ದೆಹಲಿಯಲ್ಲಿ ಸಿಕ್ಕಿಬಿದ್ದ ಹಿಜ್ಬುಲ್ ಮುಜಾಹಿದ್ದೀನ್‌ ಭಯೋತ್ಪಾದಕ

Public TV
1 Min Read

ಜಮ್ಮು- ಕಾಶ್ಮೀರ: ಇಲ್ಲಿನ ಹಿಜ್ಬುಲ್ ಮುಜಾಹಿದ್ದೀನ್‌ ಭಯೋತ್ಪಾದಕ Hizbul Terrorist) ಜಾವಿದ್ ಅಹ್ಮದ್ ಮಟ್ಟೂ (Javid Ahmed Mattoo) ಗುರುವಾರ ದೆಹಲಿಯಲ್ಲಿ ಸಿಕ್ಕಿಬಿದ್ದಿದ್ದಾನೆ.

ಜಮ್ಮು ಮತ್ತು ಕಾಶ್ಮೀರದಲ್ಲಿ (Jammu-Kashmir) ಹಲವಾರು ಉಗ್ರ ಚಟುವಟಿಕೆಗಳಲ್ಲಿ ಭಾಗಿಯಾಗಿರುವ ಈತನ ಪತ್ತೆಗೆ ಬಲೆ ಬೀಸಲಾಗಿತ್ತು. ಇದೀಗ ದೆಹಲಿ ಪೊಲೀಸ್‌ ವಿಶೇಷ ದಳ ಇಂದು ಹಿಜ್ಬುಲ್ ಮುಜಾಹಿದ್ದೀನ್‌ ನನ್ನು ಬಂಧಿಸಿದ್ದು, ಈತನ ಬಳಿಯಿದ್ದ ಪಿಸ್ತೂಲ್, ಮ್ಯಾಗಜೀನ್ ಮತ್ತು ಕದ್ದ ಕಾರನ್ನು ವಶಪಡಿಸಿಕೊಂಡಿದ್ದಾರೆ.

ಜಾವೇದ್ ಅಹ್ಮದ್ ಮಟ್ಟೂ ಬಂಧಿಸಿದರೆ 5 ಲಕ್ಷ ರೂ ಬಹುಮಾನ ಘೋಷಣೆ ಮಾಡಲಾಗಿತ್ತು. ಮಟ್ಟೂ ಸೋಪೋರ್ ನಿವಾಸಿಯಾಗಿದ್ದು, ಹಲವು ಬಾರಿ ಪಾಕಿಸ್ತಾನಕ್ಕೆ ಹೋಗಿದ್ದಾನೆ. ಇದನ್ನೂ ಓದಿ: ಅರ್ಜುನ ಪ್ರಶಸ್ತಿ ಪುರಸ್ಕೃತ ಪೊಲೀಸ್‌ ಅಧಿಕಾರಿ ಕೊಲೆ – 48 ಗಂಟೆಗಳಲ್ಲಿ ಪ್ರಕರಣ ಭೇದಿಸಿದ ಪಂಜಾಬ್‌ ಪೊಲೀಸ್‌

ಕಳೆದ ವರ್ಷ ಸ್ವಾತಂತ್ರ್ಯ ದಿನದ ಮೊದಲು ಸೋಪೋರ್‌ನಲ್ಲಿರುವ ತನ್ನ ಮನೆಯಲ್ಲಿ ಮಟ್ಟೂ ಸಹೋದರ ತ್ರಿವರ್ಣ ಧ್ವಜವನ್ನು ಹಾರಿಸುತ್ತಿರುವುದನ್ನು ತೋರಿಸುವ ವೀಡಿಯೊ ವೈರಲ್ ಆಗಿತ್ತು.

Share This Article