80 ವಿದ್ಯಾರ್ಥಿನಿಯರ ಶರ್ಟ್‌ ಬಿಚ್ಚಿಸಿದ ಪ್ರಾಂಶುಪಾಲ

Public TV
1 Min Read

ರಾಂಚಿ: ಜಾರ್ಖಂಡ್‌ನ (Jharkhand) ಧನ್‌ಬಾದ್‌ನಲ್ಲಿರುವ ಪ್ರತಿಷ್ಠಿತ ಶಾಲೆಯ ಪ್ರಾಂಶುಪಾಲನೊಬ್ಬ ವಿದ್ಯಾರ್ಥಿನಿಯರ ಶರ್ಟ್‌ ಬಿಚ್ಚಿಸಿ ಬ್ಲೇಸರ್‌ನಲ್ಲೇ (Blazers) ಮನೆಗೆ ಕಳುಹಿಸಿರುವ ಘಟನೆ ನಡೆದಿದೆ.

ವಿದ್ಯಾರ್ಥಿನಿಯರು (Jharkhand Students) ಶರ್ಟ್‌ ಮೇಲೆ ಪೆನ್ನಿನಿಂದ ಬರೆದುಕೊಂಡಿದ್ದರು, ಇದರಿಂದ ಗರಂ ಆಗಿ ಅವರ ಶರ್ಟ್‌ ಬಿಚ್ಚಿಸಿ, ಬರೀ ಬ್ಲೇಸರ್‌ನಲ್ಲೇ ಮನೆಗೆ ಕಳುಹಿಸಿದ್ದಾನೆ. ಪ್ರಾಂಶುಪಾಲರ ಈ ನಡೆಗೆ ಪೋಷಕರಿಂದ ಭಾರೀ ಆಕ್ರೋಶ ವ್ಯಕ್ತವಾಗಿದ್ದು, ಜಿಲ್ಲಾಧಿಕಾರಿ ಮಾಧವಿ ಮಿಶ್ರಾ ಅವರು ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.  ಇದನ್ನೂ ಓದಿ: ಟ್ರಕ್‌ ಗುದ್ದಿದ ರಭಸಕ್ಕೆ ಶಿರ ಛಿದ್ರ – ರಸ್ತೆ ಅಪಘಾತ, ಬಾಲಕ ಸ್ಥಳದಲ್ಲೇ ಸಾವು

80 ವಿದ್ಯಾರ್ಥಿನಿಯರು ಶಾಲೆಯಲ್ಲಿ ʻಪೆನ್‌ ಡೇʼ ಆಚರಿಸಿ, ಶರ್ಟ್‌ ಮೇಲೆ ಪೆನ್ನಿನಿಂದ ಬರೆದುಕೊಂಡಿದ್ದರು. ಇದರಿಂದ ಸಿಟ್ಟಾದ ಪ್ರಾಂಶುಪಾಲ ಶರ್ಟ್‌ ಬಿಚ್ಚಿ ಮನೆಗೆ ಕಳಿದ್ದಾನೆ ಎಂದು ವರದಿಯಾಗಿದೆ. ಇದನ್ನೂ ಓದಿ: ಮಂಡ್ಯ ರೈತರ ಬೆನ್ನುಬಿದ್ದ ವಕ್ಫ್ ಭೂತ – ಪುರಾತತ್ವ ಇಲಾಖೆ ಆಸ್ತಿ ಮೇಲೂ ಕಣ್ಣು

Share This Article