ದೇವರಾಜ ಅರಸು ಸಾಧನೆ ಸರಿಗಟ್ಟಿದ ಸಿದ್ದರಾಮಯ್ಯ- ಸಿದ್ದು ಆಡಳಿತ ದುರಾಡಳಿತ ಅಂತ ಜೆಡಿಎಸ್ ಲೇವಡಿ

1 Min Read

ಬೆಂಗಳೂರು: ಕರ್ನಾಟಕದಲ್ಲಿ ಅತಿ ಹೆಚ್ಚು ಅವಧಿಗೆ ಸಿಎಂ ಆಗಿ ಸಿದ್ದರಾಮಯ್ಯ ಇತಿಹಾಸ ನಿರ್ಮಾಣ ಮಾಡ್ತಿರೋ ವಿಚಾರಕ್ಕೆ ಜೆಡಿಎಸ್ (JDS) ಲೇವಡಿ ಮಾಡಿದೆ. ಸಿದ್ದರಾಮಯ್ಯ (Siddaramaiah) ಅವಧಿ ದುರಾಡಳಿತದ ಅವಧಿ ಅಂತ ಕಿಡಿಕಾರಿರುವ ಜೆಡಿಎಸ್, ಸಿದ್ದರಾಮಯ್ಯ ಅವಧಿಯಲ್ಲಾದ ಭ್ರಷ್ಟಾಚಾರಗಳ ಕೇಸ್ ಪಟ್ಟಿ ಬಿಡುಗಡೆ ಮಾಡಿ ತಿರುಗೇಟು ಕೊಟ್ಟಿದೆ.

ಜೆಡಿಎಸ್ X ನಲ್ಲಿ ಏನಿದೆ!?
ಕರ್ನಾಟಕದ ಸುದೀರ್ಘ ಅವಧಿಯ ಸಿಎಂ ಎಂದು ದಾಖಲೆ ಮಾಡಿರುವ ಸಿದ್ದರಾಮಯ್ಯ ಅವರ ಕಾಲದ ದುರಾಡಳಿತದ ಪಟ್ಟಿ. ಇದನ್ನೂ ಓದಿ: 5 ವರ್ಷವೂ ಸಿದ್ದರಾಮಯ್ಯನವರೇ ಸಿಎಂ, ಬಜೆಟ್ ಮಂಡನೆ ಮಾಡುತ್ತಾರೆ: ಬಸವರಾಜ ರಾಯರೆಡ್ಡಿ

ರಾಜ್ಯದಲ್ಲಿ ಅತೀ ಹೆಚ್ಚು ಕೋಮುಗಲಭೆ ಮತ್ತು ಹಿಂಸಾಚಾರ. ಅತೀ ಹೆಚ್ಚು ರೈತರ ಆತ್ಮಹತ್ಯೆ ಪ್ರಕರಣ. ಭ್ರಷ್ಟಾಚಾರದಲ್ಲಿ ಕರ್ನಾಟಕ ನಂಬರ್- 1 ರಾಜ್ಯ ಆಗಿದ್ದು. ಭ್ರಷ್ಟಾಚಾರ ಆರೋಪದಲ್ಲಿ ಕಾಂಗ್ರೆಸ್ ಪಕ್ಷದ ಅತಿ ಹೆಚ್ಚು ಶಾಸಕರು ಜೈಲು ಸೇರಿದ್ದು. ಅತೀ ಹೆಚ್ಚು ಸರ್ಕಾರಿ ಅಧಿಕಾರಿಗಳು ಆತ್ಮಹತ್ಯೆ ಮಾಡಿಕೊಂಡಿದ್ದು. ವಾಲ್ಮೀಕಿ ನಿಗಮ, ಭೋವಿ ನಿಗಮ, ಅಂಬೇಡ್ಕರ್ ನಿಗಮದ ಹಣ, SCP/TSP ಅನುದಾನ ಸೇರಿದಂತೆ ದಲಿತರ ಅಭಿವೃದ್ಧಿಗೆ ಮೀಸಲಿಟ್ಟ ಸಾವಿರಾರು ಕೋಟಿ ಲೂಟಿ.

ಬೆಲೆ ಏರಿಕೆ ಮಾಡಿ ಜನಸಾಮಾನ್ಯರ ಬದುಕು ನರಕ ಮಾಡಿದ್ದು. ರಸ್ತೆ ಗುಂಡಿಯನ್ನು ಮುಚ್ಚದೆ ಅನೇಕ ಅಮಾಯಕರನ್ನು ಬಲಿ ಪಡೆದಿದ್ದು. ಜಾತಿ ಜಾತಿಗಳ ಮಧ್ಯೆ ದ್ವೇಷದ ಬೆಂಕಿ ಹಚ್ಚಿದ ಜಾತಿವಾದಿ. ಸಿಎಂ ಆಗಿ ಅತೀ ಹೆಚ್ಚು ಸಾಲ ಮಾಡಿದ ಸಾಲಗಾರ ಸಿದ್ದರಾಮಯ್ಯನವರ ಟ್ರ್ಯಾಕ್ ರೆಕಾರ್ಡ್ ಇನ್ನೂ ಇದೆ ಅಂತ ಜೆಡಿಎಸ್‌ ಆರೋಪ ಪಟ್ಟಿ ಬಿಡುಗಡೆ ಮಾಡಿದೆ. ಇದನ್ನೂ ಓದಿ: ಧರ್ಮಸ್ಥಳದಲ್ಲಿ ಮಹಿಳೆಯರ ನಾಪತ್ತೆ, ಅನಾಥ ಶವಗಳ ಪತ್ತೆ ಕೇಸ್‌ – ಹೊಸ ತನಿಖೆ ಕೋರಿ ಕುಸುಮಾವತಿ ಅರ್ಜಿ

Share This Article