ಡ್ರೋನ್ ಪ್ರತಾಪ್ ವಿರುದ್ಧ ದೂರು ನೀಡಲು ಜೆಡಿಎಸ್ ಸಿದ್ಧತೆ

Public TV
1 Min Read

ಜೆಡಿಎಸ್ (JDS) ನಿಂದ ಜೆಡ್ಪಿ ಟಿಕೆಟ್ ಕೊಡಿಸೋದಾಗಿ ಹಣ ಪಡೆದು ವಂಚನೆ ಆರೋಪ ಎದುರಿಸುತ್ತಿರೋ ಡ್ರೋನ್ ಪ್ರತಾಪ್ (Drone Pratap) ವಿರುದ್ಧ ದೂರು ನೀಡಲು ಜೆಡಿಎಸ್ ಮುಂದಾಗಿದೆ. 2 ಲಕ್ಷ ಹಣ ಪಡೆದು ಜಿಲ್ಲಾ ಪಂಚಾಯಿತಿ ಚುನಾವಣೆಗೆ ಜೆಡಿಎಸ್ ಟಿಕೆಟ್ ಕೊಡಿಸೋದಾಗಿ ವಂಚನೆ ಮಾಡಿರೋ ಬಗ್ಗೆ ಚಂದನ್ ಎಂಬುವರಿಂದ ಕಮೀಷನರ್ ಗೆ ದೂರು (Complainant) ನೀಡಲಾಗಿತ್ತು.

ದೂರಿನ ಜೊತೆಗೆ ಚಂದನ್ ಗೆ ಡ್ರೋನ್ ಪ್ರತಾಪ್  ಟಿಕೆಟ್ ಕೊಡಿಸುವ ಬಗ್ಗೆ ಮಾತನಾಡಿರೋ ಆಡಿಯೋ ಬಿಡುಗಡೆ ಮಾಡಿದ್ದಾರೆ.  ಆಡಿಯೋದಲ್ಲಿ  ಮಾಜಿ ಮುಖ್ಯಮಂತ್ರಿ ಕುಮಾರ ಸ್ವಾಮಿ (H.D. Kumaraswamy) ಹಾಗೂ ಡಿಕೆಶಿ, ಅನ್ನದಾನಿಯ ಹೆಸರು ಪ್ರಸ್ತಾಪ ಮಾಡಿ ಡ್ರೋನ್ ಮಾತನಾಡಿದ್ದಾರೆ ಹಾಗಾಗಿ ಹೆಚ್ ಡಿಕೆ ಹೆಸರು ಹೇಳಿಕೊಂಡು ವಂಚನೆ ಮಾಡಿರೋ ಆರೋಪದ ಮೇಲೆ ಡ್ರೋನ್ ಪ್ರತಾಪ್ ವಿರುದ್ಧ ದೂರು ಕೊಡಲು ಜೆಡಿಎಸ್ ಮುಂದಾಗಿದೆ.

ಈ ಹಿಂದೆಯು ಡ್ರೋನ್ ಪ್ರತಾಪ್ (Drone Pratap) ಬಿಗ್ ಬಾಸ್ ಮನೆಯಲ್ಲಿ ಇದ್ದಾಗ ಹಲವಾರು ರೀತಿಯಲ್ಲಿ ಅವರ ಮೇಲೆ ಆರೋಪ ಮಾಡಲಾಗಿತ್ತು. ಡಾ.ಪ್ರಯಾಗ್ ಮಾನನಷ್ಟ ದಾವೆ ಹೂಡಿದ್ದರೆ, ಸಾರಂಗ ಎನ್ನುವವರು ಹಣಕಾಸಿನ ವಿಷಯದಲ್ಲಿ ತಮಗೆ ಮೋಸವಾಗಿದೆ ಎಂದು ಆರೋಪ (Allegation) ಮಾಡಿದ್ದರು. ಈಗ ಎಲ್ಲದಕ್ಕೂ ಪ್ರತಾಪ್ ಉತ್ತರ ನೀಡಿದ್ದಾರೆ.

 

ಮಾಧ್ಯಮಗಳ ಜೊತೆ ಮಾತನಾಡಿರುವ ಪ್ರತಾಪ್, ಕೆಲವು ವಿಷಯಗಳ ಬಗ್ಗೆ ಮಾತನಾಡಬಾರದು. ಸಕಾರಾತ್ಮಕ ವಿಷಯಗಳ ಬಗ್ಗೆ ಮಾತನಾಡೋಣ. ಸಾರಂಗ ಅವರ ಆರೋಪದ ಬಗ್ಗೆ ಶೀಘ್ರದಲ್ಲೇ ನಾವು ಭೇಟಿ ಮಾಡಿ ಸಮಸ್ಯೆ ಬಗೆಹರಿಸಿಕೊಳ್ಳುತ್ತೇವೆ ಎಂದಿದ್ದಾರೆ ಪ್ರಾತಪ್.

Share This Article