ಜನಿವಾರ ವಾರ್‌ – ಬೀದರ್‌ ಪ್ರಾಂಶುಪಾಲ, ಎಸ್‌ಡಿಎ ಕೆಲಸದಿಂದಲೇ ವಜಾ

By
1 Min Read

ಬೀದರ್‌ : ಜನಿವಾರ ಧರಿಸಿದ್ದ ವಿದ್ಯಾರ್ಥಿಗೆ ಸಿಇಟಿ ಪರೀಕ್ಷೆ ಬರೆಯಲು ಅನುಮತಿ ನೀಡದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಯಿ ಸ್ಪೂರ್ತಿ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಮತ್ತು ಎಸ್‌ಡಿಎ ಸಿಬ್ಬಂದಿಯನ್ನು ಕೆಲಸದಿಂದಲೇ ವಜಾ ಮಾಡಲಾಗಿದೆ.

ಕರ್ತವ್ಯ ಲೋಪವೆಸಗಿದ ಹಿನ್ನೆಲೆಯಲ್ಲಿ ಬೀದರ್‌ ಜಿಲ್ಲಾಧಿಕಾರಿ ಪ್ರಾಂಶುಪಾಲ ಚಂದ್ರಶೇಖರ್ ಬಿರಾದರ್‌ ಮತ್ತು ಎಸ್‌ಡಿಎ ಸತೀಶ ಪವಾರ್ ಅವರನ್ನು ಅಮಾನತು ಮಾಡುವಂತೆ ಸೂಚಿಸಿದ್ದರು. ಡಿಸಿಯಿಂದ ಆದೇಶ ಬಂದ ಬೆನ್ನಲ್ಲೇ ಕಾಲೇಜು ಆಡಳಿತ ಮಂಡಳಿ ಇಬ್ಬರನ್ನು ಕೆಲಸದಿಂದ ವಜಾ ಮಾಡಿದೆ.

ಖಾಸಗಿ ಕಾಲೇಜು ಆಗಿರುವ ಕಾರಣ ಶಾಲಾ ಆಡಳಿತ ಮಂಡಳಿಗೆ ಶಿಸ್ತು ಕ್ರಮ ಕೈಗೊಳ್ಳುವಂತೆ ಜಿಲ್ಲಾಡಳಿತ ಮತ್ತು ಶಿಕ್ಷಣ ‌ಇಲಾಖೆ ಸೂಚಿಸಿತ್ತು. ಸಾಯಿ ಸ್ಪೂರ್ತಿ ಪದವಿ ಪೂರ್ವ ಕಾಲೇಜ್‌ ಇಬ್ಬರನ್ನು ತಕ್ಷಣದಿಂದಲೇ ವಜಾ ಮಾಡಿದೆ.

Share This Article