ಬೆಂಗಳೂರಲ್ಲಿ ಚಿನ್ನದಂಗಡಿ ದರೋಡೆ ಕೇಸ್‌ – ಟಾಯ್‌ ಗನ್ ತೋರಿಸಿ ಚಿನ್ನ ರಾಬರಿ

Public TV
1 Min Read

ಬೆಂಗಳೂರು: ಟಾಯ್‌ ಗನ್‌ ತೋರಿಸಿ ಬೆಂಗಳೂರಿನ ಮಾದನಾಯಕನಹಳ್ಳಿಯಲ್ಲಿ ಚಿನ್ನದಂಗಡಿ ದರೋಡೆ ಮಾಡಿರುವುದು ಬೆಳಕಿಗೆ ಬಂದಿದೆ. ಪರಿಚಿತರೇ ಈ ಕೃತ್ಯ ಎಸಗಿರುವ ಶಂಕೆ ವ್ಯಕ್ತವಾಗಿದೆ.

ಮಾಚೋಹಳ್ಳಿ ಗೇಟ್ ಬಳಿ ಚಿನ್ನದಂಗಡಿ ಕಳ್ಳತನಕ್ಕೆ ಬಳಸಿದ್ದು, ಟಾಯ್ ಗನ್ ಅನ್ನೋದು ಗೊತ್ತಾಗಿದೆ. ಕಳೆದ ಗುರುವಾರ ಜುವೆಲ್ಲರಿ ಶಾಪ್ ಕ್ಲೋಸ್ ಮಾಡುವ ಹೊತ್ತಲ್ಲಿ ಏಕಾಏಕಿ ಕೈಯಲ್ಲಿ ಗನ್ ಹಿಡಿದು‌ ಮೂವರು ನುಗ್ಗಿದ್ದರು. ಶಾಪ್ ಒಳಗೆ ಬಂದಿದ್ದ ಮೂವರು ಅಂಗಡಿಯಲ್ಲಿದ್ದ ಸುಮಾರು 180 ಗ್ರಾಂ ನಷ್ಟು ಚಿನ್ನಾಭರಣ ದೋಚಿ ಪರಾರಿಯಾಗಿದ್ದರಿ. ಇದನ್ನೂ ಓದಿ: ಇನ್ಸ್ಟಾಗ್ರಾಂ ಲವ್, ಸೆಕ್ಸ್, ದೋಖಾ ಆರೋಪ – ಡೆತ್‌ ನೋಟ್ ಬರೆದಿಟ್ಟು ಮಹಿಳೆ ಆತ್ಮಹತ್ಯೆ

ಮಾಲೀಕ ಮತ್ತು ಸಿಬ್ಬಂದಿ ತಡೆಯೋಕೆ ಯತ್ನಿಸಿದ್ದರೂ ಅದು ಸಾಧ್ಯವಾಗಿರಲಿಲ್ಲ. ವಿಚಾರ ತಿಳಿದು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ ಪೊಲೀಸರಿಗೆ ಆರೋಪಿಗಳು ಕೈಯಲ್ಲಿ ಹಿಡಿದು ಬಂದಿದ್ದ ಗನ್‌ಗಳು ನಕಲಿಯಾಗಿವೆ ಅನ್ನೋದು ಗೊತ್ತಾಗಿದೆ. ಅಷ್ಟೇ ಅಲ್ಲ, ಆರೋಪಿಗಳು ಪರಿಚಿತರು ಎನ್ನುವ ಶಂಕೆ ವ್ಯಕ್ತವಾಗಿದೆ.

ಪೊಲೀಸರ ತನಿಖೆಯಲ್ಲಿ ಆರೋಪಿಗಳ ಬಗ್ಗೆ ಸುಳಿವು ಸಿಕ್ಕಿದ್ದು, ಅದಷ್ಟು ಬೇಗ ಬಂಧಿಸುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ:  ರಾಯಚೂರಿನಲ್ಲಿ ಮಳೆಯಬ್ಬರ – ಪಾಯ ಕುಸಿದು ಪಕ್ಕಕ್ಕೆ ವಾಲಿದ 4 ಅಂತಸ್ತಿನ ಕಟ್ಟಡ

Share This Article