ಮತ್ತೆ ಶಾರುಖ್ ಖಾನ್ ಜೊತೆ ಕೈಜೋಡಿಸಿದ ಮ್ಯೂಸಿಕ್ ಡೈರೆಕ್ಟರ್ ಅನಿರುದ್ಧ ರವಿಚಂದರ್

Public TV
1 Min Read

ಬಾಲಿವುಡ್ ನಟ ಶಾರುಖ್ ಖಾನ್ (Sharukh Khan) ‘ಪಠಾಣ್’ ಮತ್ತು ‘ಜವಾನ್’ ಸಿನಿಮಾದ ಸಕ್ಸಸ್ ನಂತರ ಇದೀಗ ‘ಕಿಂಗ್’ (King Film) ಚಿತ್ರದ ಸಿನಿಮಾ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ. ಇದೀಗ ಕಿಂಗ್ ಸಿನಿಮಾಗಾಗಿ ಶಾರುಖ್ ಖಾನ್ ಜೊತೆ ‘ಜವಾನ್’ ಖ್ಯಾತಿಯ ಅನಿರುದ್ಧ ರವಿಚಂದರ್ (Anirudh Ravichander) ಕೈಜೋಡಿಸಿದ್ದಾರೆ.

ಸದ್ಯ ಸಂಗೀತ ಕ್ಷೇತ್ರದಲ್ಲಿ ಗಾಯನ ಮತ್ತು ಸಂಗೀತ ನಿರ್ದೇಶನದ ಮೂಲಕ ಮೋಡಿ ಮಾಡಿರುವ ಅನಿರುದ್ಧ ರವಿಚಂದರ್‌ಗೆ ಬೇಡಿಕೆ ಹೆಚ್ಚಾಗಿದೆ. ಅದರಲ್ಲೂ ‘ಜವಾನ್’ ಮತ್ತು ಜೈಲರ್ ಸಿನಿಮಾದ ಹಾಡುಗಳು ಸೂಪರ್ ಹಿಟ್ ಆದ್ಮೇಲೆ ಅನಿರುದ್ಧ ಸಂಭಾವನೆ ಕೂಡ ಹೆಚ್ಚಾಗಿದೆ. ಇದನ್ನೂ ಓದಿ:ಕೈಗೆ ಬ್ಯಾಂಡೇಜ್ ಸುತ್ತಿಕೊಂಡೇ ಕಾನ್ಸ್ ರೆಡ್ ಕಾರ್ಪೆಟ್ ಮೇಲೆ ಹೆಜ್ಜೆ ಹಾಕಿದ ಐಶ್ವರ್ಯಾ ರೈ

ಶಾರುಖ್ ಖಾನ್ ಕೆರಿಯರ್‌ನಲ್ಲಿ ‘ಜವಾನ್’ (Jawan)  ಸಿನಿಮಾ ಸೂಪರ್ ಸಕ್ಸಸ್ ತಂದುಕೊಟ್ಟಿತ್ತು. ಆ ಯಶಸ್ಸಿನಲ್ಲಿ ಅನಿರುದ್ಧ ರವಿಚಂದರ್ ಪ್ರತಿಭೆ ಕೂಡ ಕ್ಲಿಕ್ ಆಗಿತ್ತು. ಜವಾನ್ ಚಿತ್ರಕ್ಕೆ ಕೊಟ್ಟಿರುವ ಹಿಟ್ ಹಾಡುಗಳಿಂದ ಸಿನಿಮಾ ಸಕ್ಸಸ್ ಆಗಲು ಕಾರಣವಾಗಿತ್ತು. ಹಾಗಾಗಿ ಶಾರುಖ್ ಮುಂದಿನ ಸಿನಿಮಾಗೂ ಅನಿರುದ್ಧ ರವಿಚಂದರ್ ಕೆಲಸ ಮಾಡಲು ಆಫರ್ ಸಿಕ್ಕಿದೆ.

ಪುತ್ರಿ ಸುಹಾನಾ ಖಾನ್‌ರನ್ನು ಲಾಂಚ್ ಮಾಡುತ್ತಿರುವ ‘ಕಿಂಗ್’ ಸಿನಿಮಾಗೂ ಅನಿರುದ್ಧ ರವಿಚಂದರ್ ಮ್ಯೂಸಿಕ್ ಕಂಪೋಸ್ ಮಾಡಲಿದ್ದಾರೆ. ಶಾರುಖ್ ಖಾನ್ ನಟನೆಯ ಜೊತೆ ನಿರ್ಮಾಣ ಕೂಡ ಮಾಡುತ್ತಿದ್ದಾರೆ. ಸದ್ಯ ಸಿನಿಮಾದ ಅಪ್‌ಡೇಟ್ ಕೇಳಿ ಫ್ಯಾನ್ಸ್ ಥ್ರಿಲ್ ಆಗಿದ್ದಾರೆ.

Share This Article