Jani-Joe Movie Contest – ಇದು ಜಾನಿ ಫಿಲ್ಮ್ ಆಫರ್

Public TV
2 Min Read

ಬೆಂಗಳೂರು: ನಾಯಿ ಪ್ರೇಮಿಗಳಿಗೆ ಗುಡ್‍ನ್ಯೂಸ್. ನೀವು ನಿಮ್ಮ ಪೆಟ್ ನಾಯಿಯ ಜೊತೆಗೆ ಕಳೆಯುತ್ತಿರುವ ದೃಶ್ಯವನ್ನು ವಿಡಿಯೋ ಮಾಡಿ ಸ್ಪರ್ಧೆಯಲ್ಲಿ ಭಾಗವಹಿಸಿ ಬಹುಮಾನವನ್ನು ಗೆಲ್ಲಬಹುದು.

ಆಗಸ್ಟ್ 11ರಂದು #Jani ಮೂವಿ ರಿಲೀಸ್ ಆಗಲಿದ್ದು, ಈ ಚಿತ್ರದಲ್ಲಿ ಜೋ ಹೆಸರಿನ ನಾಯಿ ಪ್ರಧಾನ ಪಾತ್ರದಲ್ಲಿ ಮಿಂಚಲಿದೆ. ಚಿತ್ರದ ಕ್ಲೈಮಾಕ್ಸ್ ಸಹ ಈ ನಾಯಿ ಮೇಲೆ ಅವಲಂಬಿತವಾಗಿದೆ. ಹೀಗಾಗಿ ನಾಯಿ ಸಾಕೋ ಮಂದಿಗೆ ಚಿತ್ರತಂಡ ವಿಶೇಷ ಸ್ಪರ್ಧೆಯನ್ನು ಆಯೋಜಿಸಿದೆ.

ನಟ ವಿಜಯ ರಾಘವೇಂದ್ರ ಜೊತೆ ಜನನಿ ಮತ್ತು ಮಿಲನ ನಾಗರಾಜ್ ನಾಯಕಿಯರಾಗಿ ಕಾಣಿಸಿಕೊಂಡಿರುವ ಈ ಚಿತ್ರದಲ್ಲಿ ಲವ್, ಕಾಮಿಡಿ ಮಾಸ್ ಎಂಟರ್‍ಟೈನ್‍ಮೆಂಟ್ ಬೇಸ್ ಇರುವ ಕಥೆಯಿದೆ. ಕನ್ನಡ ಚಿತ್ರರಂಗದ ಹೆಸರಾಂತ ಛಾಯಗ್ರಾಹಕ ಪಿ.ಕೆ.ಎಚ್.ದಾಸ್ ಅವರು ಮೊದಲ ಬಾರಿಗೆ ಈ ಚಿತ್ರವನ್ನು ನಿರ್ದೇಶನ ಮಾಡಿದ್ದು, ಜೆಸ್ಸಿ ಗಿಫ್ಟ್ ಸಂಗೀತ ಸಂಯೋಜನೆಯ 25ನೇ ಚಿತ್ರವಾಗಿದ್ದು ಹಾಡುಗಳು ಉತ್ತಮವಾಗಿ ಮೂಡಿಬಂದಿವೆ. ಜಾನಿ ಚಿತ್ರವನ್ನು ಐಶ್ವರ್ಯ ಫಿಲ್ಮ್ ಪ್ರೊಡಕ್ಷನ್ ಬ್ಯಾನರ್ ಅಡಿಯಲ್ಲಿ ಜೆ ಜಾನಕಿರಾಮ್ ಮತ್ತು ಎಂ.ಅರವಿಂದ್ ಅವರು ನಿರ್ಮಾಣ ಮಾಡಿದ್ದಾರೆ. ಜೆಸ್ಸಿ ಗಿಫ್ಟ್ ಸಂಗೀತ ನಿರ್ದೇಶನ ಚಿತ್ರಕ್ಕಿದೆ. ನಿರ್ದೇಶಕ ಪ್ರಭುದೇವ ಅವರ ತಂದೆ ಮೂಗೂರು ಸುಂದರಂ ಇದೇ ಮೊದಲ ಬಾರಿಗೆ ಈ ಚಿತ್ರದಲ್ಲಿ ನಟಿಸಿರುವುದು ವಿಶೇಷ.

ನೀವು ಏನು ಮಾಡಬೇಕು: ಈ ಸ್ಪರ್ಧೆಯಲ್ಲಿ ಭಾಗವಹಿಸಲು ನೀವು ತಲೆಕೆಡಿಸಿಕೊಳ್ಳಬೇಕಾದ ಅಗತ್ಯವೇ ಇಲ್ಲ. ನೀವು ನಿಮ್ಮ ಪ್ರೀತಿಯ ನಾಯಿ ಜೊತೆ ಇರುವ 2 ನಿಮಿಷದ ಒಳಗಡೆ ಇರುವ ವಿಡಿಯೋವನ್ನು ವಾಟ್ಸಪ್ ಮಾಡಿದರೆ ಅಯ್ತು ಅಷ್ಟೇ. ನಾಯಿ ಹೇಗೆ ನಿಮ್ಮ ಮಾತುಗಳನ್ನು ಕೇಳಿ ಕೆಲಸ ಮಾಡುತ್ತದೋ ಆ ವಿಡಿಯೋ ಸೆರೆ ಹಿಡಿದು ಆಗಸ್ಟ್ 10ರ ಸಂಜೆ 5 ಗಂಟೆಯ ಒಳಗಡೆ ಕಳುಹಿಸಬೇಕು. ಕಳುಹಿಸಿದ ವಿಡಿಯೋ ಪೈಕಿ ಮೂರು ಅತ್ಯುತ್ತಮ ವಿಡಿಯೋಗಳಿಗೆ ನಗದು ಬಹುಮಾನವನ್ನು ನೀಡಲಾಗುವುದು. ಅತ್ಯುತ್ತಮ ವಿಡಿಯೋ ಕಳುಹಿಸಿದವರಿಗೆ ಮೂವಿ ನೋಡಲು ಉಚಿತ ಟಿಕೆಟ್ ನೀಡಲಾಗುವುದು ಎಂದು ಚಿತ್ರತಂಡ ಹೇಳಿದೆ.

ನಗದು ಬಹುಮಾನ ಎಷ್ಟು?
ಪ್ರಥಮ – 10 ಸಾವಿರ ರೂ., 2 ಉಚಿತ ಟಿಕೆಟ್, ವಿಶೇಷ ಗಿಫ್ಟ್
ದ್ವಿತೀಯ – 5 ಸಾವಿರ ರೂ., 2 ಉಚಿತ ಟಿಕೆಟ್, ವಿಶೇಷ ಗಿಫ್ಟ್
ತೃತೀಯ – 3 ಸಾವಿರ ರೂ., 2 ಉಚಿತ ಟಿಕೆಟ್, ವಿಶೇಷ ಗಿಫ್ಟ್

ವಿಡಿಯೋ ಕಳುಹಿಸಬೇಕಾದ ನಂಬರ್: 80503- 77768

 

Share This Article
Leave a Comment

Leave a Reply

Your email address will not be published. Required fields are marked *