ಪಕ್ಕದ ಅಂಗಡಿಯಲ್ಲಿ ವ್ಯಾಪಾರ ಚೆನ್ನಾಗಿದೆ ಅಂತ ಮತ್ಸರ – ಅಂಗಡಿ ಮಾಲೀಕನ ಕೊಲೆಗೆ ಸುಪಾರಿ ಕೊಟ್ಟಿದ್ದವ ಅರೆಸ್ಟ್

Public TV
1 Min Read

ಬೆಂಗಳೂರು: ಪಕ್ಕದ ಅಂಗಡಿಯಲ್ಲಿ ವ್ಯಾಪಾರ ಚೆನ್ನಾಗಿ ನಡೆಯುತ್ತಿದೆ ಎಂದು ಮತ್ಸರ ಉಂಟಾಗಿ ಅಂಗಡಿ ಮಾಲೀಕನ ಕೊಲೆಗೆ ಸುಪಾರಿ ಕೊಟ್ಟಿದ್ದ ಆರೋಪಿಯನ್ನು ಬಾಗಲಗುಂಟೆ ಪೊಲೀಸರು (Bagalgunte Police) ಬಂಧಿಸಿದ್ದಾರೆ.

ವೇನರಾಮ್ (45) ಕೊಲೆಗೆ ಸುಪಾರಿ ಕೊಟ್ಟಿದ್ದ ಆರೋಪಿ. ನೇಮರಾಮ್ ಎಂಬ ವ್ಯಕ್ತಿ ಬಾಗಲಗುಂಟೆ ಸಿಡೇದಹಳ್ಳಿ ಬಳಿ ಹ್ಯಾಪಿ ಟೆಕ್ಸ್‌ಟೈಲ್‌ ಅಂಗಡಿ (Textile Shop) ಇಟ್ಟುಕೊಂಡಿದ್ದರು. ಅಂಗಡಿ ಪಕ್ಕದಲ್ಲೇ ವೇನರಾಮ್ ಹೈ ಫ್ಯಾಷನ್ ಬಟ್ಟೆ ಅಂಗಡಿ ಇಟ್ಟುಕೊಂಡಿದ್ದ. ನೇಮರಾಮ್ ಅಂಗಡಿಯಲ್ಲಿ ವ್ಯಾಪಾರ ಹೆಚ್ಚಾಗಿ ನಡೆಯುತ್ತಿತ್ತು. ಅದರಿಂದ ಮತ್ಸರಗೊಂಡ ಆರೋಪಿ ವೇನರಾಮ್ ಆ ಅಂಗಡಿಯಲ್ಲಿ ಬಟ್ಟೆ ಸರಿ ಇಲ್ಲ ಎಂದು ಅಪಪ್ರಚಾರ ಮಾಡುತ್ತಿದ್ದ. ವೇನರಾಮ್ ಅಂಗಡಿಯಲ್ಲಿದ್ದ ಹುಡುಗನನ್ನ ನೇಮರಾಮ್ ತನ್ನ ಅಂಗಡಿಗೆ ಸೇರಿಸಿಕೊಂಡಿದ್ದ. ಇದರಿಂದ ಕೋಪಗೊಂಡಿದ್ದ ವೇನರಾಮ್, ನೇಮರಾಮ್ ಕೊಲೆಗೆ ಸುಪಾರಿ ಕೊಟ್ಟಿದ್ದ. ಇದನ್ನೂ ಓದಿ: ವಿಶ್ವದಲ್ಲಿ ನಮಗೆ ಯಾರೂ ಶತ್ರುಗಳಿಲ್ಲ, ಬೇರೆ ದೇಶದ ಮೇಲಿನ ಅವಲಂಬನೆಯೇ ನಮ್ಮ ದೊಡ್ಡ ಶತ್ರು – ಮೋದಿ

ರಾಜಸ್ಥಾನದ ವಿನೋದ್ ಜಾಟ್ ಎಂಬಾತನಿಗೆ ವೇನರಾಮ್ 5 ಲಕ್ಷಕ್ಕೆ ಸುಪಾರಿ ಕೊಟ್ಟಿದ್ದ. ಅದರಂತೆ ವ್ಯಾಪಾರ ಮುಗಿಸಿ ಹೊರಟಿದ್ದ ನೇಮರಾಮ್ ಮೇಲೆ ಅಟ್ಯಾಕ್ ಮಾಡಲಾಗಿತ್ತು. ಎರಡು ಬೈಕ್‌ನಲ್ಲಿ ಬಂದು ವಿನೋದ್ ಟೀಂ ಅಟ್ಯಾಕ್ ಮಾಡಿತ್ತು. ಸದ್ಯ ಸುಪಾರಿ ಸಂಬಂಧ ವೇನರಾಮ್‌ನನ್ನು ಬಾಗಲಗುಂಟೆ ಪೊಲೀಸರು ಬಂಧಿಸಿದ್ದಾರೆ. ಸುಪಾರಿ ಪಡೆದ ಆರೋಪಿ ವಿನೋದ್ ಜಾಟ್‌ಗಾಗಿ ಪೊಲೀಸರ ಹುಡುಕಾಟ ನಡೆಸುತ್ತಿದ್ದಾರೆ. ಘಟನೆ ಸಂಬಂಧ ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ದೆಹಲಿ | ಮಾದಕವಸ್ತು ಜಾಲದ ಮೇಲೆ 500 ಪೊಲೀಸರಿಂದ ರೇಡ್ – 63 ಮಂದಿ ಅರೆಸ್ಟ್

Share This Article