ಭಾರೀ ಮಳೆಗೆ ಪ್ರವಾಹದಂತಾದ ಜ್ಯುವೆಲ್ಲರಿ ಶಾಪ್ – ಕೊಚ್ಚಿ ಹೋಯ್ತು 2.5 ಕೋಟಿಯ ಆಭರಣ

Public TV
1 Min Read

ಬೆಂಗಳೂರು: ಭಾನುವಾರ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ (Bengaluru) ಸುರಿದ ಭಾರೀ ಮಳೆಗೆ (Rain) ಹಲವೆಡೆ ಅವಾಂತರಗಳು ಸೃಷ್ಟಿಯಾಗಿವೆ. ಸಿಲಿಕಾನ್ ಸಿಟಿಯಲ್ಲಿ ಒಂದೇ ದಿನ ಇಬ್ಬರ ಸಾವಾಗಿದೆ. ಇದೇ ರೀತಿ ನಗರದ ಆಭರಣದ ಅಂಗಡಿಯೊಂದಕ್ಕೆ (Jewelery Shop) ನೀರು ನುಗ್ಗಿ ಆಭರಣಗಳು ನೀರಲ್ಲಿ ಕೊಚ್ಚಿ ಹೋಗಿರುವ ಘಟನೆಯೂ ನಡೆದಿದೆ.

ಮಲ್ಲೇಶ್ವರಂನ (Malleshwaram) ಭರಣದ ಅಂಗಡಿಯೊಂದಕ್ಕೆ ಮಳೆಯ ನೀರು ನುಗ್ಗಿದ್ದು, ಅಂಗಡಿಯಲ್ಲಿದ್ದ ಅರ್ಧಕ್ಕರ್ಧ ಆಭರಣಗಳು ಕೊಚ್ಚಿ ಹೋಗಿವೆ. ಅಂಗಡಿಯಲ್ಲಿದ್ದ ಫರ್ನಿಚರ್ಸ್, ಜ್ಯುವೆಲ್ಲರಿ ಹಾಗೂ 50 ಸಾವಿರ ರೂ. ಹಣ ಅಂಗಡಿಯ ಹಿಂಭಾಗದ ಬಾಗಿಲಿನ ಮೂಲಕ ಕೊಚ್ಚಿ ಹೋಗಿದೆ.

ಆಭರಣದ ಅಂಗಡಿ ಆರಂಭವಾಗಿ ಮೇ 27ಕ್ಕೆ 1 ವರ್ಷ ತುಂಬಲಿದೆ. ಆದರೆ ಏಕಾಏಕಿ ಸುರಿದ ಮಳೆಯಿಂದ ಅಂಗಡಿಗೆ ರಭಸವಾಗಿ ನೀರು ನುಗ್ಗಿ ಮಾಲೀಕರು ಬೆಲೆಬಾಳುವ ವಸ್ತುಗಳನ್ನೆಲ್ಲಾ ಕಳೆದುಕೊಂಡಿದ್ದಾರೆ. ಇದೀಗ ಅಂಗಡಿ ಮಾಲಕಿ ಪ್ರಿಯಾ ಏನೂ ತೋಚದೇ ಕಣ್ಣೀರು ಹಾಕಿದ್ದಾರೆ. ಇದನ್ನೂ ಓದಿ: ಯುವತಿಯ ರಕ್ಷಣೆಗೆ ಪ್ರಯತ್ನ ಪಟ್ಟರೂ ಸಾಧ್ಯವಾಗಲಿಲ್ಲ: ನೀರಿಗೆ ಧುಮುಕಿ ಐವರನ್ನು ರಕ್ಷಿಸಿದ ‘ಪಬ್ಲಿಕ್’ ಹೀರೋ

ಅಂಗಡಿಗೆ ನೀರು ತುಂಬುತ್ತಿದ್ದಂತೆ ಪ್ರಿಯಾ ಬಿಬಿಎಂಪಿ ಅಧಿಕಾರಿಗಳಿಗೆ ಕರೆ ಮಾಡಿ ಮಾಹಿತಿ ನೀಡಿದ್ದರು. ಆದರೆ ಅಧಿಕಾರಿಗಳು ಯಾವುದಕ್ಕೂ ಕ್ಯಾರೇ ಅಂದಿರಲಿಲ್ಲ. ಇದೀಗ ಸುಮಾರು 2 ಕೋಟಿ ರೂ. ವೆಚ್ಚದ ಆಭರಣ ಹಾಗೂ ಫರ್ನಿಚರ್ಸ್ಗಳನ್ನು ಮಾಲೀಕರು ಕಳೆದುಕೊಂಡಿದ್ದಾರೆ. ಇದನ್ನೂ ಓದಿ: ಅಂಡರ್ ಪಾಸ್‌ನಲ್ಲಿ ಸಿಲುಕಿದ್ದ ಐವರ ರಕ್ಷಣೆ – ಪಬ್ಲಿಕ್ ಟಿವಿ ಡ್ರೈವರ್‌ಗೆ ಬಹುಮಾನ ಘೋಷಣೆ

Share This Article