ಆಸ್ಪತ್ರೆಯಿಂದ ಡಿಸ್ಚಾರ್ಜ್‌ ಆದ ಜಾನ್ವಿ- ಆರೋಗ್ಯದ ಬಗ್ಗೆ ಮಾಹಿತಿ ಕೊಟ್ಟ ಬೋನಿ ಕಪೂರ್

Public TV
1 Min Read

ಬಾಲಿವುಡ್ ಬೆಡಗಿ ಜಾನ್ವಿ ಕಪೂರ್ (Janhvi Kapoor) ಇದೀಗ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಫುಡ್ ಪಾಯಿಸನ್‌ನಿಂದ ಆಸ್ಪತ್ರೆಗೆ ದಾಖಲಾಗಿದ್ದ ನಟಿಯ ಆರೋಗ್ಯ ಈಗ ಹೇಗಿದೆ ಎಂದು ಬೋನಿ ಕಪೂರ್ (Boney Kapoor) ಮಾತನಾಡಿದ್ದಾರೆ. ಇದನ್ನೂ ಓದಿ:ಡಿವೋರ್ಸ್ ಬಗ್ಗೆ ಕೊಡಗಿನ ಬೆಡಗಿ ವರ್ಷಾ ಬೊಳ್ಳಮ್ಮ ಶಾಕಿಂಗ್ ಕಾಮೆಂಟ್

ಫುಡ್ ಪಾಯಿಸನ್‌ನಿಂದ ಜಾನ್ವಿ ಕಪೂರ್ ಜು.18ರಂದು ಮುಂಬೈನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಿರಂತರ ಕೆಲಸ ಮತ್ತು ಓಡಾಟದಿಂದ ಧಣಿದಿದ್ದ ನಟಿ ಆರೋಗ್ಯ ಹದಗೆಟ್ಟಿತ್ತು. ಅವರಿಗೆ 3 ದಿನಗಳ ಕಾಲ ವಿಶ್ರಾಂತಿ ಪಡೆಯಲು ವೈದ್ಯರು ಸೂಚಿಸಿದ್ದರು. ಈಗ ಆರೋಗ್ಯದಲ್ಲಿ ಚೇತರಿಕೆ ಕಂಡಿರುವ ಹಿನ್ನಲೆ ಜು.20ರಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

ಈ ಬೆನ್ನಲ್ಲೇ ಮಾಧ್ಯಮಕ್ಕೆ ಪ್ರತಿಕ್ರಿಯಸಿದ ತಂದೆ ಬೋನಿ ಕಪೂರ್, ಈಗ ಮಗಳು ಆರಾಮ ಆಗಿದ್ದಾಳೆ. ಆರೋಗ್ಯ ಈಗ ಸುಧಾರಿಸಿದೆ, ಮಗಳು ಡಿಸ್ಚಾರ್ಜ್ ಆಗಿದ್ದಾಳೆ ಎಂದು ತಿಳಿಸಿದ್ದಾರೆ. ಅಂದಹಾಗೆ, ಆಸ್ಪತ್ರೆಯಲ್ಲಿದ್ದ ವೇಳೆ ತಂಗಿ ಖುಷಿ ಕಪೂರ್ ಮತ್ತು ಜಾನ್ವಿ ಬಾಯ್‌ಫ್ರೆಂಡ್ ಶಿಖರ್ ಅವರನ್ನು ನೋಡಿಕೊಂಡಿದ್ದಾರೆ.

Share This Article