ಗುಜರಾತ್ ಪೊಲೀಸರಿಂದ ಜಿಗ್ನೇಶ್ ಮೇವಾನಿ ಎನ್‍ಕೌಂಟರ್ ಸಂಚು? ವಿಡಿಯೋ ವೈರಲ್

Public TV
1 Min Read

ಅಹಮದಾಬಾದ್: ಗುಜರಾತ್ ಪೊಲೀಸರು ದಲಿತ ನಾಯಕ, ವಾಡಗಾಂವ್ ಕ್ಷೇತ್ರದ ಶಾಸಕ ಜಿಗ್ನೇಶ್ ಮೇವಾನಿ ಅವರನ್ನು ಎನ್‍ಕೌಂಟರ್ ಮಾಡಲು ಸಂಚು ರೂಪಿಸಿರುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗಿದ್ದು, ಹಲವು ಅನುಮಾನಗಳಿಗೆ ಕಾರಣವಾಗಿದೆ.

ಹಿರಿಯ ಪೊಲೀಸ್ ಅಧಿಕಾರಿಗಳು, ಮಾಧ್ಯಮ ಪ್ರತಿನಿಧಿಗಳನ್ನೊಳಗೊಂಡ ವಾಟ್ಸಪ್ ಗ್ರೂಪ್ ನಲ್ಲಿ ಈ ವಿಡಿಯೋವನ್ನು ಶೇರ್ ಮಾಡಲಾಗಿದೆ. ಆ ವಿಡಿಯೋಗಳಲ್ಲಿ ರಾಜಕಾರಣಿಯಂತೆ ಕಾಣಿಸುವ ವ್ಯಕ್ತಿಯೊಬ್ಬನನ್ನು ಪೊಲೀಸರು ಹೊಡೆಯುತ್ತಿರುವ ದೃಶ್ಯ ಮೊದಲ ವಿಡಿಯೋದಲ್ಲಿದೆ. ಮತ್ತೊಂದರಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ವಿಷಯಕ್ಕೆ ಸಂಬಂಧಿಸಿ ಕೇಳುವ ಪ್ರಶ್ನೆಗಳಿಗೆ ಉತ್ತರಿಸುವ ದೃಶ್ಯವಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ ಗುಜರಾತ್ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದೆ.

ವಿಡಿಯೋದಲ್ಲಿ ಏನಿದೆ?: ಪೊಲೀಸರು ತಂದೆಯಾಗಲು ಬಯಸುವರು, ಪೊಲೀಸರು ‘ಲಖೋಟ’ ಎಂದು ಕರೆಯುವರನ್ನು ಮತ್ತು ಪೊಲೀಸರ ವಿಡಿಯೋ ಮಾಡುವರ ಜೊತೆ ಪೊಲೀಸರು ಹೀಗೆ ವರ್ತಿಸಲಿದ್ದಾರೆ. ಲೆಕ್ಕ ಚುಕ್ತಾ ಮಾಡಲಾಗುವುದು ಎಂದು ಗುಜರಾತ್ ಪೊಲೀಸರು ಹೇಳಿರುವ ವಿಡಿಯೋವನ್ನು ವಾಟ್ಸ್‍ಆಪ್ ಗ್ರೂಪ್ ನಲ್ಲಿ ಅಹಮದಾಬಾದ್ ಗ್ರಾಮೀಣ ಡಿವೈಎಸ್‍ಪಿ ಆರ್.ಬಿ. ದೇವ್ ಧಾ ಹಂಚಿಕೊಂಡಿದ್ದ ವಿಡಿಯೋಗಳು ಶುಕ್ರವಾರ ವೈರಲ್ ಆಗಿದೆ.

ಬೇರೆ ಗ್ರೂಪ್ ನಲ್ಲಿ ಬಂದ ಆ ವಿಡಿಯೋಗಳನ್ನು ಕಾಪಿ ಪೇಸ್ಟ್ ಮಾಡಿದ್ದೆನಷ್ಟೆ. ಅದು ನಾನೇ ಸ್ವತಃ ಕಳುಹಿಸಿದ ವಿಡಿಯೋಗಳಲ್ಲ. ಈಗ ಅದೇ ವಿಡಿಯೋಗಳು ಇತರೇ ಗ್ರೂಪ್ ನಲ್ಲಿ ಹರಿದಾಡುತ್ತಿದೆ.” ಎಂದು ಡಿವೈಎಸ್ ಪಿ ಆರ್.ಬಿ.ದೇವದ್ ಸ್ಪಷ್ಟನೆ ನೀಡಿದ್ದಾರೆ.

ಈ ಕುರಿತು ಜಿಗ್ನೇಶ್‍ರವರು ಖಾಸಗಿ ವಾಹಿನಿಯೊಂದಕ್ಕೆ “ಇದು ಗಂಭೀರ ವಿಷಯವಾಗಿದೆ. ಎನ್‍ಕೌಂಟರ್‍ನಲ್ಲಿ ನನನ್ನು ಕೊಲ್ಲಬಹುದೆಂದು ಇಬ್ಬರು ಉನ್ನತ ಪೊಲೀಸ್ ಅಧಿಕಾರಿಗಳು ಮಾತನಾಡುತ್ತಿರುವುದರ ಬಗ್ಗೆ ನಾನು ಡಿಜಿಪಿ, ಗೃಹ ಸಚಿವರಿಗೆ ದೂರು ನೀಡುವುದಾಗಿ ತಿಳಿಸಿದ್ದಾರೆ.

ಫೆಬ್ರವರಿ 18 ರಂದು ಈ ವಿಡಿಯೋ ವೈರಲ್ ಆಗಿತ್ತು. ಜಿಗ್ನೇಶ್‍ರವರು ಅಹ್ಮದಾಬಾದ್ ಬಾಂಧವನ್ನು ಪ್ರಾರಂಭಿಸುವ ಮೊದಲು ಇವರು ಬಂಧನಕ್ಕೊಳಗಾದ ಕಾರಣ ಮೇವಾನಿ ಪೊಲೀಸರು ಇಗೇ ಮಾತನಾಡಿದ್ದಾರೆಂದು ಶಂಕಿಸಲಾಗಿದೆ.

 

Share This Article
Leave a Comment

Leave a Reply

Your email address will not be published. Required fields are marked *