ರಾಕೆಟ್ ವೇಗದಲ್ಲಿ 250 ಕೋಟಿ ರೂ ಕೊಳ್ಳೆ ಹೊಡೆದ ಜವಾನ್

Public TV
2 Min Read

ಶಾರುಖ್ ಖಾನ್ ನಟನೆಯ ಜವಾನ್ ಸಿನಿಮಾ ಬಾಲಿವುಡ್ ನಲ್ಲಿ ಮತ್ತೊಂದು ದಾಖಲೆ ಮಾಡಿದೆ. ಅತೀ ವೇಗದಲ್ಲಿ 250 ಕೋಟಿ ರೂಪಾಯಿ ಗಳಿಸಿದ ಸಿನಿಮಾಗಳ ಪಟ್ಟಿಗೆ ದಾಖಲಾಗಿದೆ. ಇತ್ತೀಚಿನ ದಿನಗಳಲ್ಲಿ ಈ ವೇಗದಲ್ಲಿ ಬಾಲಿವುಡ್ ನ ಯಾವ ಸಿನಿಮಾಗಳು ಕೂಡ ಇಂಥದ್ದೊಂದು ದಾಖಲೆ ಮಾಡಿರಲಿಲ್ಲ ಎನ್ನುವುದು ವಿಶೇಷ. ಇದು ವಿಶ್ವದಾದ್ಯಂತ ಆಗಿರುವ ಕಲೆಕ್ಷನ್ ಆಗಿದೆ.

ಇದೇ ಸೆಪ್ಟೆಂಬರ್ 7ರಂದು ‘ಜವಾನ್’ (Jawaan) ಸಿನಿಮಾ ವಿಶ್ವದಾದ್ಯಂತ ರಿಲೀಸ್ ಆಗಿದೆ. ಈ ಸಿನಿಮಾ ರಿಲೀಸ್ ಆಗಿ ಎರಡೇ ದಿನಕ್ಕೆ ಬಾಕ್ಸ್ ಆಫೀಸ್ (Box Office) ನಲ್ಲಿ ಗೆಲುವು ಸಾಧಿಸುವ ಮೂಲಕ ನೂರು ಕೋಟಿ ರೂಪಾಯಿ ಕ್ಲಬ್ ಕೂಡ ಸೇರಿತ್ತು. ಅತೀ ಹೆಚ್ಚು ವೇಗದಲ್ಲಿ ನೂರು ಕೋಟಿ ಕ್ಲಬ್ ಸೇರಿದ ಸಿನಿಮಾಗಳ ಯಾದಿಯಲ್ಲೂ ಕಾಣಿಸಿಕೊಳ್ಳುವ ಮೂಲಕ ದಾಖಲೆ ನಿರ್ಮಿಸಿತ್ತು.

ಜವಾನ್ ಸಿನಿಮಾ ಸೂಪರ್ ಹಿಟ್ ಆಗುತ್ತದೆ ಎಂದು ಅನೇಕರು ಭವಿಷ್ಯ ನುಡಿದಿದ್ದರು. ಆ ನುಡಿ ನಿಜವಾಗಿದೆ. ಮೊದಲ ದಿನದ ಕಲೆಕ್ಷನ್ 74.5 ಕೋಟಿ ರೂಪಾಯಿ ಗಳಿಸಿದರೆ, ಎರಡನೇ ದಿನದ ಗಳಿಕೆ 53 ಕೋಟಿ ಎಂದು ಅಂದಾಜಿಸಲಾಗಿದೆ. ಎರಡೇ ದಿನಕ್ಕೆ ಜವಾನ್ ಒಟ್ಟು ಅಂದಾಜು 127 ಕೋಟಿ ರೂಪಾಯಿ ಗಳಿಕೆ ಮಾಡಿದೆ ಎಂದು ಟ್ರೇಡ್ ಎಕ್ಸ್ ಪರ್ಟ್ ಮಾಹಿತಿ ಹೊರಹಾಕಿದ್ದಾರೆ. ವೀಕೆಂಡ್ ಇರುವುದರಿಂದ ಮತ್ತಷ್ಟು ಹಣ ಹರಿದು ಬರಲಿದೆ ಎಂದು ಹೇಳಲಾಗುತ್ತಿದೆ. ಇದೀಗ ನಾಲ್ಕೇ ದಿನಕ್ಕೆ 250 ಕೋಟಿ ರೂಪಾಯಿ ಹಣ ಬಂದಿದೆ.

ಸಿನಿಮಾ ಬಿಡುಗಡೆಗೂ ಮುನ್ನ ವೈಷ್ಣೋದೇವಿ ದೇವಾಲಯಕ್ಕೆ ಶಾರುಖ್ & ಟೀಂ ಭೇಟಿ ನೀಡಿದ್ದರು. ನಯನತಾರಾ (Nayanatara) ಜೊತೆ ತಿರುಪತಿ(Tirupati) ತಿಮ್ಮಪ್ಪನ ದರ್ಶನವನ್ನ ನಟ ಪಡೆದಿದ್ದರು. ಈ ವೇಳೆ ಶಾರುಖ್ ಪುತ್ರಿ ಸುಹಾನಾ ಖಾನ್ ಕೂಡ ಭಾಗಿಯಾಗಿದ್ದರು. ತಿಮ್ಮಪ್ಪನ ದರ್ಶನದ ಬಳಿಕ ವಿಶೇಷ ಪೂಜೆ ಸಲ್ಲಿಸಿದ್ದರು. ಹೀಗೆ ಸಿನಿಮಾ ಗೆಲುವಿಗಾಗಿ ಪ್ರಾರ್ಥನೆಗೆ ಟೀಮ್ ಮೊರೆ ಹೋಗಿತ್ತು. ಅವರ ಪ್ರಾರ್ಥನೆ ಫಲಿಸಿದೆ.

 

ಶಾರುಖ್ ಖಾನ್‌ಗೆ ನಾಯಕಿಯಾಗಿ ನಯನತಾರಾ ನಟಿಸಿದ್ದಾರೆ. ಹೀರೋ ಮುಂದೆ ವಿಜಯ್ ಸೇತುಪತಿ (Vijay Sethupathi) ಅಬ್ಬರಿಸಿದ್ದಾರೆ. ಈಗಾಗಲೇ ಚಿತ್ರದ ಟ್ರೈಲರ್, ಸಾಂಗ್ಸ್ ಎಲ್ಲವೂ ಕಮಾಲ್ ಮಾಡಿದೆ. ಬಹುಭಾಷೆಗಳಲ್ಲಿ ರಿಲೀಸ್ ಆಗಿರುವ ಸಿನಿಮಾಗೂ ಕೂಡ ಸಖತ್ ರೆಸ್ಪಾನ್ಸ್ ಸಿಗುತ್ತಿದೆ.

Web Stories

Share This Article
ಯಮ್ಮೊ ಯಮ್ಮೊ.. ನೋಡ್ದೆ ನೋಡ್ದೆ.. Milky Beauty Tamanna Bhatia Hot Photoshoot ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್