ಆಸ್ಪತ್ರೆಯಿಂದ ಇಂದು ದೀಪಿಕಾ ಪಡುಕೋಣೆ ಡಿಸ್ಚಾರ್ಜ್- ಮಗಳನ್ನು ಸ್ವಾಗತಿಸಲು ರಣ್‌ವೀರ್ ಭರ್ಜರಿ ಸಿದ್ಧತೆ

Public TV
1 Min Read

ಬಾಲಿವುಡ್ ನಟಿ ದೀಪಿಕಾ ಪಡುಕೋಣೆ (Deepika Padukone) ಇಂದು (ಸೆ.13) ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಲಿದ್ದಾರೆ. ಮುದ್ದಾದ ಮಗಳು ಮತ್ತು ಪತ್ನಿ ದೀಪಿಕಾರನ್ನು ಭರ್ಜರಿಯಾಗಿ ಸ್ವಾಗತಿಸಲು ರಣ್‌ವೀರ್ ಸಿಂಗ್ (Ranveer Singh) ಸಿದ್ಧತೆ ಮಾಡಿಕೊಂಡಿದ್ದಾರೆ. ಇದನ್ನೂ ಓದಿ:ಅರ್ಜುನ ಅವಧೂತ ಗುರೂಜಿಯನ್ನು ಭೇಟಿಯಾದ ಧ್ರುವ ಸರ್ಜಾ

ಸೆ.8ರಂದು ನಟಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ರಣ್‌ವೀರ್ ಕುಟುಂಬದಲ್ಲಿ ಸಂಭ್ರಮ ಮನೆ ಮಾಡಿದೆ. ರಣ್‌ವೀರ್ ಆಸೆಯಂತೆ ಮನೆಗೆ ಮಹಾಲಕ್ಷ್ಮಿಯ ಆಗಮನವಾಗಿದೆ. ಇದೀಗ ಚೇತರಿಸಿಕೊಂಡಿರುವ ದೀಪಿಕಾ ಮತ್ತು ಪುಟ್ಟ ಮಗಳನ್ನು ಸ್ವಾಗತಿಸಲು ರಣ್‌ವೀರ್ ತಯಾರಿ ನಡೆಸಿದ್ದಾರೆ.

ನಿನ್ನೆ ರಾತ್ರಿ (ಸೆ.12) ದೀಪಿಕಾ ಮತ್ತು ಮಗುವನ್ನು ನೋಡಲು ಶಾರುಖ್ ಖಾನ್ ಆಸ್ಪತ್ರೆಗೆ ಭೇಟಿ ನೀಡಿದ್ದರು. ಇಬ್ಬರ ಆರೋಗ್ಯದ ಬಗ್ಗೆ ವಿಚಾರಿಸಿ ನಟ ತೆರಳಿದರು.

Share This Article