ಪಹಲ್ಗಾಮ್ ದಾಳಿಯ 3 ಉಗ್ರರ ಫೋಟೋ ರಿಲೀಸ್ – ಸುಳಿವು ಕೊಟ್ಟವರಿಗೆ 20 ಲಕ್ಷ ಬಹುಮಾನ

Public TV
1 Min Read

-ಪೋಸ್ಟರ್ ಅಂಟಿಸಿ ಉಗ್ರರ ಬೆನ್ನಟ್ಟಿದ ಜಮ್ಮು ಕಾಶ್ಮೀರ ಪೊಲೀಸರು

ಶ್ರೀನಗರ: ಪಹಲ್ಗಾಮ್‌ನಲ್ಲಿ (Pahalgam) ನಡೆದ ಭಯೋತ್ಪಾದಕ ದಾಳಿಯಲ್ಲಿ ಭಾಗಿಯಾಗಿದ್ದ ಮೂವರು ಉಗ್ರರ ಪೋಸ್ಟರ್‌ಗಳನ್ನು ಜಮ್ಮು ಮತ್ತು ಕಾಶ್ಮೀರ (Jammu Kashmir) ಪೊಲೀಸರು ಬಿಡುಗಡೆಗೊಳಿಸಿದ್ದು, ಸುಳಿವು ಕೊಟ್ಟವರಿಗೆ 20 ಲಕ್ಷ ರೂ. ಬಹುಮಾನ ನೀಡುವುದಾಗಿ ಘೋಷಿಸಿದ್ದಾರೆ.

ಏ.22 ರಂದು ಪಹಲ್ಗಾಮ್‌ನ ಬೈಸರನ್ ಕಣಿವೆಯಲ್ಲಿ ನಡೆದ ಹಿಂದೂಗಳ ನರಮೇಧದಲ್ಲಿ 26 ಜನರು ಸಾವನ್ನಪ್ಪಿದ್ದರು. ಈ ದಾಳಿಯಲ್ಲಿ ಭಾಗಿಯಾಗಿದ್ದ ಭಯೋತ್ಪಾದಕರನ್ನು ಪತ್ತೆ ಹಚ್ಚಲು ಜಮ್ಮು ಮತ್ತು ಕಾಶ್ಮೀರ ಪೊಲೀಸರು ಮೂವರು ಶಂಕಿತ ಪಾಕ್ ಉಗ್ರರ ಪೋಸ್ಟರ್‌ಗಳನ್ನು ಬಿಡುಗಡೆಗೊಳಿಸಿದ್ದಾರೆ. ಆ ಪೋಸ್ಟರ್‌ಗಳನ್ನು ಅಂಟಿಸಿ ಸುಳಿವು ಕೊಟ್ಟವರಿಗೆ 20 ಲಕ್ಷ ರೂ. ಬಹುಮಾನ ನೀಡುವುದಾಗಿ ಘೋಷಿಸಿದ್ದಾರೆ. ಜೊತೆಗೆ ಸುಳಿವು ಕೊಟ್ಟವರ ಮಾಹಿತಿಯನ್ನು ಗೌಪ್ಯವಾಗಿಡಲಾಗುವುದು ಎಂದು ಉಲ್ಲೇಖಿಸಿದ್ದಾರೆ.ಇದನ್ನೂ ಓದಿ: ಅಮೆರಿಕದಲ್ಲಿ ಕಾರು ಅಪಘಾತ: ಇಬ್ಬರು ಭಾರತೀಯ ವಿದ್ಯಾರ್ಥಿಗಳು ದುರಂತ ಸಾವು

ಸದ್ಯ ಜಮ್ಮು ಮತ್ತು ಕಾಶ್ಮೀರದಾದ್ಯಂತ `ಭಯೋತ್ಪಾದನೆ ಮುಕ್ತ ಕಾಶ್ಮೀರ’ ಎಂಬ ಸಂದೇಶಗಳನ್ನು ಒಳಗೊಂಡಿರುವ ಪೋಸ್ಟರ್‌ಗಳು ಕಾಣಿಸಿಕೊಂಡಿದ್ದು, ಅದರಲ್ಲಿ ಲಷ್ಕರ್-ಇ-ತೈಬಾದ (LET) ಮೂವರು ಭಯೋತ್ಪಾದಕರಾದ ಅನಂತ್‌ನಾಗ್ ನಿವಾಸಿ ಆದಿಲ್ ಹುಸೇನ್ ಥೋಕರ್ ಮತ್ತು ಪಾಕ್ ಪ್ರಜೆಗಳಾದ ಅಲಿ ಭಾಯ್ ಅಕಾ ತಲ್ಹಾ ಭಾಯ್ ಮತ್ತು ಹಶಿಮ್ ಮೂಸಾ ಅಕಾ ಸುಲೇಮಾನ್ ಫೋಟೋಗಳಿವೆ.

ಪಹಲ್ಗಾಮ್ ದಾಳಿಗೆ ಪ್ರತೀಕಾರವಾಗಿ ಭಾರತೀಯ ಸೇನೆ ಮೇ 7ರಂದು `ಆಪರೇಷನ್ ಸಿಂಧೂರ’ (Operation Sindoor) ಹೆಸರಿನಲ್ಲಿ ಪಾಕ್‌ನ 9 ಭಯೋತ್ಪಾದಕರ ನೆಲೆಗಳ ಮೇಲೆ ದಾಳಿ ನಡೆಸಿತು. ಅದಾದ ಬಳಿಕ ಪಾಕಿಸ್ತಾನ ಹಲವು ಬಾರಿ ಅಪ್ರಚೋದಿತ ದಾಳಿ ನಡೆಸಿದ್ದು, ಮೇ 10ರಂದು ಭಾರತ-ಪಾಕಿಸ್ತಾನ ಕದನ ವಿರಾಮ ಘೋಷಿಸಿವೆ.ಇದನ್ನೂ ಓದಿ: ಶಾರುಖ್ ಖಾನ್ ‘ಕಿಂಗ್’ ಸಿನಿಮಾದಲ್ಲಿ ಅನಿಲ್ ಕಪೂರ್

Share This Article