10 ಸಾವಿರ ಕೋಟಿ ಮೀಸಲು – ಮುಸ್ಲಿಂ ಮುಖಂಡರನ್ನು ಸೆಳೆಯಲು ಕಾಂಗ್ರೆಸ್‌ನಿಂದ ಭರಪೂರ ಅನುದಾನದ ಭರವಸೆ

By
1 Min Read

ಬೆಂಗಳೂರು: ಲೋಕಸಭೆ ಚುನಾವಣೆ (Lok Sabah Election) ಹತ್ತಿರವಾಗ್ತಿದ್ದಂತೆ ಕಾಂಗ್ರೆಸ್‌ನಲ್ಲಿ (Congress) ಆಪರೇಷನ್ ಹಸ್ತ ಮತ್ತಷ್ಟು ವೇಗ ಪಡೆದಿದೆ. ಲಿಂಗಾಯತ, ಒಕ್ಕಲಿಗ ಸಮುದಾಯದ ಬಳಿಕ ಈಗ ಅಲ್ಪಸಂಖ್ಯಾತ ಸಮುದಾಯದ (Muslim Community) ಮೇಲೆ ಕಾಂಗ್ರೆಸ್ ಕಣ್ಣು ಬಿದ್ದಿದೆ.

ಈಗಾಗಲೇ ಬಿಜೆಪಿ-ಜೆಡಿಎಸ್ (BJP-JDS) ದೋಸ್ತಿಯಿಂದ ಜೆಡಿಎಸ್‌ನಲ್ಲಿ ಅಲ್ಪಸಂಖ್ಯಾತ ಮುಖಂಡರು ಅಸಮಾಧಾನಗೊಂಡಿದ್ದು, ಜೆಡಿಎಸ್ ಮನೆಯ ಬಂಡಾಯದ ಲಾಭ ಪಡೆಯಲು ಕಾಂಗ್ರೆಸ್ ಪ್ಲ್ಯಾನ್‌ ಮಾಡಿಕೊಂಡಿದೆ. ಇದನ್ನೂ ಓದಿ: ಶಾಂತಿ, ಸೌಹಾರ್ದತೆಗೆ ಬ್ಯಾರಿ ಸಮುದಾಯದ ಕೊಡುಗೆ ಅಪಾರ: ಡಿಸಿಎಂ ‌ಡಿ.ಕೆ.ಶಿವಕುಮಾರ್

ಜೆಡಿಎಸ್ ಮುಸ್ಲಿಂ ಮುಖಂಡರಿಗೆ ಕಾಂಗ್ರೆಸ್‌ನಿಂದ ಮುಕ್ತ ಆಹ್ವಾನ ನೀಡಲಾಗುತ್ತಿದ್ದು, ಖುದ್ದು ಅಖಾಡಕ್ಕೆ ಸಿಎಂ ಸಿದ್ದರಾಮಯ್ಯ (CM Siddaramaiah), ಡಿಸಿಎಂ ಡಿಕೆ ಶಿವಕುಮಾರ್ (DK Shivakumar) ಅವರೇ ಇಳಿದಂತೆ ಕಾಣುತ್ತಿದೆ. ಬೆಂಗಳೂರಿನ ಹೆಚ್‌ಬಿಆರ್‌ ಲೇಔಟ್‌ನಲ್ಲಿ ನಡೆದ ಬ್ಯಾರಿಸ್ ಸೌಹಾರ್ದ ಕಟ್ಟಡ ಉದ್ಘಾಟನಾ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್‌ ಭಾಗಿಯಾಗಿ ಭರಪೂರ ಅನುದಾನದ ಭರವಸೆ ನೀಡಿದ್ದಾರೆ.

ಸಿದ್ದರಾಮಯ್ಯ ಮಾತನಾಡಿ ನಾನು ಸಿಎಂ ಆಗುವ ಮೊದಲು ಮುಸ್ಲಿಂ ಸಮುದಾಯದ ಅಭಿವೃದ್ಧಿಗೆ 400 ಕೋಟಿ ರೂ. ಬೇಡಿಕೆ ಇತ್ತು. ನಾನು ಬಂದ ನಂತರ ಅದನ್ನು 3 ಸಾವಿರ ಕೋಟಿ ರೂ.ಗೆ ಏರಿಸಿದೆ. ಆಗ ಯಾರೂ ನನ್ನನ್ನು ಕೇಳಿರಲಿಲ್ಲ. ಈಗಲೂ ಕೂಡ ಅಷ್ಟೇ ಅನುದಾನ ಹೆಚ್ಚು ಮಾಡುತ್ತೇನೆ. ಮುಂದೆ ನನ್ನ ಅವಧಿ ಮುಗಿಯುವಷ್ಟರಲ್ಲಿ 10 ಸಾವಿರ ಕೋಟಿ ರೂ.ಗೆ ಏರಿಸುತ್ತೇನೆ. ಇದು ನನ್ನ ಕೆಲಸ. ರಾಜ್ಯದ ಸಂಪತ್ತು ಎಲ್ಲರಿಗೂ ಸಿಗಬೇಕು ಎಂದು ಭರವಸೆ ನೀಡಿದ್ದಾರೆ.

ಸಭೆಯಲ್ಲೇ ಬಿಎಂ ಫಾರೂಕ್‌ಗೆ (BM Farooq) ಡಿಕೆಶಿ ಈಗ ಸೂಕ್ತ ಕಾಲ, ಕಾಂಗ್ರೆಸ್ ಸೇರ್ಪಡೆಯಾಗಿ ಎಂದು ಬಹಿರಂಗ ಆಹ್ವಾನ ನೀಡಿದ್ದಾರೆ. ಈ ಮೂಲಕ ಕಾಂಗ್ರೆಸ್‌ ನಾಯಕರು ಬಹಿರಂಗವಾಗಿಯೇ ಜೆಡಿಎಸ್‌ ನಾಯಕರಿಗೆ ಗಾಳ ಹಾಕುತ್ತಿದ್ದಾರೆ. ಶ್ರೀಘ್ರವೇ ಹಲವು ಜೆಡಿಎಸ್‌ ಅಲ್ಪಸಂಖ್ಯಾತ ನಾಯಕರು ಕಾಂಗ್ರೆಸ್‌ ಸೇರ್ಪಡೆಯಾಗುವ ಸಾಧ್ಯತೆಯಿದೆ.

Web Stories

Share This Article
ಮಳೆಗಾಲದಲ್ಲಿ ಪಡ್ಡೆಗಳ ಮೈಚಳಿ ಬಿಡಿಸಿದ ತಮನ್ನಾ ಹಾಟ್‌ ಲುಕ್‌ ಯೋಗ ದಿನದಂದು ನಟಿ ಪ್ರಣಿತಾ ಯೋಗ… ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್