ಪೇಟಿಎಂ ವ್ಯಾಲೆಟ್‌ ಸೇವೆ ಖರೀದಿ ಮಾತುಕತೆ ನಡೆದಿಲ್ಲ – ಜಿಯೋ ಫೈನಾನ್ಸ್‌ ಅಧಿಕೃತ ಹೇಳಿಕೆ

Public TV
2 Min Read

ನವದೆಹಲಿ: ಪೇಟಿಯಂ ವ್ಯಾಲೆಟ್ (Paytm Wallet) ಸೇವೆಯನ್ನು ತಾನು ಖರೀದಿ ಸಂಬಂಧ ಯಾವುದೇ ಮಾತುಕತೆ ನಡೆದಿಲ್ಲ ಎಂದು  ಜಿಯೋ ಫೈನಾನ್ಸ್‌ (Jio Finance) ಅಧಿಕೃತವಾಗಿ ತಿಳಿಸಿದೆ.

ಪೇಮೆಂಟ್ಸ್ ಬ್ಯಾಂಕ್‌ಗೆ ಆರ್‌ಬಿಐ (RBI) ಹಲವು ನಿರ್ಬಂಧ ವಿಧಿಸಿದ ಬಳಿಕ ಪೇಟಿಎಂ ಸಾಕಷ್ಟು ನಷ್ಟಕ್ಕೆ ಸಿಲುಕಿಕೊಂಡಿದೆ. ಈ ಬೆನ್ನಲ್ಲೇ ಮುಕೇಶ್‌ ಅಂಬಾನಿ (Mukesh Ambani) ನೇತೃತ್ವದ ಜಿಯೋ ಫೈನಾನ್ಸ್‌ ಪೇಟಿಯಂ ವ್ಯಾಲೆಟ್ ಸೇವೆಯನ್ನು ಖರೀದಿಸಲಿದೆ ಎಂದು ವರದಿಯಾಗಿತ್ತು.

ಈ ವರದಿಯ ಬೆನ್ನಲ್ಲೇ ಬಾಂಬೆ ಷೇರು ಮಾರುಕಟ್ಟೆಗೆ (BSE) ಜಿಯೋ ಫೈನಾನ್ಸಿಯಲ್‌ ಸರ್ವಿಸ್‌ ಲಿಮಿಟೆಡ್‌(JFSL) ತಾನು ಪೇಟಿಎಂ ವ್ಯಾಲೆಟ್‌ ಖರೀದಿಸುವುದಿಲ್ಲ ಎಂದು ತಿಳಿಸಿದೆ. ಖರೀದಿ ವಿಚಾರ ಕೇವಲ ಊಹಾತ್ಮಕ ಸುದ್ದಿಯಾಗಿದೆ. ಈ ವಿಷಯದಲ್ಲಿ ಯಾವುದೇ ಮಾತುಕತೆ ನಡೆಸಿಲ್ಲ ಎಂಬುದನ್ನು ನಾವು ಸ್ಪಷ್ಟಪಡಿಸುತ್ತೇವೆ ಎಂದು ತಡರಾತ್ರಿ ಜಿಯೋ ಫೈನಾನ್ಸ್‌ ಫೈಲಿಂಗ್‌ನಲ್ಲಿ ತಿಳಿಸಿದೆ. ಇದನ್ನೂ ಓದಿ: ಲೋಕಸಭೆ ಚುನಾವಣೆಯಲ್ಲಿ ಎನ್‌ಡಿಎ 400 ಸ್ಥಾನಗಳ ಗಡಿ ದಾಟುತ್ತೆ.. ಬಿಜೆಪಿಗೆ 370 ಸೀಟು ಬರುತ್ತೆ: ಮೋದಿ ಭವಿಷ್ಯ

ಮಾಧ್ಯಮಗಳಲ್ಲಿ ಖರೀದಿ ವರದಿ ಪ್ರಕಟವಾಗುತ್ತಿದ್ದಂತೆ ಸೋಮವಾರ ಜಿಯೋ ಫೈನಾನ್ಸ್‌ ಷೇರಿನ ಬೆಲೆ 35.30 ರೂ. (13.91%) ಏರಿಕೆಯಾಗಿ 289.05 ರೂ. ತಲುಪಿತ್ತು.

ವ್ಯಾಲೆಟ್ ಖರೀದಿಗೆ ಸಂಬಂಧಿಸಿದಂತೆ ಪೇಟಿಯಂ ಮಾತೃ ಸಂಸ್ಥೆಯಾದ 97 ಕಮ್ಯುನಿಕೇಶನ್ ಸಂಸ್ಥೆ ಹಾಗೂ ರಿಲಯನ್ಸ್‌ ಮತ್ತು ಖಾಸಗಿ ಬ್ಯಾಂಕ್ ಹೆಚ್‌ಡಿಎಫ್‌ಸಿ ಜೊತೆ ಮಾತುಕತೆ ನಡೆಸಿದೆ ಎಂದು ವರದಿಯಾಗಿದೆ.

ವ್ಯಾಲೆಟ್ ಸೇವೆಯನ್ನು ಖರೀದಿ ಮಾಡಲು ಜಿಯೋ ಫೈನಾನ್ಸ್ ಮತ್ತು ಹೆಚ್‌ಡಿಎಫ್‌ಸಿ ಬ್ಯಾಂಕ್‌ಗಳು ಕಳೆದ ನವೆಂಬರ್‌ನಲ್ಲೇ ಮಾತುಕತೆಗಳು ನಡೆದಿತ್ತು. ಈಗ ಆರ್‌ಬಿಐ ನಿರ್ಬಂಧ ಹೇಳಿದ ನಂತರ ಮಾತುಕತೆ ಮತ್ತೆ ಚುರುಕುಗೊಂಡಿದೆ ಎನ್ನಲಾಗಿದೆ. ಇದನ್ನೂ ಓದಿ: ನಮ್ಮ 3ನೇ ಅವಧಿಯಲ್ಲಿ ಭಾರತ ವಿಶ್ವದ ಮೂರನೇ ದೊಡ್ಡ ಆರ್ಥಿಕತೆಯ ದೇಶವಾಗಲಿದೆ: ಮೋದಿ ಭರವಸೆ

ಕಳೆದ 3 ದಿನಗಳಲ್ಲಿ ಪೇಟಿಯಂನ ಮೌಲ್ಯ 42%ರಷ್ಟು ಕುಸಿತ ಕಂಡಿದ್ದು, 20 ಸಾವಿರ ಕೋಟಿ ನಷ್ಟ ಉಂಟುಮಾಡಿದೆ. ಕಳೆದ ಅಕ್ಟೋಬರ್‌ನಲ್ಲಿ ಪೇಟಿಎಂ ಒಂದು ಷೇರಿನ ಬೆಲೆ 998 ರೂ. ಏರಿತ್ತು. ಆದರೆ ಫೆ.5ರ ವೇಳೆ ಒಂದು ಷೇರಿನ ಮೌಲ್ಯ 438.50 ರೂ.ಗೆ ಕುಸಿದಿದೆ.

 

Share This Article