ಬಿಹಾರದಲ್ಲಿ ಸರಣಿ ಅಪಘಾತ- 9 ಮಂದಿ ದುರ್ಮರಣ

Public TV
1 Min Read

ಪಾಟ್ನಾ: ಟ್ರಕ್, ಜೀಪ್ ಮತ್ತು ಬೈಕ್ ನಡುವೆ ಸಂಭವಿಸಿದ ಸರಣಿ ಅಪಘಾತದಲ್ಲಿ (Accident) ಇಬ್ಬರು ಮಹಿಳೆಯರು ಸೇರಿದಂತೆ ಒಂಬತ್ತು ಜನ ಸಾವನ್ನಪ್ಪಿದ ಘಟನೆ ಬಿಹಾರದ (Bihar) ಕೈಮೂರ್‌ನಲ್ಲಿ ನಡೆದಿದೆ.

ಜೀಪ್‍ನಲ್ಲಿ ಇಬ್ಬರು ಮಹಿಳೆಯರು ಸೇರಿದಂತೆ 8 ಮಂದಿ ಪ್ರಯಾಣಿಸುತ್ತಿದ್ದರು. ಈ ವೇಳೆ ಅದೇ ದಿಕ್ಕಿನಲ್ಲಿ ಚಲಿಸುತ್ತಿದ್ದ ಬೈಕ್‍ಗೆ ಜೀಪ್ ಡಿಕ್ಕಿ ಹೊಡೆದಿದೆ. ಬಳಿಕ ಎದುರಿನಿಂದ ಬರುತ್ತಿದ್ದ ಟ್ರಕ್ ಬೈಕ್ ಮತ್ತು ಟ್ರಕ್‍ಗೆ ಡಿಕ್ಕಿಯಾಗಿದೆ. ಪರಿಣಾಮ ಸ್ಥಳದಲ್ಲೇ ಬೈಕ್ ಸವಾರ ಹಾಗೂ ಜೀಪ್‍ನಲ್ಲಿದ್ದ 8 ಜನ ಸೇರಿದಂತೆ 9 ಮಂದಿ ಸಾವನ್ನಪ್ಪಿದ್ದಾರೆ. ಇದನ್ನೂ ಓದಿ: 22 ವರ್ಷಗಳ ಬಳಿಕ ಬಲೆಗೆ ಬಿದ್ದ ಸಿಮಿ ಉಗ್ರ- ಬದಲಿಸಿಕೊಂಡ ಹೆಸರೇ ಪೊಲೀಸರಿಗೆ ಸುಳಿವು

ಅಪಘಾತದ ಬಳಿಕ ಟ್ರಕ್ ಬಿಟ್ಟು ಚಾಲಕ ಪರಾರಿಯಾಗಿದ್ದಾನೆ. ಟ್ರಕ್‍ನ್ನು ವಶಪಡಿಸಿಕೊಳ್ಳಲಾಗಿದೆ ಮತ್ತು ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ. ಅಪಘಾತದಲ್ಲಿ ಮೃತಪಟ್ಟವರ ಗುರುತು ಇನ್ನೂ ಪತ್ತೆಯಾಗಿಲ್ಲ ಎಂದು ಪೊಲೀಸರು (Police) ತಿಳಿಸಿದ್ದಾರೆ.

ಅಪಘಾತದ ಬಗ್ಗೆ ಬಿಹಾರ ಸಿಎಂ ನಿತೀಶ್ ಕುಮಾರ್ ತೀವ್ರ ಸಂತಾಪ ಸೂಚಿಸಿದ್ದಾರೆ. ಇದನ್ನೂ ಓದಿ: ಮಧ್ಯರಾತ್ರಿ ಕರೆ ಮಾಡಿದ್ರೂ ಸ್ಪಂದಿಸ್ತಿದ್ರು- ರಾಜಾ ವೆಂಕಟಪ್ಪ ನಿಧನಕ್ಕೆ ಅಭಿಮಾನಿಗಳ ಕಂಬನಿ

Share This Article