ಬೆಂಗಳೂರು: ಜಯನಗರದ ಕನ್ನಡ ಮನಸ್ಸುಗಳ ವೇದಿಕೆಯಿಂದ ಇಂದು ವಿಭಿನ್ನವಾಗಿ ಕನ್ನಡ ರಾಜ್ಯೋತ್ಸವ ಆಚರಣೆ ನಡೆಯಿತು.
ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಉದ್ದದ ಕನ್ನಡ ಬಾವುಟ ಪಥ ಸಂಚಲನ ಮಾಡಿದ್ರು. ಸುಮಾರು 2040 ಮೀಟರ್ ಉದ್ದದ ಕನ್ನಡ ಬಾವುಟವನ್ನು ತಯಾರಿಸಿ ಜಯನಗರದ ಸಂಗಮ ಸರ್ಕಲ್ ಬಳಿಯಿಂದ ಪಥ ಸಂಚಲನ ಪ್ರಾರಂಭ ಮಾಡಿದ್ರು.
ಕರ್ನಾಟಕ ಹಾಗೂ ದೇಶದ ಇತಿಹಾಸದಲ್ಲಿ ಪ್ರಪ್ರಥಮ ಬಾರಿಗೆ ಉದ್ದದ ಕನ್ನಡ ಬಾವುಟ ಪಥಸಂಚಲನ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಬೃಹತ್ ಆಕಾರದ ಬಾವುಟ ಲಿಮ್ಕಾ ಬುಕ್ ಆಫ್ ರೆಕಾರ್ಡ್‍ಗೆ ಸೇರಿದೆ.
ಇಷ್ಟೇ ಅಲ್ಲದೆ ಪ್ರಥಮ ಬಾರಿಗೆ ಸಂಚಾರಿ ಕವಿಗೋಷ್ಠಿಯನ್ನು ಕೂಡ ನಡೆಸಲಾಯಿತು. ಈ ಕಾರ್ಯಕ್ರಮದಲ್ಲಿ ಕನ್ನಡದ ಹಿರಿಯ ಸಾಹಿತಿ ಚಂಪಾ, ಶಾಲಾಮಕ್ಕಳು ಸೇರಿದಂತೆ ನೂರಾರು ಕನ್ನಡಿಗರು ಹಾಗೂ ಶಾಸಕ ಸೋಮಶೇಖರ್ ಸೇರಿದಂತೆ ಹಲವರು ಭಾಗಿಯಾಗಿದ್ದಾರೆ.