ಆಸ್ಟ್ರೇಲಿಯಾದಲ್ಲೂ ಬುಮ್ರಾ ಫಿವರ್ – ‘ಸೋ ಕ್ಯೂಟ್’ ಎಂದ ಜಸ್ಪ್ರೀತ್

Public TV
2 Min Read

ಸಿಡ್ನಿ: ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಸರಣಿಯಲ್ಲಿ ತಮ್ಮ ಬೌಲಿಂಗ್ ಮೂಲಕ ಮಿಂಚಿದ್ದ ಟೀಂ ಇಂಡಿಯಾ ಪ್ರಮುಖ ವೇಗಿ ಬುಮ್ರಾ ಅವರ ಬೌಲಿಂಗ್ ಶೈಲಿ ಅಲ್ಲಿನ ಮಕ್ಕಳ ಗಮನ ಸೆಳೆದಿದೆ. ಬುಮ್ರಾರಂತೆಯೇ ಬಾಲಕನೊಬ್ಬ ಬೌಲಿಂಗ್ ಮಾಡುತ್ತಿರುವ ವಿಡಿಯೋವನ್ನು ಐಸಿಸಿ ತನ್ನ ಟ್ವಿಟ್ಟರ್ ನಲ್ಲಿ ಟ್ವೀಟ್ ಮಾಡಿದೆ.

ಆಸೀಸ್ ಟೆಸ್ಟ್ ಸರಣಿಯಲ್ಲಿ ಜಂಟಿಯಾಗಿ ಹೆಚ್ಚು ವಿಕೆಟ್ ಪಡೆದ ಆಟಗಾರರಾಗಿ ಹೊಸ ಹೊಮ್ಮಿದ ಜಸ್ಪ್ರೀತ್ ಬುಮ್ರಾ 21 ವಿಕೆಟ್ ಪಡೆದು ಮಿಂಚಿದ್ದರು. ಉಳಿದಂತೆ ಆಸ್ಟ್ರೇಲಿಯಾ ನಾಥನ್ ಲಯನ್ ಅಷ್ಟೇ ವಿಕೆಟ್ ಪಡೆದಿದ್ದಾರೆ. ಆದರೆ ಬುಮ್ರಾ ಅವರ ವಿಶೇಷ ರೀತಿಯ ಬೌಲಿಂಗ್ ಶೈಲಿ ಎಲ್ಲರ ಗಮನ ಸೆಳೆದಿದ್ದು, ಬುಮ್ರಾ ಪಾದಾರ್ಪಣೆ ಪಂದ್ಯದಿಂದಲೇ ಅವರಂತೆ ಬೌಲ್ ಮಾಡಲು ಹಲವು ಮಕ್ಕಳು ಪ್ರಯತ್ನಿಸಿದ್ದನ್ನು ಕಾಣಬಹುದು. ಸದ್ಯ ಈ ಫಿವರ್ ಆಸ್ಟ್ರೇಲಿಯಾದಲ್ಲೂ ಹೆಚ್ಚಾಗಿದ್ದು, ಹಲವು ಬುಮ್ರಾ ಶೈಲಿಯನ್ನು ಅನುಕರಣೆ ಮಾಡಿ ಬೌಲಿಂಗ್ ಮಾಡಲು ಪ್ರಯತ್ನಿಸುತ್ತಿದ್ದಾರೆ.

ಈ ವಿಡಿಯೋವನ್ನು ಪೋಸ್ಟ್ ಮಾಡಿರುವ ವ್ಯಕ್ತಿ ಆಸೀಸ್ ನ ಮುಂದಿನ ಪೀಳಿಗೆಗೆ ಬುಮ್ರಾ ಪ್ರೇರಣೆಯಾಗಿದ್ದಾರೆ ಎಂದು ತಿಳಿಸಿದ್ದಾರೆ. ಈ ವಿಡಿಯೋ ಕಂಡು ಸಂತಸ ವ್ಯಕ್ತಪಡಿಸಿರುವ ಬುಮ್ರಾ, ಸೋ ಕ್ಯೂಟ್, ಆತನಿಗೆ ನನ್ನ ಶುಭಾಶಯ ತಿಳಿಸಿ ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಇತ್ತ ಐಸಿಸಿ ಕೂಡ ಟ್ವೀಟ್ ಮಾಡಿ 2034ರಲ್ಲಿ ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಸರಣಿ ಫೈರ್ ಆಗಿರಲಿದೆ ಎಂದು ಬರೆದುಕೊಂಡಿದೆ.

ಆಸೀಸ್ ಪ್ರವಾಸ ಪ್ರದರ್ಶನ ಬಳಿಕ ಬುಮ್ರಾ ಐಸಿಸಿ ಬೌಲಿಂಗ್ ಶ್ರೇಯಾಂಕ ಪಟ್ಟಿಯಲ್ಲೂ ಬಡ್ತಿಯನ್ನು ಪಡೆದಿದ್ದು, 28ನೇ ಸ್ಥಾನದಿಂದ 16ನೇ ಸ್ಥಾನಕ್ಕೆ ಜಿಗಿದಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧ 2018ರ ಜನವರಿಯಲ್ಲಿ ಪಾದಾರ್ಪಣೆ ಮಾಡಿದ್ದ ಬುಮ್ರಾ ಟೀಂ ಇಂಡಿಯಾ ಪಾದಾರ್ಪಣೆ ಮಾಡಿದ ವರ್ಷದಲ್ಲೇ ಅಧಿಕ ವಿಕೆಟ್ ಪಡೆದ ದಿಲೀಪ್ ದೋಶಿ ಅವರ ದಾಖಲೆ ಮುರಿದು ದಾಖಲೆ ನಿರ್ಮಿಸಿದ್ದರು. 25 ವರ್ಷದ ಬುಮ್ರಾಗೆ 2019 ವಿಶ್ವಕಪ್ ಸರಣಿಯ ಉದ್ದೇಶದಿಂದ ಮುಂದಿನ ಆಸೀಸ್ ವಿರುದ್ಧದ ಏಕದಿನ ಸರಣಿ ಹಾಗೂ ನ್ಯೂಜಿಲೆಂಡ್ ವಿರುದ್ಧ ಸಿಮೀತ ಓವರ್ ಗಳ ಟೂರ್ನಿಗೆ ಬಿಸಿಸಿಐ ವಿಶ್ರಾಂತಿ ನೀಡಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *