ಮೊದಲ ಬಾಯ್‌ಫ್ರೆಂಡ್ ಜೊತೆಗಿನ ಬ್ರೇಕಪ್ ಬಗ್ಗೆ ಬಾಯ್ಬಿಟ್ಟ ಜಾನ್ವಿ ಕಪೂರ್

By
1 Min Read

ಬಾಲಿವುಡ್ (Bollywood) ಬ್ಯೂಟಿ ಜಾನ್ವಿ ಕಪೂರ್ (Janhvi Kapoor) ಇದೀಗ ತಮ್ಮ ಮೊದಲ ಬ್ರೇಕಪ್ (Breakup) ಬಗ್ಗೆ ಮಾತನಾಡಿದ್ದಾರೆ. ಮೊದಲ ಬಾಯ್ ಫ್ರೆಂಡ್ ಜೊತೆಗಿನ ಬ್ರೇಕಪ್ ಯಾಕೆ ಆಯಿತು ಎಂದು ಸಂದರ್ಶನವೊಂದರಲ್ಲಿ ಹೇಳಿದ್ದಾರೆ. ಇದನ್ನೂ ಓದಿ:ಶಾರುಖ್ ಖಾನ್ ಮನೆಗೆ ಹೆಚ್ಚಿನ ಭದ್ರತೆ: ಮನೆ ಮುಂದೆ ಪ್ರತಿಭಟನೆ

ಇತ್ತೀಚಿನ ಸಂದರ್ಶನವೊಂದರಲ್ಲಿ ತಮ್ಮ ವೈಯಕ್ತಿಕ ಬದುಕಿನ ಬಗ್ಗೆ ನಟಿ ಹಂಚಿಕೊಂಡಿದ್ದಾರೆ. ಕೆಲವರ್ಷಗಳ ಹಿಂದೆ ಜಾನ್ವಿ ಎಂಗೇಜ್ ಆಗಿದ್ದರು. ಇಬ್ಬರ ಪ್ರೀತಿಗೆ ಶ್ರೀದೇವಿ ದಂಪತಿ (Sridevi) ಸಮ್ಮತಿ ಸೂಚಿಸಿರಲಿಲ್ಲ. ಹಾಗಾಗಿ ಆ ಹುಡುಗನ ಜೊತೆ ಬ್ರೇಕಪ್ ಮಾಡಿಕೊಳ್ಳಬೇಕಾಯಿತು ಎಂದು ನಟಿ ಹೇಳಿದ್ದಾರೆ. ತಂದೆ- ತಾಯಿಯ ಒಪ್ಪಿಗೆ ಇಲ್ಲದೇ ಇರೋದಕ್ಕೆ ಬ್ರೇಕಪ್ ಮಾಡಿಕೊಂಡೆ ಎಂದು ನಟಿ ಬಾಯ್ಬಿಟ್ಟಿದ್ದಾರೆ. ಆದರೆ ಆ ಹುಡುಗ ಯಾರು ಎಂಬುದನ್ನ ರಿವೀಲ್ ಮಾಡಿಲ್ಲ.

ನನ್ನ ಮೊದಲ ಬಾಯ್‌ಫ್ರೆಂಡ್ ಜೊತೆ ಕದ್ದು ಮುಚ್ಚಿ ಓಡಾಡುವ ಸಂಬಂಧವಾಗಿತ್ತು. ಆ ಸಂಬಂಧ ನಂತರ ಬ್ರೇಕಪ್ ಮೂಲಕ ಅಂತ್ಯವಾಯಿತು. ಪ್ರತಿ ಸಲ ನನ್ನ ತಂದೆ-ತಾಯಿಗೆ ಸುಳ್ಳು ಹೇಳಬೇಕಿತ್ತು. ನಮ್ಮದು ಸಂಪ್ರದಾಯಸ್ಥ ಕುಟುಂಬ ಆಗಿರುವ ಕಾರಣ, ನೋ ಬಾಯ್‌ಫ್ರೆಂಡ್ ರೂಲ್ಸ್ ಇತ್ತು ಎಂದಿದ್ದಾರೆ.

ಪ್ರಸ್ತುತ ಉದ್ಯಮಿ ಶಿಖರ್‌ ಪಹಾರಿಯಾ ಜೊತೆ ಜಾನ್ವಿ ಕಪೂರ್‌ ಡೇಟ್‌ ಮಾಡ್ತಿದ್ದಾರೆ ಎಂಬ ಸುದ್ದಿ ಸದ್ದು ಮಾಡುತ್ತಿದೆ. ಈ ಬಗ್ಗೆ ನಟಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಇದು ನಿಜಾನಾ? ಅಥವಾ ಗಾಸಿಪ್‌ ಕಾದುನೋಡಬೇಕಿದೆ.

ವರುಣ್ ಧವನ್ ಜೊತೆಗಿನ ‘ಬವಾಲ್’ ಸಿನಿಮಾದಲ್ಲಿ ಜಾನ್ವಿ ಕಪೂರ್ ನಾಯಕಿಯಾಗಿ ನಟಿಸಿದ್ದರು. ಈಗ ತೆಲುಗಿನ ಹೀರೋ ಜ್ಯೂ.ಎನ್‌ಟಿಆರ್‌ಗೆ ಹೀರೋಯಿನ್ ಆಗಿ ‘ದೇವರ’ (Devara) ಚಿತ್ರದಲ್ಲಿ ನಟಿಸಿದ್ದಾರೆ.

Share This Article
ಮಳೆಗಾಲದಲ್ಲಿ ಪಡ್ಡೆಗಳ ಮೈಚಳಿ ಬಿಡಿಸಿದ ತಮನ್ನಾ ಹಾಟ್‌ ಲುಕ್‌ ಯೋಗ ದಿನದಂದು ನಟಿ ಪ್ರಣಿತಾ ಯೋಗ… ಬಿಕಿನಿ ಬಿಟ್ಟು ಸೀರೆ ಉಟ್ಟ ನಟಿ ದಿವ್ಯಾ ಭಾರತಿ!.. ಶೋಲ್ಡರ್‌ಲೆಸ್ ಡ್ರೆಸ್‌ನಲ್ಲಿ ಪಟಾಕಿ ಪೋರಿ ಮಿಂಚಿಂಗ್ ಶಾರ್ಟ್ ಡ್ರೆಸ್‌ನಲ್ಲಿ ‘ಕಾಟೇರ’ ನಟಿ ಮಿಂಚಿಂಗ್ ನವಿಲಿನಂತೆ ಕಂಗೊಳಿಸಿದ ಮಲೈಕಾ ಚೈತ್ರಾ ಲುಕ್‌ಗೆ ಫ್ಯಾನ್ಸ್‌ ಫಿದಾ ಡಿಫರೆಂಟ್ ಆಗಿ ಸೀರೆಯುಟ್ಟ ಸ್ಯಾಮ್ ಬೋಲ್ಡ್ ಅವತಾರ ತಾಳಿದ ಚೈತ್ರಾ ಆಚಾರ್ ಡೆನಿಮ್ ಡ್ರೆಸ್‌ನಲ್ಲಿ ದೀಪಿಕಾ ಫೋಟೋಶೂಟ್