಪದೇ ಕೈ ತೊಳೆಯುವುದು
ಮಾಸ್ಕ್ ಧರಿಸುವುದು
ಸೋಂಕಿತರಿಂದ ಅಂತರ ಕಾಯ್ದುಕೊಳ್ಳುವುದು
ಸೀನುವಾಗ ಕೈಯನ್ನು ಅಡ್ಡಲಾಗಿ ಹಿಡಿಯುವುದು

Share This Article